ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ‘ಸುಪ್ರೀಂ’ ಸಂಕಷ್ಟ ಸಾಧ್ಯತೆ
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿಯವರ ಜಾಮೀನು ರದ್ದು ಕೋರಿ ಸಿಬಿಐ ಹಾಗೂ ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸ ಕೊಲೆ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿರಲು ಅರ್ಹರೇ ಎಂದು ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆ ಎತ್ತಿದ್ದು, ಕುಲಕರ್ಣಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ನವದೆಹಲಿ/ಧಾರವಾಡ, ಅಕ್ಟೋಬರ್ 01: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ಗೌಡ ಕೊಲೆ ಕೇಸ್ ಸಂಬಂಧ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದು ಕೋರಿ ಸಿಬಿಐ ಮತ್ತು ಯೋಗೇಶ್ಗೌಡ ಸಹೋದರ ಗುರುನಾಥಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಈ ರೀತಿ ಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿರಬೇಕೇ? ನಾಳೆ ದರೋಡೆ ಮಾಡಿದವರೂ ವಿಧಾನಸಭೆಗೆ ಹೋಗಬಹುದೇ?ಗಂಭೀರ ಆರೋಪಗಳಿರುವ ವ್ಯಕ್ತಿ ವಿಧಾನಸಭೆಯಲ್ಲಿರಲು ಅರ್ಹರೇ? ಇಂಥವರನ್ನು ಅನರ್ಹ ಮಾಡಬೇಕೆಂದು ಹೇಳಿದೆ. ತಮ್ಮ ಆಕ್ಷೇಪಣೆ ಪರಿಗಣಿಸಲು ವಿನಯ್ ಪರ ವಕೀಲರ ಮನವಿ ಹಿನ್ನೆಲೆ, ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಸುಪ್ರೀಂಕೋರ್ಟ್ ನಿಗದಿಪಡಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

