ಬೆಂಗಳೂರು: ಗಣೇಶೋತ್ಸವ ಮೆರವಣಿಗೆ ವೇಳೆ ಹೂಹಾರ ಹಾಕಿ ಭಾವೈಕ್ಯತೆ ಮೆರೆದ ಮುಸ್ಲಿಮರು!
ಕೆಆರ್ ಪುರಂನ ದೇವಸಂದ್ರದ ಗಣೇಶ ವಿಸರ್ಜನೆಯ ವೇಳೆ ಸ್ಥಳೀಯ ಮುಸಲ್ಮಾನರು ಹೂ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀ ವಿನಾಯಕ ಗೆಳೆಯರ ಬಳಗದಿಂದ ನಡೆದ ಗಣಪತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ತಂಪು ಪಾನೀಯ ವಿತರಿಸುವ ಮೂಲಕ ಹಿಂದೂ-ಮುಸ್ಲಿಮ್ ಬಾಂಧವ್ಯವನ್ನು ತೋರಿಸಿಕೊಟ್ಟಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 16: ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ಮಾಡಿದ ಆರೋಪ ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲೊಂದು ಅಪರೂಪದ ವಿದ್ಯಮಾನ ನಡೆದಿದೆ. ನಗರದ ದೇವಸಂದ್ರದಲ್ಲಿ ಗಣೇಶೂತ್ಸವದ ವೇಳೆ ಮುಸಲ್ಮಾನರು ಹೂ ಹಾರ ಹಾಕಿ ಸಂಭ್ರಮಿಸಿದ್ದಾರೆ. ಭಾವೈಕ್ಯತೆ ಮೆರೆದಿದ್ದಾರೆ. ಶ್ರೀ ವಿನಾಯಕ ಗೆಳೆಯರ ಬಳಗದಿಂದ ಸೋಮವಾರ ರಾತ್ರಿ ನಡೆದ ಗಣೇಶ ಉತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಸ್ಥಳೀಯ ಮುಸಲ್ಮಾನರು ಮೆರವಣಿಗೆಯ ಉದ್ದಕ್ಕೂ ಹೂ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ, ಮೆರವಣಿಗೆಗೆ ಆಗಮಿಸಿದ್ದ ಎಲ್ಲರಿಗೂ ತಂಪು ಪಾನೀಯ ವಿತರಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
Published on: Sep 16, 2025 02:03 PM

