- TV9 Kannada Photo gallery Cricket photos Shafali Verma's Explosive 64: India vs Bangladesh Semifinal Heroics and T20 Records
ಏಷ್ಯಾಕಪ್ ಸೆಮಿಫೈನಲ್; 4 ಜೀವದಾನಗಳ ಲಾಭ ಪಡೆದು 64 ರನ್ ಚಚ್ಚಿದ ಶಫಾಲಿ
2026ರ ಮಹಿಳಾ ಟಿ20 ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಭಾರತದ ಶಫಾಲಿ ವರ್ಮಾ ಬಾಂಗ್ಲಾದೇಶದ ವಿರುದ್ಧ ಸ್ಫೋಟಕ 64 ರನ್ ಗಳಿಸಿದರು. ನಾಲ್ಕು ಜೀವದಾನಗಳನ್ನು ಪಡೆದ ಶಫಾಲಿ, ಅಂತರರಾಷ್ಟ್ರೀಯ ಟಿ20ಯಲ್ಲಿ 20ನೇ ಅರ್ಧಶತಕ ಪೂರೈಸಿದರು. ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳು, ಬಾಂಗ್ಲಾ ವಿರುದ್ಧ ಹೆಚ್ಚು 50+ ಸ್ಕೋರ್‌ಗಳು ಮತ್ತು ಭಾರತ ಪರ 50+ ಸ್ಕೋರ್‌ಗಳಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದರು.
Updated on: Sep 10, 2026 | 9:33 PM

2026 ರ ಮಹಿಳಾ ಟಿ20 ಏಷ್ಯಾಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಅರ್ಧಶತಕ ಬಾರಿಸಿದರು(PC-PTI).

ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಶಫಾಲಿಗೆ ಅದೃಷ್ಟವೂ ಸರಿಯಾಗಿ ಕೈಹಿಡಿಯಿತು. ಏಕೆಂದರೆ ಶಫಾಲಿಗೆ ಈ ಪಂದ್ಯದಲ್ಲಿ ಸಿಕ್ಕಿದ್ದು ಬರೋಬ್ಬರಿ 4 ಜೀವದಾನಗಳು ಇದರಲ್ಲಿ ಮೂರು ಸುಲಭ ಕ್ಯಾಚ್ಗಳಾದರೆ, ಇನ್ನೊಂದು ಸುಲಭ ರನೌಟ್. ಈ ನಾಲ್ಕು ಅವಕಾಶಗಳನ್ನು ಬಾಂಗ್ಲಾದೇಶ ತಂಡ ಕೈಚೆಲ್ಲಿತು(PC-PTI).

ಈ ನಾಲ್ಕು ಜೀವದಾನಗಳ ಲಾಭ ಪಡೆದ ಶಫಾಲಿ ವರ್ಮಾ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 64 ರನ್ಗಳ ಇನ್ನಿಂಗ್ಸ್ ಆಡಿದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಶಫಾಲಿ ಅವರ 20 ನೇ 50 ಪ್ಲಸ್ ಸ್ಕೋರ್ ಆಗಿತ್ತು(PC-PTI).

ಈ ಅರ್ಧಶತಕದೊಂದಿಗೆ ಶಫಾಲಿ ವರ್ಮಾ ಮಹಿಳಾ ಏಷ್ಯಾಕಪ್‌ನಲ್ಲಿ ನಾಲ್ಕು ಬಾರಿ 50+ ರನ್ ದಾಖಲಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಕೂಡ ನಾಲ್ಕು ಬಾರಿ 50+ ರನ್ ಗಳಿಸುವ ಮೂಲಕ ಶಫಾಲಿ ಜೊತೆಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ(PC-PTI).

ಹಾಗೆಯೇ ಬಾಂಗ್ಲಾದೇಶ ವಿರುದ್ಧ ಮಹಿಳಾ ಟಿ20ಕ್ರಿಕೆಟ್ನಲ್ಲಿ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿಯೂ ಶಫಾಲಿ ಅಗ್ರಸ್ಥಾನದಲ್ಲಿದ್ದಾರೆ. ಇದು ಬಾಂಗ್ಲಾದೇಶ ವಿರುದ್ಧ ಶಫಾಲಿ ಅವರ ನಾಲ್ಕನೇ 50+ ಸ್ಕೋರ್ ಆಗಿದೆ. ಪಾಕಿಸ್ತಾನದ ಜವೇರಿಯಾ ಖಾನ್, ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಐರ್ಲೆಂಡ್‌ನ ಗ್ಯಾಬಿ ಲೂಯಿಸ್ ತಲಾ ಮೂರು ಅರ್ಧಶತಕದ ಇನ್ನಿಂಗ್ಸ್ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ(PC-PTI).




