ರಾಮನಗರದಲ್ಲಿ ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಮುಖ್ಯಾಂಶಗಳು
- ರಾಮನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ವಿಕಲಚೇತನರ ಪ್ರತಿಭಟನೆ
- ಇಂದು ಪ್ರತಿಭಟನಾ ಸ್ಥಳಕ್ಕೆ ಆರ್ ಅಶೋಕ್ ಭೇಟಿ
- ಮಳೆಯಲ್ಲೇ ಪ್ರತಿಭಟನಕಾರರ ಅಹವಾಲು ಆಲಿಸಿದ ವಿಪಕ್ಷ ನಾಯಕ
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ವಿಶೇಷಚೇತನರ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ ಬೆಂಬಲ ಸೂಚಿಸಿದರು. ಮಳೆ ನಡುವೆ ಹೋರಾಟ ನಡೆಸುತ್ತಿರುವ ವಿಕಲಚೇತನರು ಕಾಯಂ ಉದ್ಯೋಗ, ಮಾಶಾಸನ ಹೆಚ್ಚಳ ಮತ್ತು ಬಾಕಿ ಬಿಡುಗಡೆಗೆ ಆಗ್ರಹಿಸಿದರು. ನಮಗೆ ನ್ಯಾಯ ಒದಗಿಸದಿದ್ದರೆ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ಆರ್. ಅಶೋಕ್ಗೆ ಮನವಿ ಮಾಡಿದರು.
ರಾಮನಗರ, ಅಕ್ಟೋಬರ್ 01: ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ವಿಕಲಚೇತನರು ಕಳೆದ ಹನ್ನೆರಡು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪ್ರತಿಭಟನೆ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿದರು. ಮಳೆ ಬರುತ್ತಿದ್ದರೂ ಲೆಕ್ಕಿಸದೆ ವಿಕಲಚೇತನರು ಪ್ರತಿಭಟಿಸುತ್ತಿದ್ದು, ಆರ್. ಅಶೋಕ್ ಕೂಡ ಮಳೆಯಲ್ಲೇ ಪ್ರತಿಭಟನಕಾರರ ಅಹವಾಲುಗಳನ್ನು ಆಲಿಸಿದರು. ಪ್ರತಿಭಟನಕಾರರು ತಮ್ಮ ಪ್ರಮುಖ ಬೇಡಿಕೆಗಳಾದ ಕಾಯಂ ಉದ್ಯೋಗ, ಮಾಶಾಸನ ಹೆಚ್ಚಳ ಮತ್ತು ಕಳೆದ ಆರು ತಿಂಗಳಿಂದ ಬಾಕಿ ಇರುವ ಎಂಟು ಲಕ್ಷ ಜನರಿಗೆ ಮಾಶಾಸನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಯೋಗೇಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR

