AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟೀಮ್’ ಇಂಡಿಯಾಗೆ ಇಂದು 4 ಪಂದ್ಯಗಳು..!

ಭಾರತೀಯ ಕ್ರೀಡಾ ಇತಿಹಾಸದಲ್ಲೇ ಇಂತಹದೊಂದು ಅಪರೂಪದ ಮತ್ತು ರೋಮಾಂಚನಕಾರಿ ದಿನ ಈ ಹಿಂದೆ ಎಂದೂ ಬಂದಿರಲಿಕ್ಕಿಲ್ಲ. ಹೌದು, ಇಂದು (ಅಕ್ಟೋಬರ್ 3, 2026) ಭಾರತೀಯ ಕ್ರೀಡಾ ಪ್ರೇಮಿಗಳಿಗೆ ನಿಜಕ್ಕೂ 'ಶುಭ ಶನಿವಾರ'. ಏಕೆಂದರೆ ಇಂದು 'ಟೀಮ್ ಇಂಡಿಯಾ' ಒಟ್ಟು 4 ಮಹತ್ವದ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿದೆ. ಈ ಪಂದ್ಯಗಳ ವಿವರ ಈ ಕೆಳಗಿನಂತಿವೆ...

'ಟೀಮ್' ಇಂಡಿಯಾಗೆ ಇಂದು 4 ಪಂದ್ಯಗಳು..!
Team India Image Credit source: GettyImages
ಝಾಹಿರ್ ಯೂಸುಫ್
|

Updated on:Oct 03, 2026 | 7:47 AM

Share

ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇಂದು (ಅಕ್ಟೋಬರ್ 3, 2026) ನಿಜಕ್ಕೂ ‘ಶುಭ ಶನಿವಾರ’. ಏಕೆಂದರೆ ಇಂದು ‘ಟೀಮ್ ಇಂಡಿಯಾ‘ ಒಟ್ಟು 4 ಮಹತ್ವದ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿದೆ. ಈ ನಾಲ್ಕೂ ಪಂದ್ಯಗಳು ಬೇರೆ ಬೇರೆ ಕ್ರೀಡೆ ಹಾಗೂ ಸರಣಿಗಳಿಗೆ ಸೇರಿವೆ. ಒಂದೆಡೆ ಕ್ರಿಕೆಟ್‌ನಲ್ಲಿ ಭಾರತದ ಎರಡು ಪ್ರತ್ಯೇಕ ತಂಡಗಳು ವಿಭಿನ್ನ ದೇಶಗಳಲ್ಲಿ ಮೈದಾನಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ಹಾಕಿ ಹಾಗೂ ಫುಟ್‌ಬಾಲ್‌ನಲ್ಲೂ ಟೀಮ್ ಇಂಡಿಯಾ ಬಲಿಷ್ಠ ಎದುರಾಳಿಗಳ ವಿರುದ್ಧ ಹೋರಾಡಲಿದೆ. ಈ ಪಂದ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಭಾರತ vs ಪಾಕಿಸ್ತಾನ್:

ಜಪಾನ್‌ನ ನಿಶ್ಶಿನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಪುರುಷರ ಟಿ20 ಕ್ರಿಕೆಟ್‌ನ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುತ್ತಿವೆ. ಇಡೀ ವಿಶ್ವದ ಕಣ್ಣು ಈ ಹೈ-ವೋಲ್ಟೇಜ್ ಪಂದ್ಯದ ಮೇಲಿದ್ದು, ಭಾರತ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ನೆಚ್ಚಿನ ತಂಡವಾಗಿದೆ. ಬೆಳಗ್ಗೆ 10:00 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಭಾರತ vs ಮಲೇಷ್ಯಾ:

ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಮಲೇಷ್ಯಾ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಕೇವಲ ಚಿನ್ನದ ಪದಕಕ್ಕಾಗಿ ಮಾತ್ರವಲ್ಲದೆ, ಇಲ್ಲಿ ಗೆಲ್ಲುವ ತಂಡಕ್ಕೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಸಿಗುವುದರಿಂದ ಭಾರತಕ್ಕೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯಕ್ಕೆ ಚಾಲನೆ ಸಿಗಲಿದೆ.

ಭಾರತ vs ವೆಸ್ಟ್ ಇಂಡೀಸ್:

ಮತ್ತೊಂದೆಡೆ, ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ.

ಭಾರತ vs ಬ್ರೆಝಿಲ್:

ಭಾರತ ಮತ್ತು ಬ್ರೆಝಿಲ್ ನಡುವಿನ ಐತಿಹಾಸಿಕ ಅಂತಾರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯ ಇಂದೇ (ಶನಿವಾರ, ಅಕ್ಟೋಬರ್ 3, 2026) ನಡೆಯಲಿದೆ. ಕೋಲ್ಕತ್ತಾದ ಪ್ರಸಿದ್ಧ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 7:30ಕ್ಕೆ (IST) ಶುರುವಾಗಲಿದೆ.

ಇದನ್ನೂ ಓದಿ: ಜೈಸ್ವಾಲ್ vs ಅಸಿತ ಜಗಳದ ಅಸಲಿ ಕಾರಣ ಬಿಚ್ಚಿಟ್ಟ ಟೀಮ್ ಇಂಡಿಯಾ ಆಟಗಾರ

ಒಟ್ಟಾರೆಯಾ,  ಒಂದೇ ದಿನ ಕ್ರಿಕೆಟ್‌ನ ಎರಡು ಹೈ-ವೋಲ್ಟೇಜ್ ಪಂದ್ಯಗಳು, ಒಲಿಂಪಿಕ್ಸ್ ಅರ್ಹತೆ ನಿರ್ಧರಿಸುವ ಹಾಕಿ ಫೈನಲ್ ಮತ್ತು ಬ್ರೆಝಿಲ್ ವಿರುದ್ಧದ ಐತಿಹಾಸಿಕ ಫುಟ್‌ಬಾಲ್ ಸಮರ—ಇಂತಹದೊಂದು ಅಪರೂಪದ ಕ್ರೀಡಾ ಹಬ್ಬಕ್ಕೆ ಭಾರತ ಸಾಕ್ಷಿಯಾಗುತ್ತಿರುವುದು ಇದೇ ಮೊದಲು. ಇಂದು ಕಣಕ್ಕಿಳಿಯಲಿರುವ ಭಾರತದ ಎಲ್ಲಾ ನಾಲ್ಕೂ ತಂಡಗಳು ವಿಜಯಶಾಲಿಯಾಗಿ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿ ಎಂಬುದೇ ಕೋಟ್ಯಂತರ ಕ್ರೀಡಾ ಪ್ರೇಮಿಗಳ ಆಶಯ.

Published On - 7:39 am, Sat, 3 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್