AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​​: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ?

ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​​: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ?

ಮಂಜುನಾಥ ಎಚ್​. ವಿ.
| Edited By: |

Updated on: Aug 10, 2026 | 12:47 PM

Share

ಶಿವಗಂಗೆಯಲ್ಲಿ ನಾಪತ್ತೆಯಾದ ಹಣಕಾಸು ಕಂಪನಿ ಉದ್ಯೋಗಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹೊಸ ತಿರುವು ಲಭಿಸಿದೆ. ಅವರ ಲ್ಯಾಪ್‌ಟಾಪ್ ಪರಿಶೀಲಿಸಿದಾಗ, ಅದ್ವೈತ್ ಆತ್ಮಹತ್ಯೆ ಮತ್ತು ಶಾಂತಲಾ ಡ್ರಾಪ್ ಬಗ್ಗೆ ಹುಡುಕಾಟ ನಡೆಸಿದ್ದ ಸಂಗತಿ ಬಹಿರಂಗವಾಗಿದೆ. ಪೊಲೀಸರು, ಅರಣ್ಯ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್‌ನ 60ಕ್ಕೂ ಹೆಚ್ಚು ಅಧಿಕಾರಿಗಳಿಂದ ಶೋಧ ಕಾರ್ಯ ತೀವ್ರಗೊಂಡಿದೆ.

ನೆಲಮಂಗಲ, ಆಗಸ್ಟ್​​ 10: ಬೆಂಗಳೂರಿನ ಹಣಕಾಸು ಕಂಪನಿ ಉದ್ಯೋಗಿ ಅದ್ವೈತ್ ಉಪಾಧ್ಯಾಯ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ಅದ್ವೈತ್‌ರ ಕಾಡುಗೋಡಿ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್ ಪರಿಶೀಲನೆಯ ವೇಳೆ ಸ್ಪೋಟಕ ಸಂಗತಿಗಳು ಬಯಲಾಗಿವೆ. ಕೃತಕ ಬುದ್ಧಿಮತ್ತೆ (AI) ಮೂಲಕ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬಹುದು ಮತ್ತು ಶಿವಗಂಗೆಯ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟು ಸಮಯಕ್ಕೆ ಸಾವು ಸಂಭವಿಸಬಹುದು ಎಂಬ ಬಗ್ಗೆ ಅದ್ವೈತ್ ಮಾಹಿತಿ ಹುಡುಕಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ನಿಶ್ಚಿತಾರ್ಥವಾಗಿದ್ದ ಹುಡುಗಿಗೆ ಬೆಟ್ಟ ಹತ್ತುವಾಗ ಅದ್ವೈತ್ ಫೋಟೋ ಕಳುಹಿಸಿದ್ದರು. ಇದು ಅವರು ಕಳುಹಿಸಿದ ಕೊನೆಯ ಫೋಟೋ ಎಂದು ಹೇಳಲಾಗಿದೆ. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ 60ಕ್ಕೂ ಹೆಚ್ಚು ಅಧಿಕಾರಿಗಳು ಮೂರು ದಿನಗಳಿಂದ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಅದ್ವೈತ್‌ರ ಯಾವುದೇ ಕುರುಹು ಪತ್ತೆಯಾಗಿಲ್ಲ. ಪೊಲೀಸರು ಈಗ ಆತ್ಮಹತ್ಯೆಯ ಆಯಾಮದಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us