ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಹಾಸ್ಯ ನಟ ಪ್ರಶಾಂತ್ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದು ಎಲ್ಲ ಸ್ಪರ್ಧಿಗಳ ಜೊತೆ ಬೆರೆಯುತ್ತಿದ್ದಾರೆ. ಲೇಟೆಸ್ಟ್ ಸಂಚಿಕೆಯಲ್ಲಿ ಪ್ರಶಾಂತ್, ಸೋನಿಕಾ ಗೌಡ ಮತ್ತು ಗಗನ್ ಚಿನ್ನಪ್ಪ ನಡುವೆ ತಮಾಷೆಯ ಮಾತುಕಥೆ ನಡೆದಿದೆ. ಹೊಸ ಪ್ರೋಮೋ ಇಲ್ಲಿದೆ ನೋಡಿ.
ಹಾಸ್ಯ ನಟ ಪ್ರಶಾಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದು ಎಲ್ಲ ಸ್ಪರ್ಧಿಗಳ ಜೊತೆ ಬೆರೆಯುತ್ತಿದ್ದಾರೆ. ಲೇಟೆಸ್ಟ್ ಸಂಚಿಕೆಯಲ್ಲಿ ಪ್ರಶಾಂತ್, ಸೋನಿಕಾ ಗೌಡ ಮತ್ತು ಗಗನ್ ಚಿನ್ನಪ್ಪ ನಡುವೆ ತಮಾಷೆಯ ಮಾತುಕಥೆ ನಡೆದಿದೆ. ‘ಟಾಸ್ಕ್ನಲ್ಲಿ ನೀವು ಗೆಲ್ಲಲೇ ಬೇಕು. ಆದರೆ ಟಾಸ್ಕ್ ಗೆದ್ದ ಬಳಿಕ ನೀವು ಶರ್ಟ್ ತೆಗೆಯುವಂತಿಲ್ಲ. ಒಂದು ವೇಳೆ ನೀವು ಶರ್ಟ್ ತೆಗೆದರೆ ನಾನು ಪ್ಯಾಂಟ್ ತೆಗೆಯುತ್ತೇನೆ. ಕರ್ನಾಟಕದ ಜನ ನೋಡಿ ನನ್ನ ಮರ್ಯಾದೆ ಹೋದರೂ ಪರವಾಗಿಲ್ಲ. ನನಗೆ ಕೋಪ ಬಂದರೆ ಹಾಗೆಯೇ ಮಾಡುತ್ತೇನೆ’ ಎಂದು ಪ್ರಶಾಂತ್ ಅವರು ಗಗನ್ ಚಿನ್ನಪ್ಪಗೆ ಹೇಳಿದ್ದಾರೆ. ಅವರ ಮಾತು ಕೇಳಿದ ಸೋನಿಕಾ ಗೌಡ ಅವರು ಬಿದ್ದು ಬಿದ್ದು ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

