AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್ 13ರಂದು ಕರ್ನಾಟಕ ಬಂದ್ ಇರುತ್ತಾ ಇಲ್ವಾ? ವಾಟಾಳ್ ನಾಗರಾಜ್ ಹೇಳಿದ್ದಿಷ್ಟು

ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ಸಮಸ್ಯೆ ಇಲ್ಲ. ಹೀಗಾಗಿ ಬಂದ್ ಘೋಷಣೆಯಿಂದ ಕೆಲ ಸಂಘಟನೆ ಹಿಂದೆ ಸರಿಯುತ್ತಿದ್ದು, ಕರ್ನಾಟಕ ಬಂದ್​ ಬಹುತೇಕ ಡೌಟ್ ಎನ್ನಲಾಗಿತ್ತು. ಆದರೆ ‘ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಬಂದ್ ಮಾಡೇ ಮಾಡುತ್ತೆವೆ. ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ ಬೆಂಬಲವಿದೆ‘ ಎಂದು ವಾಟಾಳ್ ನಾಗರಾಜ್​ ಹೇಳಿದ್ದಾರೆ.

ಆಗಸ್ಟ್ 13ರಂದು ಕರ್ನಾಟಕ ಬಂದ್ ಇರುತ್ತಾ ಇಲ್ವಾ? ವಾಟಾಳ್ ನಾಗರಾಜ್ ಹೇಳಿದ್ದಿಷ್ಟು
ವಾಟಾಳ್ ನಾಗರಾಜ್Image Credit source: tv9 kannada
ರಾಮು, ಆನೇಕಲ್​
| Edited By: |

Updated on: Aug 10, 2026 | 4:42 PM

Share

ಬೆಂಗಳೂರು, ಆಗಸ್ಟ್​​ 10: ಕಾವೇರಿ ನದಿ ನೀರು ಹಂಚಿಕೆ ವಿವಾದ (Cauvery Dispute) ಹಿನ್ನೆಲೆ ಆಗಸ್ಟ್ 13ರಂದು ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಲವು ಸಂಘಟನೆಗಳು ಬೆಂಬಲ ಹಿಂಪಡೆಯುತ್ತಿದ್ದು, ಬಂದ್‌ ಬಹುತೇಕ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪಟ್ಟು ಸಡಿಲಿಸದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​​ (Vatal Nagaraj), ‘ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ, ಬಂದ್ ಮಾಡೇ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ ಬೆಂಬಲವಿದೆ: ವಾಟಾಳ್ ನಾಗರಾಜ್

ಬೆಂಗಳೂರಿನ ಅತ್ತಿಬೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಇಡೀ ಕರ್ನಾಟಕದ ಉದ್ದಗಲಕ್ಕೂ ಬಂದ್​ಗೆ ಬೆಂಬಲವಿದೆ. 2000ಕ್ಕೂ ಮೇಲ್ಪಟ್ಟು ಸಂಘಟನೆಗಳು ಬೆಂಬಲ ನೀಡಿವೆ. ವಿಧ್ಯಾರ್ಥಿಗಳು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ನಮ್ಮ ಬೇಡಿಕೆಗೆ ಬಂದ್ ಮಾಡಿದರೆ ಅದರ ಶಕ್ತಿಯೇ ಬೇರೆ’ ಎಂದರು.

ಮಳೆ ಬಂದು ಯಾವ ಡ್ಯಾಂ ತುಂಬಿದೆ? 

ಇನ್ನು ಬಂದ್​ ಬೇಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಬಂದ್ ಮಾಡೋದು ಬೇಡ ಅಂತ ನನ್ನ ಹತ್ತಿರ ಯಾರು ಹೇಳಿಲ್ಲ. ಬಂದ್ ಮಾಡಬೇಕು ಅಂತಾನೇ ಎಲ್ಲರೂ ಹೇಳಿರೋದು. ಕನ್ನಡ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕು ಮೂಡಿಲ್ಲ. ಬಿರುಕು ಮಾಡಿದರೆ ಸಿಮೆಂಟ್ ಹಾಕಿ ಸರಿ ಮಾಡುತ್ತೇವೆ. ಮಳೆ ಬಂದು ಯಾವ ಡ್ಯಾಂ ತುಂಬಿದೆ, ಕೆಆರ್​​ಎಸ್​ ಡ್ಯಾಂ ಇನ್ನೂ ತುಂಬಿಲ್ಲ’ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ

‘ಮೇಕೆದಾಟಿಗಾಗಿ ಸಿಎಂ ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿದರು. ಏಕೆ ಮೇಕೆದಾಟು ಯೋಜನೆಯನ್ನ ಮಾಡಿಲ್ಲ’ ಎಂದು ಪ್ರಶ್ನಿಸಿದರು. ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳದಿದ್ದರೆ ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ವಾಸಿಸುವ ತಮಿಳರು, ತೆಲುಗು, ಮಲಯಾಳಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಅಭಾವ ಎದುರಾಗಲಿದೆ’ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕರ್ನಾಟಕ ಬಂದ್‌ಗೆ ಬ್ರೇಕ್? ಆಗಸ್ಟ್ 13ರ ಬಂದ್ ಬಹುತೇಕ ರದ್ದು ಸಾಧ್ಯತೆ

‘ಆಗಸ್ಟ್ 13ರ ಇಡೀ ಕರ್ನಾಟಕ ಬಂದ್‌ಗೆ ಸರ್ವ ಭಾಷಿಕರು ಬೆಂಬಲ ನೀಡಬೇಕು ಹಾಗೂ ಪ್ರತಿಯೊಬ್ಬರೂ ಬೀದಿಗಿಳಿದು ಮನೆ-ಮನೆಯಿಂದ ಈಡುಗಾಯಿ ಹೊಡೆದು ಬಂದ್ ಯಶಸ್ವಿಗೊಳಿಸುವಂತೆ’ ವಾಟಾಳ್ ನಾಗರಾಜ್​ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು