AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡ ರೋಗಿಗಳಿಗೆ ಸಿಗಬೇಕಿದ್ದ ಸರ್ಕಾರಿ ಮಾತ್ರೆಗಳು ಅರಣ್ಯ ಪಾಲು: ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಬಯಲಿಗೆ

ಬಡ ರೋಗಿಗಳಿಗೆ ಸಿಗಬೇಕಿದ್ದ ಸರ್ಕಾರಿ ಮಾತ್ರೆಗಳು ಅರಣ್ಯ ಪಾಲು: ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಬಯಲಿಗೆ

ಪ್ರಶಾಂತ್​ ಬಿ.
| Edited By: |

Updated on: Oct 01, 2026 | 7:57 AM

Share

ರಾಮನಗರದಲ್ಲಿ ನಕಲಿ ಔಷಧಿ ಪತ್ತೆಯಾದ ನಂತರ ದೇಶದಲ್ಲಿ ಈ ಬಗ್ಗೆ ಹೆಚ್ಚಿನ ಕಾರ್ಯಚರಣೆ ನಡೆಸಲಾಯಿತು. ಇದೀಗ ಮತ್ತೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಔಷಧಗಳನ್ನು ಅರಣ್ಯದಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ. ಬಡವರಿಗೆ ಉಚಿತವಾಗಿ ನೀಡಬೇಕಿದ್ದ ಈ ಮಾತ್ರೆಗಳು ಮತ್ತು ಗ್ಲೂಕೋಸ್ ಬಾಟಲಿಗಳಲ್ಲಿ ಕೆಲವು ಅವಧಿ ಮುಗಿದಿದ್ದರೆ, ಹಲವು ಇನ್ನೂ ಬಳಕೆಯಾಗಬಲ್ಲವಾಗಿದ್ದವು. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಮನಗರ, ಅ.1: ರಾಮನಗರದಲ್ಲಿ ಕಳೆದ ಕೆಲವು ದಿನಗಳಿಂದ ನಕಲಿ ಔಷಧಿಗಲ ಜಾಲ ಪತ್ತೆಯಾಗುತ್ತಿದೆ. ಈ ಪ್ರಕರಣಗಳ ನಂತರ ದೇಶದಲ್ಲಿ ಈ ಬಗ್ಗೆ ಭಾರೀ ಕಾರ್ಯಚರಣೆಗಳು ನಡೆದಿತ್ತು. ಇದೀಗ ರಾಮನಗರದಲ್ಲಿ ಮತ್ತೆ ಇಂತಹದೇ ಘಟನೆಯೊಂದು  ನಡೆದಿದೆ. ಬಡ ರೋಗಿಗಳಿಗೆ ಉಚಿತವಾಗಿ ತಲುಪಬೇಕಿದ್ದ ಸರ್ಕಾರಿ ಆಸ್ಪತ್ರೆಯ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ಅರಣ್ಯ ಪಾಲಾಗಿರುವ ಆಘಾತಕಾರಿ ಘಟನೆ ಮಾಗಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶದ ರಸ್ತೆ ಬದಿ ಹಾಗೂ ಬಂಡೆಗಳ ಮೇಲೆ ರಾಶಿ ರಾಶಿ ಸರ್ಕಾರಿ ಮಾತ್ರೆಗಳು ಮತ್ತು ಗ್ಲೂಕೋಸ್ ಬಾಟಲಿಗಳನ್ನು ಚೆಲ್ಲಿ ಹೋಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಅಜ್ಜನಹಳ್ಳಿ ಹಾಗೂ ಶಂಭುದೇವನಹಳ್ಳಿ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಈ ಔಷಧಗಳ ರಾಶಿ ಪತ್ತೆಯಾಗಿದೆ. ಸಾರ್ವಜನಿಕ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತರಲಾದ ಭಾರಿ ಪ್ರಮಾಣದ ಔಷಧ ಮಾತ್ರೆಗಳನ್ನು ದೊಡ್ಡ ಚೀಲಗಳಲ್ಲಿ ತಂದು ಇಲ್ಲಿನ ಬಂಡೆಗಳ ಮೇಲೆ ಹಾಗೂ ಪೊದೆಗಳಲ್ಲಿ ಸುರಿದು ಹೋಗಲಾಗಿದೆ. ಪತ್ತೆಯಾಗಿರುವ ಪ್ರತಿಯೊಂದು ಬಾಕ್ಸ್ ಹಾಗೂ ಸ್ಟ್ರಿಪ್‌ಗಳ ಮೇಲೆ ‘ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ – ಉಚಿತ ಪೂರೈಕೆ, ಮಾರಾಟಕ್ಕಲ್ಲ’ ಎಂದು ಸ್ಪಷ್ಟವಾಗಿ ಮುದ್ರಿಸಲಾಗಿದೆ. ಅಚ್ಚರಿಯೆಂದರೆ, ಈ ರೀತಿ ಎಸೆಯಲಾಗಿರುವ ಔಷಧಗಳಲ್ಲಿ ಕೆಲವಷ್ಟರ ಅವಧಿ ಮುಗಿದಿದ್ದರೆ, ಇನ್ನು ಹಲವು ಮಾತ್ರೆಗಳು ಇನ್ನೂ ಬಳಕೆಗೆ ಯೋಗ್ಯವಾದ ದಿನಾಂಕವನ್ನು ಹೊಂದಿವೆ. ಮಧುಮೇಹ, ರಕ್ತದೊತ್ತಡ, ಜ್ವರ ಹಾಗೂ ಸಾಮಾನ್ಯ ಸಾಂಕ್ರಾಮಿಕ ರೋಗಗಳಿಗೆ ನೀಡಲಾಗುವ ವೈವಿಧ್ಯಮಯ ಮಾತ್ರೆಗಳು ಇದರಲ್ಲಿ ಸೇರಿವೆ. ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಔಷಧ ಸಿಗದೆ ಪರದಾಡುತ್ತಿರುವಾಗ, ಸರ್ಕಾರಿ ಪೂರೈಕೆಯಾಗುವ ಮಾತ್ರೆಗಳನ್ನು ಈ ರೀತಿ ಕಾಡಿನಲ್ಲಿ ಚೆಲ್ಲಿರುವುದು ಆಸ್ಪತ್ರೆ ಸಿಬ್ಬಂದಿ ಹಾಗೂ ತಾಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಔಷಧಗಳ ವಿಲೇವಾರಿಗೆ ನಿರ್ದಿಷ್ಟ ವೈಜ್ಞಾನಿಕ ಕಾನೂನುಗಳಿದ್ದರೂ, ಅದನ್ನು ಗಾಳಿಗೆ ತೂರಿ ಕಾಡಿನಲ್ಲಿ ಎಸೆದು ಹೋಗಿರುವುದು ಪರಿಸರಕ್ಕೂ ಅಪಾಯ ತಂದೊಡ್ಡಿದೆ. ಈ ದುರ್ಘಟನೆಗೆ ಕಾರಣರಾದ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಜ್ಜನಹಳ್ಳಿ ಮತ್ತು ಶಂಭುದೇವನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತವನ್ನು ಬಲವಾಗಿ ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಶಾಂತ್​ ಬಿ.
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More