ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಅಗ್ನಿ ಪರೀಕ್ಷೆ ಮೂಲಕ ‘ಬಿಗ್ ಬಾಸ್ ಕನ್ನಡ 13’ ಶೋಗೆ 4 ಸ್ಪರ್ಧಿಗಳು ಬಂದಿದ್ದಾರೆ. ಅವರ ಬಗ್ಗೆ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಮಾತನಾಡಿದ್ದಾರೆ. ಕಾಮನರ್ ಆಗಿ ಬಂದಿರುವ ಮಂಜ ಮೊದಲ ವಾರವೇ ಭಾರಿ ಸದ್ದು ಮಾಡಿದ್ದಾರೆ. ಆದರೆ 1 ವಾರ ಕಳೆಯುವುದರೊಳಗೆ ಅವರು ಕಾಮಿಡಿ ಪೀಸ್ ಆಗುತ್ತಾರೆ ಎಂಬುದು ತಾಂಡವ್ ಅಭಿಪ್ರಾಯ.
ಅಗ್ನಿ ಪರೀಕ್ಷೆ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋಗೆ ನಾಲ್ಕು ಸ್ಪರ್ಧಿಗಳು ಬಂದಿದ್ದಾರೆ. ಅವರ ಬಗ್ಗೆ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರು ಮಾತನಾಡಿಕೊಂಡಿದ್ದಾರೆ. ಕಾಮನರ್ ಆಗಿ ಬಂದಿರುವ ಮಂಜ ಮೊದಲ ವಾರವೇ ಭಾರಿ ಸದ್ದು ಮಾಡಿದ್ದಾರೆ. ಆದರೆ ಒಂದು ವಾರ ಕಳೆಯುವುದರೊಳಗೆ ಅವರು ಕಾಮಿಡಿ ಪೀಸ್ ಆಗುತ್ತಾರೆ ಎಂಬುದು ತಾಂಡವ್ ರಾಮ್ ಅಭಿಪ್ರಾಯ. ಆ ಬಗ್ಗೆ ಅವರು ಗಗನ್ ಚಿನ್ನಪ್ಪ ಜೊತೆ ಚರ್ಚೆ ಮಾಡಿದ್ದಾರೆ. ‘ಈ ಶೋಗೆ ಅವನು ಬಂದಿದ್ದು ಒಳ್ಳೆಯದೇ ಆಯಿತು. ಅವನನ್ನು ಕೆಣಕಿ ಮಜಾ ಮಾಡಬಹುದು. ಅವನ ಡೈಲಾಗ್ ಖಾಲಿ ಆಯಿತು. ಇನ್ನೊಂದು ವಾರದಲ್ಲಿ ಅವನು ಚಿಂದಿ, ಚಿತ್ರನ್ನ ಕಾಮಿಡಿ ಪೀಸ್ ಆಗ್ತಾನೆ’ ಎಂದು ತಾಂಡವ್ ರಾಮ್ ಅವರು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ನಡೆಸಿಕೊಡಲಿರುವ ವಾರಾಂತ್ಯದ ಸಂಚಿಕೆ ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

