ಇಂದು ಈ ರಾಶಿಯವರಿಗೆ ತಕ್ಷಣ ಸಿಗಲಿದೆ ಬ್ಯಾಂಕ್ ಲೋನ್: ಆದರೆ ತಪ್ಪಿಯೂ ಈ ಕೆಲಸ ಮಾಡದಿರಿ
ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ಅವರು ಅಕ್ಟೋಬರ್ 1, 2026, ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಕೃತಿಕಾ ನಕ್ಷತ್ರ, ಸಿದ್ಧಿ ಯೋಗವಿರುವ ಈ ದಿನದ ರಾಹುಕಾಲ, ಶುಭಕಾಲ, ಪ್ರಮುಖ ಹಬ್ಬಗಳು ಮತ್ತು ಪ್ರತಿ ರಾಶಿಗಳ ಆರ್ಥಿಕ, ಆರೋಗ್ಯ, ಉದ್ಯೋಗ ಹಾಗೂ ಸಂಬಂಧಗಳ ಕುರಿತು ವಿವರವಾದ ಭವಿಷ್ಯವನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು, ಅ.1: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ್ ಗುರೂಜಿ ಅವರು ಅಕ್ಟೋಬರ್ 01, 2026, ಗುರುವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಪರಾಭವ ನಾಮ ಸಂವತ್ಸರದ, ದಕ್ಷಿಣಾಯನ, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಂಚಮಿ, ಕೃತಿಕಾ ನಕ್ಷತ್ರ, ಸಿದ್ಧಿ ಯೋಗ, ತೈತಿಲ ಕರಣವಿರುವ ಈ ದಿನದ ಮಹತ್ವವನ್ನು ಗುರೂಜಿ ವಿವರಿಸಿದ್ದಾರೆ. ಅಕ್ಟೋಬರ್ 1, 2026 ರಂದು ಮಧ್ಯಾಹ್ನ 1 ಗಂಟೆ 39 ನಿಮಿಷದಿಂದ 3 ಗಂಟೆ 9 ನಿಮಿಷದವರೆಗೆ ರಾಹುಕಾಲ ಇರುತ್ತದೆ. ಹಾಗೆಯೇ, ಸರ್ವಸಿದ್ಧಿ ಶುಭಕಾಲವು ಮಧ್ಯಾಹ್ನ 12 ಗಂಟೆ 9 ನಿಮಿಷದಿಂದ 1 ಗಂಟೆ 39 ನಿಮಿಷದ ತನಕ ಇರುತ್ತದೆ. ಈ ದಿನ ವಿಶ್ವಕರ್ಮ ಪೂಜೆ, ಅಂತರಾಷ್ಟ್ರೀಯ ಹಿರಿಯರ ದಿನ, ಉಪ್ಪಳ ಹನುಮಂತಾವಧೂತ ಆರಾಧನೆ ಮತ್ತು ವಿಶ್ವ ಸಸ್ಯಾಹಾರ ದಿನವನ್ನಾಗಿ ಆಚರಿಸಲಾಗುವುದು. ಇಂದು ರವಿ ಕನ್ಯಾ ರಾಶಿಯಲ್ಲಿ ಮತ್ತು ಚಂದ್ರ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಮೇಷದಿಂದ ಮೀನದವರೆಗೆ, ಎಲ್ಲಾ ರಾಶಿಗಳ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಸಂಬಂಧಗಳು ಮತ್ತು ಪ್ರಯಾಣದ ಬಗ್ಗೆ ಡಾ. ಬಸವರಾಜ್ ಗುರೂಜಿ ಅವರು ತಮ್ಮ ವಿಸ್ತೃತ ಭವಿಷ್ಯವನ್ನು ನೀಡಿದ್ದಾರೆ. ಪ್ರತಿ ರಾಶಿಗೂ ಅದೃಷ್ಟದ ಬಣ್ಣ, ಸಂಖ್ಯೆ ಹಾಗೂ ವಿಶೇಷ ಮಂತ್ರ ಜಪದ ಸಲಹೆಗಳನ್ನು ಒದಗಿಸಿದ್ದಾರೆ. ಭಗವಂತನು ಎಲ್ಲರಿಗೂ ಆರೋಗ್ಯ, ಐಶ್ವರ್ಯ, ಸಮೃದ್ಧಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ

