AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಕಲಾವಿದನ ‘ಬೀಜ ಗಣಪತಿ’ ಕಲ್ಪನೆ: ವಿಸರ್ಜನೆ ನಂತರ ಅರಳುತ್ತೆ ಹಸಿರು ಸಂಕುಲ; ಫೋಟೋಸ್

ಉತ್ತರ ಕರ್ನಾಟಕದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವ ಗಣೇಶ ಚತುರ್ಥಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಿ ಸಜ್ಜಾಗಿದೆ. ಧಾರವಾಡದ ಕಲಾವಿದರೊಬ್ಬರು ಜೇಡಿಮಣ್ಣಿನಲ್ಲಿ ವಿವಿಧ ಬಗೆಯ ಬೀಜಗಳನ್ನು ಇಟ್ಟು ವಿಶೇಷ ಬೀಜ ಗಣೇಶನ ಮೂರ್ತಿಗಳನ್ನು ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೊತೆಗೆ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಉತ್ತೇಜಿಸುತ್ತಿದ್ದಾರೆ. ಫೋಟೋಸ್​ ಇಲ್ಲಿವೆ ನೋಡಿ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Sep 10, 2026 | 7:53 PM

Share
ಉತ್ತರ ಕರ್ನಾಟಕದಲ್ಲೇ ಅತಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಈ ಹಿಂದೆ ಶೇ. 60ರಷ್ಟು ಕೊಲ್ಲಾಪುರದ ಪಿಒಪಿ ಮೂರ್ತಿಗಳೇ ರಾರಾಜಿಸುತ್ತಿದ್ದವು. ಆದರೆ ಈಗ ಪಿಒಪಿ ಮೂರ್ತಿಗಳಿಗೆ ಬ್ರೇಕ್ ಬಿದ್ದಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣಪನ ಪ್ರತಿಷ್ಠಾಪನೆಗೆ ಜನ ಒಲವು ತೋರುತ್ತಿದ್ದಾರೆ. (Image Credit: tv9 kannada)

1 / 6
ಧಾರವಾಡದ ಕಲಾವಿದ ಮಂಜುನಾಥ್ ಹಿರೇಮಠ ಅವರು ಕಳೆದ ಮೂರೂವರೆ ದಶಕಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನೇ ಪ್ರತಿಷ್ಠಾಪಿಸುವಂತೆ ಸತತ ಜಾಗೃತಿ ಅಭಿಯಾನ ನಡೆಸಿಕೊಂಡು ಬರುವ ಮೂಲಕ ಜನಮನ ಗೆದ್ದಿದ್ದಾರೆ. (Image Credit: tv9 kannada)

2 / 6
ಏಳೆಂಟು ವರ್ಷಗಳ ಹಿಂದೆ ಮಂಜುನಾಥ್ ಅವರು ಸಿದ್ಧಪಡಿಸುವ ‘ಬೀಜದ ಗಣಪತಿ’ಗೆ ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಜೇಡಿಮಣ್ಣಿನ ಮೂರ್ತಿಯ ಒಳಗೆ ವಿವಿಧ ಬಗೆಯ ಬೀಜಗಳನ್ನು ಇರಿಸಿ ವಿಗ್ರಹ ತಯಾರಿಸುವುದು ಇದರ ವಿಶೇಷತೆಯಾಗಿದೆ. (Image Credit: tv9 kannada)

3 / 6
ಈ ಗಣಪತಿಗಳಿಗೆ ಯಾವುದೇ ರಾಸಾಯನಿಕ ಬಳಸದೆ ಇದ್ದಿಲು, ಅಷ್ಟಗಂಧ ಹಾಗೂ ಅರಿಶಿಣದಂತಹ ನೈಸರ್ಗಿಕ ಬಣ್ಣಗಳನ್ನೇ ಲೇಪಿಸಲಾಗುತ್ತದೆ. ನೀರಿನಲ್ಲಿಟ್ಟ ಕೇವಲ ಒಂದೇ ಗಂಟೆಯಲ್ಲಿ ಈ ಮೂರ್ತಿಗಳು ಸಂಪೂರ್ಣವಾಗಿ ಕರಗಿಹೋಗುತ್ತವೆ. (Image Credit: tv9 kannada)

4 / 6
ಫಲವತ್ತಾದ ಜೇಡಿಮಣ್ಣಿನಲ್ಲಿ ತಯಾರಾಗುವ ಈ ಮೂರ್ತಿಗಳ ಒಳಗಿರುವ ಹಾಗೂ ಅಲಂಕಾರಕ್ಕೆ ಬಳಸಿದ ಬೀಜಗಳು ಐದಾರು ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಹಬ್ಬದ 11ನೇ ದಿನಕ್ಕೆ ಸಣ್ಣ ಸಸಿಗಳಾಗಿ ಬೆಳೆಯುವ ಈ ಮಣ್ಣನ್ನು ಹಿತ್ತಲು ಅಥವಾ ಹೊಲಗಳಲ್ಲಿ ಹಾಕಿದರೆ ಗಿಡಗಳು ಬೆಳೆಯುತ್ತವೆ. (Image Credit: tv9 kannada)

5 / 6
ಕೆರೆ-ಬಾವಿಗಳಲ್ಲಿ ವಿಸರ್ಜಿಸಿ ನೀರು ಕಲುಷಿತಗೊಳಿಸುವ ಬದಲು, ಮನೆಯಲ್ಲೇ ವಿಸರ್ಜಿಸಿ ಗಿಡ ಬೆಳೆಸುವ ಈ ಅಭಿಯಾನ ಸಂಪೂರ್ಣ ಯಶಸ್ಸು ಕಂಡಿದೆ. ವಿಸರ್ಜನೆಯ ನಂತರ ತಮ್ಮ ಮನೆಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಗಿಡಗಳ ಚಿತ್ರಗಳನ್ನು ಗ್ರಾಹಕರು ಹಂಚಿಕೊಳ್ಳುತ್ತಿರುವುದು ಕಲಾವಿದರ ಕುಟುಂಬಕ್ಕೆ ಅಪಾರ ಸಂತಸ ತಂದಿದೆ. (Image Credit: tv9 kannada)

6 / 6
Follow Us
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ

ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ

ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ

ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ

ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ

ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ

ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!

ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್

ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!

ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ