ಮದ್ದೂರು ಕಲ್ಲು ತೂರಾಟ ಕೇಸ್: ನಾನೇ ಖುದ್ದು ಬರ್ತಿನಿ ಏನಾಗುತ್ತೆ ನೋಡೋಣ, ಸರ್ಕಾರಕ್ಕೆ ಜೋಶಿ ಸವಾಲ್
ಮದ್ದೂರು ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟ (Stone Pelting) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇನ್ನು ಬಿಜೆಪಿ ನಿಯೋಗ ನಾಳೆ(ಸೆಪ್ಟೆಂಬರ್ 08) ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ. ಮತ್ತೊಂದೆಡೆ ಹಿಂದೂ ಮುಖಂಡರು ನಾಳೆ ಮದ್ದೂರು ಬಂದ್‌ಗೆ ಕರೆ ನೀಡಿದ್ದಾರೆ. ಈ ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ, (ಸೆಪ್ಟೆಂಬರ್ 08): ಮದ್ದೂರು ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟ (Stone Pelting) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇನ್ನು ಬಿಜೆಪಿ ನಿಯೋಗ ನಾಳೆ(ಸೆಪ್ಟೆಂಬರ್ 08) ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ. ಮತ್ತೊಂದೆಡೆ ಹಿಂದೂ ಮುಖಂಡರು ನಾಳೆ ಮದ್ದೂರು ಬಂದ್‌ಗೆ ಕರೆ ನೀಡಿದ್ದಾರೆ. ಈ ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ದಾರ್ಷ್ಟ್ಯತನ ಮಿತಿಮೀರಿದೆ. ಗಣಪತಿ ಹಬ್ಬ, ಹಿಂದೂ ಧಾರ್ಮಿಕ ಹಬ್ಬಗಳು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲದ ದ್ವೇಷ. ನಿಮ್ಮ ದುರಾಡಳಿತದಿಂದಲೇ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಗಣಪತಿ ಹಬ್ಬದ ಮೇಲೆ ನಿಯಂತ್ರಣ ಸಾಧಿಸುವಷ್ಟು ಹಠ ನಿಮಗೆ ಯಾಕೆ ಸಿದ್ದರಾಮಯ್ಯನವರೇ? ಅಶಾಂತಿ ಸೃಷ್ಟಿಸಿ, ಲಾಠಿ ಚಾರ್ಜ್ ಮಾಡುವ ಸ್ಥಿತಿ ನಿರ್ಮಾಣದ ಉದ್ದೇಶವೇನು? ಕಲ್ಲು ತೂರಿದವರು ಅಮಾಯಕರೇ? ಗಣಪತಿ ವಿಸರ್ಜನೆಗೆ ಸೇರಿದವರ ಮೇಲೆ ಲಾಠಿ ಚಾರ್ಜ್ ಯಾಕೆ? ನಾನೇ ಖುದ್ದು ಬರ್ತಿನಿ, ನೋಡೋಣ ಏನಾಗುತ್ತೆ ಅಂತ ಎಂದು ಸವಾಲು ಹಾಕಿದ್ದಾರೆ.

