AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಔಷಧ ಜಾಲ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ

ನಕಲಿ ಔಷಧ ಜಾಲ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ

ರಾಚಪ್ಪಾಜಿ ನಾಯ್ಕ್
| Edited By: |

Updated on: Sep 16, 2026 | 12:31 PM

Share

ದೊಡ್ಡೇರಿ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧಿ ಜಾಲ ಪ್ರಕರಣದಲ್ಲಿ ಕೃಪಾ ಫಾರ್ಮಾ ಪಾತ್ರದ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ಈ ನಕಲಿ ಔಷಧಿಗಳು ರೋಗಿಗಳ ಜೀವಕ್ಕೆ ಅಪಾಯಕಾರಿಯಾಗಿದ್ದು, ಚಿಕಿತ್ಸೆಯನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಬಹುದು. ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೂ ನಕಲಿ ಔಷಧಿ ಸರಬರಾಜಾಗಿರುವ ಶಂಕೆ ವ್ಯಕ್ತವಾಗಿದ್ದು, ಎಸ್ಐಟಿ ಅವುಗಳ ಪಾತ್ರದ ಬಗ್ಗೆಯೂ ಪರಿಶೀಲಿಸುತ್ತಿದೆ.

ಬೆಂಗಳೂರು, ಸೆಪ್ಟೆಂಬರ್​​ 16: ದೊಡ್ಡೇರಿ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾದ ಬೃಹತ್ ನಕಲಿ ಔಷಧ ಜಾಲ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೃಪಾ ಫಾರ್ಮಾ ಸಂಸ್ಥೆಯಿಂದ ನಡೆದಿರುವ ವಾರ್ಷಿಕ ದಾಖಲೆಗಳ ಪರಿಶೀಲನೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಚುರುಕುಗೊಳಿಸಿದೆ. ಕೃಪಾ ಫಾರ್ಮಾ ಯಾವ ರೋಗಿಗಳಿಗೆ ಔಷಧಿಗಳನ್ನು ಪೂರೈಸಿತ್ತು ಮತ್ತು ಇದರಿಂದ ಯಾವುದೇ ಸಾವು ಸಂಭವಿಸಿದೆಯೇ ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಕಲಿ ಔಷಧಿಗಳು ರೋಗ ನಿವಾರಣೆ ಮಾಡುವ ಬದಲು ರೋಗವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಇದು ರೋಗಿಗಳನ್ನು ಸಾವಿನ ಅಂಚಿಗೆ ತಳ್ಳುವ ಸಾಧ್ಯತೆಯೂ ಇದೆ. ಕೃಪಾ ಫಾರ್ಮಾದಿಂದ ಔಷಧಿಗಳನ್ನು ಖರೀದಿಸಿದವರ ವಿವರಗಳನ್ನು ಎಸ್ಐಟಿ ಪರಿಶೀಲಿಸುತ್ತಿದ್ದು, ಬಿಲ್‌ಗಳ ವಹಿವಾಟುಗಳನ್ನು ಸಹ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಜಾಲವು ಬೇರೆ ರಾಜ್ಯಗಳಿಂದ ನಕಲಿ ಔಷಧಿಗಳನ್ನು ತರಿಸಿ ವಿತರಿಸುತ್ತಿತ್ತು. ಪ್ರಮುಖ ಆರೋಪಿ ವೀರೇಶ್‌ನ ವಿಚಾರಣೆ ನಡೆಸಿದಾಗ ವಿದೇಶಗಳಿಗೂ ಲಿಂಕ್ ಇರುವುದು ಬೆಳಕಿಗೆ ಬಂದಿತ್ತು. ಕೆಲವು ಪ್ರತಿಷ್ಠಿತ ಆಸ್ಪತ್ರೆಗಳಿಗೂ ಕೃಪಾ ಫಾರ್ಮಾದಿಂದ ನಕಲಿ ಔಷಧಿಗಳು ಪೂರೈಕೆಯಾಗಿರುವ ಸಾಧ್ಯತೆಯಿದ್ದು, ಹೀಗಾಗಿ ಅವುಗಳ ಪಾತ್ರದ ಕುರಿತು ಎಸ್ಐಟಿ ತೀವ್ರ ತನಿಖೆ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us