AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್

ಹಿರಿಯ ಜಿಲ್ಲಾ ವರದಿಗಾರ - TV9 Kannada

rachappaji.naik@tv9.com

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ

ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ

ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ಗಳ ಮೇಲೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತಡರಾತ್ರಿ ದಾಳಿ ನಡೆಸಲಾಗಿದೆ. ಪಬ್‌ಗಳು ನಿಗದಿತ ಸಮಯಕ್ಕೆ ಮುಚ್ಚುತ್ತಿವೆಯೇ, ಅಪ್ರಾಪ್ತರಿಗೆ ಮದ್ಯ ನೀಡಲಾಗುತ್ತಿದೆಯೇ ಮತ್ತು ನಿಯಮ ಉಲ್ಲಂಘನೆ ಆಗಿದೆಯೇ ಎಂಬುದನ್ನು ಪರಿಶೀಲಿಸಲು ಸಿಸಿಬಿ ಅಧಿಕಾರಿಗಳು ಸಹ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

KPSC ಕರ್ಮಕಾಂಡ: ಕೇಸ್​​ನಲ್ಲಿ ಕೇಳಿಬಂತು ಹೊಸ ಹೆಸರು, ಆತ ಯಾರೆಂಬುದೇ ಇನ್ನೂ ಸಸ್ಪೆನ್ಸ್​​!

KPSC ಕರ್ಮಕಾಂಡ: ಕೇಸ್​​ನಲ್ಲಿ ಕೇಳಿಬಂತು ಹೊಸ ಹೆಸರು, ಆತ ಯಾರೆಂಬುದೇ ಇನ್ನೂ ಸಸ್ಪೆನ್ಸ್​​!

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ‘ದುಗ್ಗಪ್ಪ’ ಎಂಬ ಹೊಸ ಹೆಸರು ಕೇಳಿಬಂದಿದ್ದು, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪಿಎ ಹಾಗೂ ಆತನ ನಡುವಿನ ವಾಟ್ಸಾಪ್ ಚಾಟ್‌ಗಳನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮತ್ತೊಂದೆಡೆ  ಶಿವಶಂಕರಪ್ಪ ಮತ್ತು ಗೀತಾ ನಡುವೆ ನಡೆದಿದ್ದ ಹಣದ ವ್ಯವಹಾರದ ಬಗ್ಗೆಯೂ ತನಿಖೆ ವೇಳೆ ಗೊತ್ತಾಗಿದೆ.

KPSC ನೇಮಕಾತಿ ಹಗರಣ: ಇಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಿಗೆ

KPSC ನೇಮಕಾತಿ ಹಗರಣ: ಇಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಿಗೆ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ಮುಂದುವರಿದಿದ್ದು, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಡೀಲಿಂಗ್ ಬಯಲಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಇಬ್ಬರ ಬಂಧನ ಹಾಗೂ ತನಿಖೆಯಲ್ಲಿ ಏನೇನು ಮಾಹಿತಿ ಸಿಕ್ಕಿದೆ ಎನ್ನುವುದನ್ನು ಮಾಹಿತಿ ಹಂಚಿಕೊಂಡಿದೆ.

ಅಂತ್ಯಕ್ರಿಯೆ ಸ್ಥಳದಿಂದ ಶವ ವಶಕ್ಕೆ ಪಡೆದ ಪೊಲೀಸರು: ಮಂಚದಿಂದ ಬಿದ್ದು ಸತ್ತಿದ್ಳು ಅಂದಿದ್ದ ಮಗ; ರಿಪೋರ್ಟ್‌ನಿಂದ ಕೊಲೆ ರಹಸ್ಯ ರಿವೀಲ್

ಅಂತ್ಯಕ್ರಿಯೆ ಸ್ಥಳದಿಂದ ಶವ ವಶಕ್ಕೆ ಪಡೆದ ಪೊಲೀಸರು: ಮಂಚದಿಂದ ಬಿದ್ದು ಸತ್ತಿದ್ಳು ಅಂದಿದ್ದ ಮಗ; ರಿಪೋರ್ಟ್‌ನಿಂದ ಕೊಲೆ ರಹಸ್ಯ ರಿವೀಲ್

ಬೆಂಗಳೂರಿನ ಕಾಡುಗೋಡಿಯಲ್ಲಿ ಮಗನೇ ತಾಯಿಯನ್ನು ಕೊಲೆ ಮಾಡಿ, ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ನಂಬಿಸಲು ಯತ್ನಿಸಿದ್ದ. ಆದರೆ ಪೊಲೀಸರು ಶವ ಸಂಸ್ಕಾರ ತಡೆದು, ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಸತ್ಯ ಬಯಲಾಗಿದೆ. ತಾಯಿ ಮದ್ಯಪಾನ, ಆಭರಣದ ವಿಷಯಕ್ಕೆ ಜಗಳ ಮಾಡುತ್ತಿದ್ದಳು ಎಂಬುದು ಕೊಲೆಗೆ ಕಾರಣವೆಂದು ಆರೋಪಿ ಮಗ ಒಪ್ಪಿಕೊಂಡಿದ್ದಾನೆ. ಕಾಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ಆರ್​​ಎಂಯು ಸ್ಫೋಟದ ರೂವಾರಿ ಇಲಿ: ಬ್ಲಾಸ್ಟ್​ ಅಸಲಿಯತ್ತು ಬಯಲು

ಬೆಂಗಳೂರಲ್ಲಿ ಆರ್​​ಎಂಯು ಸ್ಫೋಟದ ರೂವಾರಿ ಇಲಿ: ಬ್ಲಾಸ್ಟ್​ ಅಸಲಿಯತ್ತು ಬಯಲು

ಬೆಂಗಳೂರಿನ ಯಲಹಂಕದ ಬಾಗಲೂರು ಕ್ರಾಸ್ ಬಳಿಯ ಅಮೇಜಾನ್ ಕಚೇರಿ ಸಮೀಪ ರಿಮೋಟ್ ಮಾನಿಟರಿಂಗ್ ಯೂನಿಟ್ ಬಾಕ್ಸ್​ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಸ್ಫೋಟಕ್ಕೆ ಕಾರಣವೇನು ಎನ್ನುವುದು ಇದೀಗ ಬಯಲಾಗಿದೆ.

ಸಜಾ ಕೈದಿ ಬಿಡುಗಡೆಗೆ ಪತ್ನಿ ದೇಹದ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್

ಸಜಾ ಕೈದಿ ಬಿಡುಗಡೆಗೆ ಪತ್ನಿ ದೇಹದ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್

ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಕೈದಿಯನ್ನು ಬಿಡುಗಡೆ ಮಾಡಿಸಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮಾಜಿ ಡಿಐಜಿ ಸೋಮಶೇಖರ್ ಅವರನ್ನು ಬಂಧಿಸಲಾಗಿದ್ದು, ತನಿಖೆಯಲ್ಲಿ ಡಿಐಜಿ ಸೋಮಶೇಖರ್ ಕಾಮಕಾಂಡ ಬಟಾಬಯಲಾಗಿದೆ. ಹೌದು...ಆರೋಪಿಗಳಾದ ಶ್ರೀಕಾಂತ್ ಹಾಗೂ ಡಿಐಜಿ ಸೋಮಶೇಖರ್‌ ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಸುಪ್ರೀಂಕೋರ್ಟ್‌ನ ಆದೇಶ ನಕಲು ಮಾಡಿ ಕೈದಿ ಎ.ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ.

ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್: ಬೆಂಗಳೂರಿನ ಹಲವೆಡೆ ದಾಳಿ

ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್: ಬೆಂಗಳೂರಿನ ಹಲವೆಡೆ ದಾಳಿ

ಬೆಂಗಳೂರು ಸೇರಿ ಹಲವೆಡೆ ನಕಲಿ ಔಷಧ ದಂದೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಕಿಂಗ್‌ಪಿನ್‌ಗಳ ಮಾಹಿತಿ ಆಧರಿಸಿ, ನಕಲಿ ಔಷಧಿಗಳನ್ನು ವಿತರಿಸಿದ ರಾಜರಾಜೇಶ್ವರಿ ನಗರದ ಆರ್.ಆರ್.ಫಾರ್ಮಾ, ಚಾಮರಾಜಪೇಟೆಯ ಮೆಡಿ 365 ಎಲ್​ಎಲ್​​ಪಿ ಫಾರ್ಮಾ, ತಲಘಟ್ಟಪುರದ ಪಾಟೀಲ್ ಫಾರ್ಮಾ ಸೇರಿದಂತೆ ಹಲವು ಫಾರ್ಮಾಸಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದ್ದು, ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ ಕೇಸ್​​: ಪತ್ನಿಗೆ ಕೈದಿ ಕೈಕೊಟ್ಟಿದ್ದರಿಂದ ಪ್ರಕರಣ ಬಹಿರಂಗ; ಡಿಐಜಿ ಕಳ್ಳಾಟವೂ ಪತ್ತೆ

ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ ಕೇಸ್​​: ಪತ್ನಿಗೆ ಕೈದಿ ಕೈಕೊಟ್ಟಿದ್ದರಿಂದ ಪ್ರಕರಣ ಬಹಿರಂಗ; ಡಿಐಜಿ ಕಳ್ಳಾಟವೂ ಪತ್ತೆ

ಡಿಐಜಿ ಸೋಮಶೇಖರ್ ನಕಲಿ ದಾಖಲೆ ಸೃಷ್ಟಿಸಿ, ಸಜಾ ಕೈದಿಯೊಬ್ಬನ ಬಿಡುಗಡೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದ ಸೋಮಶೇಖರ್, ಕೈದಿ ಶಂಕರ್‌ನ ಪತ್ನಿಯನ್ನು ಲೈಂಗಿಕವಾಗಿ ಶೋಷಿಸಿ, ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಬಿಡುಗಡೆ ಮಾಡಿಸಿದ್ದರು. ಅನಾಮಧೇಯ ಪತ್ರದ ಮೂಲಕ ಈ ಕರ್ಮಕಾಂಡ ಬಯಲಾಗಿದ್ದು, ಸೋಮಶೇಖರ್, ಶಂಕರ್ ಮತ್ತು ಶ್ರೀಕಾಂತ್ ಬಂಧನವಾಗಿದೆ.

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕರ್ನಾಟಕ ಡಿಐಜಿ ಸೋಮಶೇಖರ್ ಅರೆಸ್ಟ್

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕರ್ನಾಟಕ ಡಿಐಜಿ ಸೋಮಶೇಖರ್ ಅರೆಸ್ಟ್

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಪ್ರಕರಣ ಮುನ್ನೆಲೆಗೆ ಬಂದಿದ್ದು, ಬಂಧಿಖಾನೆ ಡಿಐಜಿ ಸೋಮಶೇಖರ್ ಅವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನ ತೀವ್ರ ಸ್ವರೂಪಗೊಳಿಸಿರುವ ಪೊಲೀಸರು, ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಸೋಮಶೇಖರ್ ಅವರ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ಸಂಕಷ್ಟ ಸಾಧ್ಯತೆ

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ಸಂಕಷ್ಟ ಸಾಧ್ಯತೆ

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ವಿಚಾರಣೆ ಎದುರಾಗುವ ಸಾಧ್ಯತೆಯಿದೆ. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸುತ್ತಿದ್ದ ವಿಚಾರ ವಿಚಾರಣೆ ವೇಳೆ ಬಹಿರಂಗವಾಗಿದ್ದು, ಅನೇಕ ವಿಚಾರಗಳನ್ನು IAS ಅಧಿಕಾರಿ ಜ್ಞಾನೇಂದ್ರ ಕುಮಾರ್​​ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಕಗ್ಗದಾಸಪುರದಲ್ಲಿ 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಕಗ್ಗದಾಸಪುರದಲ್ಲಿ 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ಗ್ಯಾಸ್ ರೀಫಿಲ್ಲಿಂಗ್ ವೇಳೆ ನಾಲ್ಕು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಒಂದು ಸಿಲಿಂಡರ್ ಹಾರಿ ಸಮೀಪದ ಶಾಲೆಯ ಕಿಟಕಿಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿದ್ದು, ತನಿಖೆ ನಡೆಯುತ್ತಿದೆ.

ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ

ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮಟನ್ ಶಾಪ್‌ವೊಂದರಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜುನೈದ್ ಪಾಷಾ ಮತ್ತು ರಿಜ್ವಾನ್ ಬೇಗ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 10 ಲಕ್ಷದ 60 ಸಾವಿರ ಮೌಲ್ಯದ 106 ಗ್ರಾಂ ಎಂಡಿಎಂಎ, ನಗದು, ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.