AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಕ್​ಪಿಟ್​​ನಲ್ಲಿ ದಾಳಿಗೊಳಗಾದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಶೀಘ್ರ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕಾಕ್​ಪಿಟ್​​ನಲ್ಲಿ ದಾಳಿಗೊಳಗಾದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಶೀಘ್ರ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸುಷ್ಮಾ ಚಕ್ರೆ
|

Updated on: Oct 01, 2026 | 7:11 PM

Share

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಓಮನ್ ಮೂಲದ ಕೋ-ಪೈಲಟ್‌ನ ದುಷ್ಟ ಸಂಚನ್ನು ವಿಫಲಗೊಳಿಸಿ, ತೀವ್ರ ಚಾಕು ಇರಿತಕ್ಕೊಳಗಾದ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಶೀಘ್ರ ಚೇತರಿಕೆಗೆ ದೇಶಾದ್ಯಂತ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪೂಜೆ, ಹವನ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಶ್ವಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ 21 ಜನ ವಿದ್ವಾಂಸರು ಮತ್ತು ವೇದ ಪಂಡಿತರ ನೇತೃತ್ವದಲ್ಲಿ ಕ್ಯಾಪ್ಟನ್ ಸ್ಮಿತ್ ಅವರ ಶೀಘ್ರ ಆರೋಗ್ಯಕ್ಕಾಗಿ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು. ಇದರೊಂದಿಗೆ 11 ಜನ ಪ್ರಖ್ಯಾತ ವೈದಿಕ ವಿದ್ವಾಂಸರು ಸೇರಿ 1 ಲಕ್ಷ ‘ಮಹಾಮೃತ್ಯುಂಜಯ ಮಂತ್ರ’ ಜಪ ಅನುಷ್ಠಾನವನ್ನು ಪ್ರಾರಂಭಿಸಿದ್ದಾರೆ.

ವಾರಾಣಸಿ, ಅಕ್ಟೋಬರ್ 1: ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್‌ ನಡೆಸಿದ 9/11 ಮಾದರಿಯ ಜಿಹಾದಿ ಭಯೋತ್ಪಾದನಾ ದಾಳಿ ಹಾಗೂ ಪತನದ ಸಂಚನ್ನು ಸ್ವತಃ ಗಾಯಗೊಂಡರೂ ವಿಫಲಗೊಳಿಸಿ, 174 ಪ್ರಯಾಣಿಕರ ಪ್ರಾಣ ಉಳಿಸಿದ ಸಾಹಸಿ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಪೂರ್ಣ ಚೇತರಿಕೆ ಮತ್ತು ದೀರ್ಘಾಯುಷ್ಯಕ್ಕಾಗಿ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ವಿಶೇಷ ಧಾರ್ಮಿಕ ಅನುಷ್ಠಾನಗಳನ್ನು ಕೈಗೊಳ್ಳಲಾಗಿದೆ.

ವಿಶ್ವಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ 21 ಜನ ವಿದ್ವಾಂಸರು ಮತ್ತು ವೇದ ಪಂಡಿತರ ನೇತೃತ್ವದಲ್ಲಿ ಕ್ಯಾಪ್ಟನ್ ಸ್ಮಿತ್ ಅವರ ಶೀಘ್ರ ಆರೋಗ್ಯಕ್ಕಾಗಿ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು. ಇದರೊಂದಿಗೆ 11 ಜನ ಪ್ರಖ್ಯಾತ ವೈದಿಕ ವಿದ್ವಾಂಸರು ಸೇರಿ 1 ಲಕ್ಷ ‘ಮಹಾಮೃತ್ಯುಂಜಯ ಮಂತ್ರ’ ಜಪ ಅನುಷ್ಠಾನವನ್ನು ಪ್ರಾರಂಭಿಸಿದ್ದಾರೆ.

ಫ್ಲೈದುಬೈ FZ1073 ವಿಮಾನದ ಮುಖ್ಯ ಪೈಲಟ್ ಆಗಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರು ಕಾಕ್‌ಪಿಟ್‌ನಲ್ಲಿ ನಡೆದ ಭೀಕರ ಕಾದಾಟದ ವೇಳೆ ತೀವ್ರ ಗಾಯಗೊಂಡಿದ್ದಾರೆ. 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದ ಈ ವಿಮಾನವು ರೇಡಿಯೋ ತುರ್ತು ಸಂಕೇತಗಳನ್ನು ರವಾನಿಸಿ, 34,000 ಅಡಿಯಿಂದ 17,000ಕ್ಕೂ ಹೆಚ್ಚು ಅಡಿ ದಿಢೀರ್ ಕೆಳಕ್ಕೆ ಜಾರಿತ್ತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲುವಾಣಕ್ಕೆ ಬದಲಾಯಿಸಿ ಸುರಕ್ಷಿತವಾಗಿ ಇಳಿಸಲಾಗಿತ್ತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More