Ganesh Chaturthi

Ganesh Chaturthi

ವಿನಾಯಕ ಚೌತಿ..ಭಾರತದಲ್ಲಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಶಿವ ಪಾರ್ವತಿಯ ಪುತ್ರ ವಿನಾಯಕನ ಜನ್ಮದಿನದಂದು ವಿನಾಯಕ ಚೌತಿಯನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ವಿನಾಯಕ ಚೌತಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿನಾಯಕ ಚತುರ್ಥಿ ಮತ್ತು ಗಣೇಶ ಚತುರ್ಥಿ ಎಂದೂ ಕರೆಯುತ್ತಾರೆ. ವಿನಾಯಕ ಚೌತಿ ಆಚರಣೆಯ ಅಂಗವಾಗಿ 11 ದಿನಗಳ ಕಾಲ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನಿಮಜ್ಜನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ವಿಗ್ರಹ ನಿಮಜ್ಜನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ.

ಹಳ್ಳಿಗಳು, ಪಟ್ಟಣಗಳು, ಕಾಲೋನಿಗಳು ಮತ್ತು ನಗರಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಿನಾಯಕ ಚೌತಿ ಆಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ವಿನಾಯಕ ಚೌತಿ ಮಹೋತ್ಸವಗಳು ಬ್ರಿಟಿಷ್ ಆಡಳಿತಗಾರರ ವಿರುದ್ಧ ಸ್ವಾತಂತ್ರ್ಯ ಚಳವಳಿಯಲ್ಲಿ ಎಲ್ಲ ಜನರಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರವಹಿಸಿದವು. 1892 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರು ದೇಶದ ಜನರಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳಗಿಸಲು ಗಣಪತಿ ಉತ್ಸವಗಳನ್ನು ಪ್ರಾರಂಭಿಸಿದರು.

ಇನ್ನೂ ಹೆಚ್ಚು ಓದಿ

ಗಣಪತಿ ಮೂರ್ತಿಗೆ ನಮಸ್ಕರಿಸಿದ ಕರೀನಾ ಮಕ್ಕಳು ತೈಮೂರ್​, ಜೇಹ್ ಅಲಿ ಖಾನ್​

ಕರೀನಾ ಕಪೂರ್​ ಖಾನ್​, ಸೈಫ್​ ಅಲಿ ಖಾನ್​ ಅವರ ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವರ ಮಕ್ಕಳಾದ ಜೇಹ್ ಅಲಿ ಖಾನ್​ ಹಾಗೂ ತೈಮೂರ್​ ಅಲಿ ಖಾನ್​ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಗಣೇಶನಿಗೆ ನಮಿಸಿ ಆಶೀರ್ವಾದ ಪಡೆಯುತ್ತಿರುವ ಮಕ್ಕಳ ಫೋಟೋವನ್ನು ಕರೀನಾ ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್​ ಆಗಿದೆ.

ಮುಖ್ಯಮಂತ್ರಿ ಮನೆಯ ಗಣೇಶ ಚತುರ್ಥಿ ಸಂಭ್ರಮದಲ್ಲಿ ಭಾಗಿಯಾದ ಸಲ್ಮಾನ್​ ಖಾನ್​

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗಿದೆ. ಇದರಲ್ಲಿ ಸಲ್ಮಾನ್​ ಖಾನ್​ ಅವರು ಭಾಗಿ ಆಗಿದ್ದಾರೆ. ಅವರಿಗೆ ಸಹೋದರಿ ಅರ್ಪಿತಾ ಖಾನ್​ ಕೂಡ ಸಾಥ್​ ನೀಡಿದ್ದಾರೆ. ಸಲ್ಮಾನ್​ ಖಾನ್​ ಅವರು ಗಣೇಶನ ಮೂರ್ತಿಗೆ ಕೈಮುಗಿದ ಫೋಟೋಗಳನ್ನು ಏಕನಾಥ್​ ಶಿಂಧೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಭಟನಾಕಾರರ ಕೈಯಿಂದ ಪೊಲೀಸ್ ಜೀಪ್ ಸೇರಿದ ಗಣೇಶನ ವಿಗ್ರಹ; ವಿಡಿಯೋಗೆ ಭಾರೀ ವಿರೋಧ

ಮಂಡ್ಯದ ನಾಗಮಂಗಲದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಕೋಮುಗಲಭೆಯನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಗಣೇಶನ ವಿಗ್ರಹವನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು ಅವರ ಕೈಯಲ್ಲಿದ್ದ ಗಣೇಶನನ್ನು ಹೊತ್ತುಕೊಂಡು ಹೋಗಿ ಪೊಲೀಸ್ ಜೀಪ್​ನಲ್ಲಿಟ್ಟುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ಬೆಂಗಳೂರು ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಅಕ್ಷರಧಾಮ ದೇವಾಲಯದಲ್ಲಿ ವಿಜೃಂಭಣೆಯಿಂದ ಜಲಝುಲ್ನಿ ಹಬ್ಬ ಆಚರಣೆ, ಗಣೇಶನ ವಿಸರ್ಜನೆ

ಅಕ್ಷರಧಾಮ ದೇವಸ್ಥಾನದಲ್ಲಿ ಜಲಝುಲ್ನಿ ಮತ್ತು ಗಣಪತಿ ವಿಸರ್ಜನ ಉತ್ಸವವನ್ನು ಆಯೋಜಿಸಲಾಗಿತ್ತು. ಅಕ್ಷರಧಾಮ ದೇವಾಲಯದಲ್ಲಿ ಜಲಝುಲ್ನಿ ಏಕಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಗಣೇಶನ ಮೂರ್ತಿಯನ್ನೂ ವಿಸರ್ಜನೆ ಮಾಡಲಾಯಿತು. ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದಲ್ಲಿಯೇ ಮೆರವಣಿಗೆ ನಡೆಸಿ ನಂತರ ನಿಮಜ್ಜನ ಮಾಡಲಾಯಿತು.

Anant Chaturdashi 2024: ಅನಂತ ಚತುರ್ದಶಿ ಯಾವಾಗ, ಗಣೇಶನ ವಿಸರ್ಜನೆ ಯಾವಾಗ? ಶುಭ ಮುಹೂರ್ತ ಯಾವಾಗ?

Ganesh Chaturthi 2024: ಗಣೇಶೋತ್ಸವದ ಅಂತ್ಯಕಾಲ ಸಮೀಪಿಸುತ್ತಿದೆ. ಮೂರು ದಿನಗಳ ಕಾಲ ಪೂಜೆಗಳನ್ನು ಸ್ವೀಕರಿಸಿ ಅನಂತ ಚತುರ್ದಶಿಯ ದಿನ ಗಣಪತಿ ವಿಸರ್ಜನೆಗೊಂಡು ತಾಯಿ ಗಂಗಾ ಒಡಲು ಸೇರುತ್ತಾನೆ ನಮ್ಮೆಲ್ಲರ ಮುದ್ದಿನ ವಿನಾಯಕ. ಅನಂತ ಚತುರ್ದಶಿಯ ದಿನ ಜನರು ಗಣಪತಿ ವಿಗ್ರಹವನ್ನು ಬಹಳ ವೈಭವದಿಂದ ಸಂಗೀತ ವಾದ್ಯಗಳೊಂದಿಗೆ ತೆಗೆದುಕೊಂಡು ಹೋಗಿ ನೀರಿನಲ್ಲಿ ನಿಮಜ್ಜನ ಮಾಡುತ್ತಾರೆ.

ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಗಣೇಶ ಮೂರ್ತಿ ಹುಬ್ಬಳ್ಳಿ ಕಾ ಮಹಾರಾಜ​

ಹುಬ್ಬಳ್ಳಿಯ ಗಣೇಶೋತ್ಸವ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹುಬ್ಬಳ್ಳಿಯ ಎರಡು ಕಡೆ ರಾಜ್ಯದಲ್ಲೇ ಅತ್ಯಂತ ಎತ್ತರವಾದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ದಾಜೀಬಾನಪೇಟ,‌‌ ಮರಾಠಾಗಲ್ಲಿಯಲ್ಲಿ 21 ಅಡಿಗೂ ಎತ್ತರವಾದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ಚಿಕ್ಕಮಗಳೂರು: ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್​

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿ ಡ್ಯಾನ್ಸ್​​ ಮಾಡಿದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಶಿವಮೊಗ್ಗ: ಕೋಮುಗಲಭೆಗೆ ಸಾಕ್ಷಿಯಾಗಿದ್ದ ರಾಗಿಗುಡ್ಡದಲ್ಲಿ ಭಾವೈಕ್ಯತೆ ಅಲೆ, ಮುಸ್ಲಿಮರಿಂದ ಗಣಪನಿಗೆ ಹೂವಿನ ಹಾರ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಾತಾವರಣ ಪ್ರಕ್ಷ್ಯಬ್ಧಗೊಂಡಿದೆ. ಬುಧವಾರ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕೋಮುಗಲಭೆ ಸಂಭವಿಸಿತ್ತು. ಈ ನಡುವೆ ಶಿವಮೊಗ್ಗದಲ್ಲಿ ಹಿಂದೂ, ಮುಸ್ಲಿಮರು ಒಂದಾಗಿ ಗಣೇಶ ವಿಸರ್ಜಣೆ ಮೆರವಣಿಗೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಭಾವೈಕ್ಯತೆ ಅಲೆ ಬೀಸಿದೆ.

ಗಣಪತಿ ವಿಸರ್ಜನೆಯಲ್ಲಿ ಪಾಲ್ಗೊಂಡ ರಣಬೀರ್​ ಕಪೂರ್​ ಕುಟುಂಬ; ಇಲ್ಲಿವೆ ಫೋಟೋಸ್

ಬಾಲಿವುಡ್​ ಮಂದಿ ಭಾರಿ ಸಡಗರದಿಂದ ಗಣಪತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಟ ರಣಬೀರ್​ ಕಪೂರ್​ ಅವರ ಮನೆಯಲ್ಲಿ ಗಣೇಶನ ಮೂರ್ತಿ ಕೂರಿಸಿ ಸಂಭ್ರಮದಿಂದ ಹಬ್ಬ ಮಾಡಲಾಗಿತ್ತು. ಗಣಪತಿ ವಿಸರ್ಜನೆಯಲ್ಲಿ ಇಡೀ ಕುಟುಂಬದವರು ಭಾಗಿಯಾಗಿದ್ದು, ಆ ಸಂದರ್ಭದ ಫೋಟೋಗಳನ್ನು ರಣಬೀರ್​ ತಾಯಿ ನೀತೂ ಕಪೂರ್​ ಅವರು ಹಂಚಿಕೊಂಡಿದ್ದಾರೆ.

ಮಂಡ್ಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಭುಗಿಲೆದ್ದ ಗಲಭೆ: ನಿಷೇಧಾಜ್ಞೆ, ಶಾಲೆ-ಕಾಲೇಜುಗಳಿಗೆ ರಜೆ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಸಂಭವಿಸಿದ ಕೋಮು ಗಲಭೆ ಬಿಗಡಾಯಿಸಿದೆ. ಕಿಡಿಗೇಡಿಗಳು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ನಡುರಸ್ತೆಯಲ್ಲೇ ತಲ್ವಾರ್, ಲಾಂಗು, ರಾಡ್‌ಗಳನ್ನು ಝಳಪಿಸಿದ್ದಾರೆ. ಪೆಟ್ರೋಲ್ ಬಾಂಬ್ ದಾಳಿಗೆ ಅಂಗಡಿಗಳು ಹೊತ್ತಿ ಉರಿದಿವೆ. ಪೊಲೀಸ್ ಠಾಣೆ ಮುಂದೆಯೇ ಹಿಂದೂ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದೆ. ಘಟನೆಯ ಸಮಗ್ರ ಮಾಹಿತಿ ಇಲ್ಲಿದೆ.