AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ

Unity Small Finance Bank offers upto 7pc interest rates for savings accounts: ಮುಂಬೈ ಮೂಲದ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳಿಗೆ ಶೇ. 7ರವರೆಗೂ ಬಡ್ಡಿ ನೀಡುತ್ತಿದೆ. ಸೇವಿಂಗ್ಸ್ ಅಕೌಂಟ್​ನಲ್ಲಿ 5 ಲಕ್ಷ ರೂ ಮೇಲ್ಪಟ್ಟು ಇರುವ ಬ್ಯಾಲನ್ಸ್​ಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಈ ಬ್ಯಾಂಕಲ್ಲಿ ಫಿಕ್ಸೆಡ್ ಡೆಪಾಸಿಟ್ ದರಗಳು ಹೆಚ್ಚಿವೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 8.5 ಬಡ್ಡಿ ನೀಡಲಾಗುತ್ತದೆ.

ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 05, 2026 | 4:07 PM

Share

ಮುಖ್ಯಾಂಶಗಳು

  • ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳಿಗೆ ಶೇ. 7 ಬಡ್ಡಿ ನೀಡುತ್ತಿದೆ.
  • ಸೇವಿಂಗ್ಸ್ ಅಕೌಂಟ್​ನಲ್ಲಿ 5 ಲಕ್ಷ ರೂ ಮೇಲ್ಪಟ್ಟು ಇರುವ ಬ್ಯಾಲನ್ಸ್​ಗೆ ಗರಿಷ್ಠ ಬಡ್ಡಿ ಸಿಗುತ್ತದೆ.
  • ಈ ಬ್ಯಾಂಕಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಶೇ. 8.5 ಬಡ್ಡಿ ನೀಡಲಾಗುತ್ತದೆ.

ಬೆಂಗಳೂರು, ಆಗಸ್ಟ್ 5: ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Unity Small Finance Bank) ತನ್ನ ಉಳಿತಾಯ ಖಾತೆಗಳ (Savings Account) ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಗರಿಷ್ಠ ಶೇಕಡಾ 7.00 ರವರೆಗೆ ಬಡ್ಡಿದರವನ್ನು ನೀಡುತ್ತಿದೆ. ಹೊಸ ಬಡ್ಡಿದರಗಳು ಆಗಸ್ಟ್ 1 ರಿಂದಲೇ ಅನ್ವಯಕ್ಕೆ ಬಂದಿವೆ. ಈ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್​ಗಳಿಗೂ ಬೆಸ್ಟ್ ರೇಟ್ಸ್ ಆಫರ್ ಮಾಡುತ್ತಿದೆ. ಇಲ್ಲಿಯ ಸ್ಥಿರ ಠೇವಣಿಗಳಿಗೆ (Fixed Deposit) ಶೇ. 8.5ರವರೆಗೂ ಬಡ್ಡಿದರ ಇದೆ. ದೇಶಾದ್ಯಂತ ಹೆಚ್ಚಿನ ರಾಜ್ಯಗಳಲ್ಲಿ ಈ ಬ್ಯಾಂಕ್​ನ ಶಾಖೆಗಳಿವೆ.

ಬ್ಯಾಂಕ್ ತನ್ನ ಉಳಿತಾಯ ಖಾತೆಯಲ್ಲಿ ಇರಿಸಲಾಗುವ ಬ್ಯಾಲೆನ್ಸ್ (ಹಣದ ಮೊತ್ತ) ಆಧಾರದ ಮೇಲೆ ಈ ಕೆಳಗಿನಂತೆ ಬಡ್ಡಿದರಗಳನ್ನು ನಿಗದಿಪಡಿಸಿದೆ. ಪರಿಷ್ಕೃತ ಉಳಿತಾಯ ಖಾತೆ ಬಡ್ಡಿದರಗಳ ವಿವರ ಇಂತಿದೆ:

  • ₹1 ಲಕ್ಷದವರೆಗೆ: 4.50% ಬಡ್ಡಿದರ
  • ₹1 ಲಕ್ಷದಿಂದ ₹5 ಲಕ್ಷದವರೆಗೆ: 6.00%
  • ₹5 ಲಕ್ಷಕ್ಕಿಂತ ಹೆಚ್ಚು: 7.00%

ಬ್ಯಾಂಕ್ ಗ್ರಾಹಕರ ಖಾತೆಗೆ ಪ್ರತಿ ತಿಂಗಳು ಬಡ್ಡಿಯನ್ನು ಜಮಾ (Monthly Interest Credit) ಮಾಡಲಿದ್ದು, ಗ್ರಾಹಕರು ತಮ್ಮ ಉಳಿತಾಯದಿಂದ ಉತ್ತಮ ಲಾಭ ಪಡೆಯಲು ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

FD ಮೇಲಿನ ಬಡ್ಡಿದರಗಳು: ಹಿರಿಯ ನಾಗರಿಕರಿಗೆ ವಿಶೇಷ ಆಫರ್

ಯುನಿಟಿ ಬ್ಯಾಂಕ್ ತನ್ನ 501 ದಿನಗಳ ವಿಶೇಷ ಸ್ಥಿರ ಠೇವಣಿ (Fixed Deposit) ಪ್ಲಾನ್​ನಲ್ಲಿ ಹಿರಿಯ ನಾಗರಿಕರಿಗೆ ಶೇ. 8.50 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಇದೇ ಅವಧಿಗೆ ಶೇ. 8.00 ರಷ್ಟು ಬಡ್ಡಿ ಸಿಗಲಿದೆ. 501 ದಿನ ಎಂದರೆ ಸುಮಾರು 16-17 ತಿಂಗಳ ಅವಧಿಯದ್ದು.

ಇತರ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳ ಎಫ್‌ಡಿ (FD) ಬಡ್ಡಿದರಗಳ ಹೋಲಿಕೆ

ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುತ್ತಿರುವ ಇತರ ಬ್ಯಾಂಕ್‌ಗಳ ವಿವರ ಇಲ್ಲಿದೆ:

  • ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Utkarsh SFB): 666 ದಿನಗಳ FD ಮೇಲೆ ಸಾಮಾನ್ಯ ನಾಗರಿಕರಿಗೆ 8.10% ಮತ್ತು ಹಿರಿಯ ನಾಗರಿಕರಿಗೆ 8.25% ಬಡ್ಡಿ.
  • ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Ujjivan SFB): 2 ವರ್ಷಗಳ ಅವಧಿಗೆ ಹಿರಿಯ ನಾಗರಿಕರಿಗೆ 8.30% ವರೆಗೆ ಬಡ್ಡಿ.
  • ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Equitas SFB): 3 ವರ್ಷ 1 ದಿನದ ಅವಧಿಗೆ ಹಿರಿಯ ನಾಗರಿಕರಿಗೆ 8.50% ಬಡ್ಡಿ.

ಇಲ್ಲಿ ಯುನಿಟಿ ಮಾತ್ರವಲ್ಲ, ಇತರ ಹಲವು ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳು ಸೇವಿಂಗ್ಸ್ ಅಕೌಂಟ್​ಗೆ 7% ಕ್ಕಿಂತ ಹೆಚ್ಚು ಬಡ್ಡಿ ಆಫರ್ ಮಾಡುತ್ತಿವೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ಕೋಟಿ ರೂ ಮೇಲ್ಪಟ್ಟ ಹಣಕ್ಕೆ 7.75% ಬಡ್ಡಿ ನೀಡುತ್ತದೆ. 10 ಲಕ್ಷ ರೂ ಮೇಲ್ಪಟ್ಟ ಹಣಕ್ಕೆ 7.50% ಬಡ್ಡಿ ನೀಡುತ್ತದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಹಣ ಫಿಕ್ಸೆಡ್ ಡೆಪಾಸಿಟ್ ಇಡಬಹುದು?

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 50 ಲಕ್ಷ ರೂ ಮೇಲ್ಪಟ್ಟ ಹಣಕ್ಕೆ ಶೇ. 7.50 ಬಡ್ಡಿ, ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಶೇ. 7.25 ಬಡ್ಡಿ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಯುನಿಟಿ ಬ್ಯಾಂಕ್ ಶಾಖೆಗಳು

ಮುಂಬೈನಲ್ಲಿ ಮುಖ್ಯ ಕಚೇರಿ ಇರುವ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ 14 ಶಾಖೆಗಳನ್ನು ಹೊಂದಿದೆ. ಜಯನಗರ, ಬನಶಂಕರ್ 3ನೇ ಹಂತ, ಕೋರಮಂಗಲ, ರಾಜಾಜಿನಗರ, ಜೆಪಿ ನಗರ, ವಿಜಯನಗರ, ಬಸವೇಶ್ವರನಗರ, ಕನ್ನಿಂಗ್ಹ್ಯಾಂ ರಸ್ತೆ, ಹೆಸರಘಟ್ಟ ಇತ್ಯಾದಿ ಕಡೆ ಈ ಬ್ಯಾಂಕ್ ಶಾಖೆಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Wed, 5 August 26

Follow Us
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ