ಮೈದುಂಬಿ ಹರಿಯುತ್ತಿದೆ ಮುತ್ಯಾಲಮಡು ಫಾಲ್ಸ್: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಜಲಧಾರೆ
ಬೆಂಗಳೂರು ಸಮೀಪದ ಮುತ್ಯಾಲಮಡು ಜಲಪಾತವು ಮಳೆಗಾಲದಲ್ಲಿ ಹೊಸ ಜೀವಕಳೆ ಪಡೆದಿದೆ. ನೂರಾರು ಅಡಿ ಎತ್ತರದಿಂದ ಜಲಧಾರೆ ಧುಮ್ಮಿಕ್ಕುತ್ತಿದೆ. ಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಾರಾಂತ್ಯದ ಪ್ರವಾಸಕ್ಕೆ ಸೂಕ್ತ ತಾಣವಾಗಿದೆ. ಈ ನೈಸರ್ಗಿಕ ವೈಭವವನ್ನು ಆನಂದಿಸಲು ಬೆಂಗಳೂರು ಮತ್ತು ತಮಿಳುನಾಡಿನಿಂದ ಪ್ರವಾಸಿಗರು ಹರಿದುಬರುತ್ತಾರೆ.
Updated on: Oct 01, 2026 | 10:31 PM

ಮಳೆ ಸುರಿದರೆ ಸಾಕು ಮುತ್ಯಾಲಮಡು ಜಲಪಾತಕ್ಕೆ ಜೀವಕಳೆ ಬರುತ್ತೆ. ನೂರಾರು ಅಡಿ ಎತ್ತರದ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆಯೂ ಮುತ್ತಿನ ಹನಿಗಳಂತೆ ಕಂಗೊಳಿಸುತ್ತಿದೆ. ಹಸಿರಿನ ನಡುವೆ ಮುತ್ಯಾಲಮಡು ಜಲಪಾತ ಮೈದುಂಬಿ ಹರಿಯುತ್ತಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪವಿರುವ ಮುತ್ಯಾಲಮಡು ಫಾಲ್ಸ್‌ಗೆ ಹೊಸ ರೂಪ ಬಂದಿದೆ. ಬೆಟ್ಟ-ಗುಡ್ಡಗಳ ನಡುವೆ ಹಾಲಿನಂತೆ ಹರಿಯುತ್ತಿರುವ ಜಲಧಾರೆ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಪ್ರಕೃತಿಯ ಮಡಿಲಲ್ಲಿ ಕಣ್ಮನ ಸೆಳೆಯುತ್ತಿರುವ ಈ ದೃಶ್ಯ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

ಸುಮಾರು ನೂರಾರು ಅಡಿ ಮೇಲಿಂದ ಧುಮ್ಮಿಕ್ಕುವ ನೀರೇ ಮುತ್ಯಾಲಮಡು ಫಾಲ್ಸ್‌ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಮರ-ಗಿಡಗಳ ನಡುವೆ ಬೆಟ್ಟದ ಮೇಲಿಂದ ಭೋರ್ಗರೆದು ಧುಮ್ಮಿಕ್ಕುವ ಜಲಪಾತದ ವೈಯಾರಕ್ಕೆ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ.

ಬೇಸಿಗೆಯಲ್ಲಿ ಸೊರಗಿದ್ದ ಮುತ್ಯಾಲಮಡು ಜಲಪಾತ ಮಳೆಗಾಲದಲ್ಲಿ ಹೊಸ ಜೀವಕಳೆ ಬಂದಿದೆ. ಧಾರಾಕಾರ ಮಳೆಗೆ ಮತ್ತಷ್ಟು ರಭಸವಾಗಿ ಹರಿಯುತ್ತಿದೆ. ಧುಮ್ಮಿಕ್ಕುವ ನೀರಿನ ಸದ್ದಿನ ಜೊತೆಗೆ ತಂಪಾದ ತಂಗಾಳಿ ಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡ ಸೇರಿ ಮುತ್ಯಾಲಮಡು ಫಾಲ್ಸ್ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ.

ಮಳೆ ಹೆಚ್ಚಾದಂತೆ ಮುತ್ಯಾಲಮಡು ಫಾಲ್ಸ್‌ನ ಅಂದ ಕೂಡ ಹೆಚ್ಚುತ್ತಿದೆ. ಪ್ರಕೃತಿಯ ಈ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಬೆಂಗಳೂರು, ತಮಿಳುನಾಡು ಸೇರಿದಂತೆ ಹಲವೆಡೆಗಳಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ನೀವು ಒಮ್ಮೆ ಮುತ್ಯಾಲಮಡು ಪ್ರಕೃತಿಯ ಸೌಂದರ್ಯವನ್ನು ಎಂಜಾಯ್ ಮಾಡಲು ಇದು ಬೆಸ್ಟ್ ಟೈಮ್.
ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .
Read More



