Asia Cup
ಏಷ್ಯಾ ಖಂಡದ ವಿಶ್ವಕಪ್ ಎಂತಲೇ ಪ್ರಸಿದ್ಧವಾಗಿರುವ ಏಷ್ಯಾಕಪ್, ಏಷ್ಯಾದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಇದನ್ನು 1984 ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಾರಂಭಿಸಿತು. 2016 ರಿಂದ, ಈ ಟೂರ್ನಿಯನ್ನು ಐಸಿಸಿಯ ಪ್ರಮುಖ ಪಂದ್ಯಾವಳಿಗಳ ಸ್ವರೂಪಕ್ಕೆ ಅನುಗುಣವಾಗಿ ಅಂದರೆ ಏಕದಿನ ಸ್ವರೂಪ ಅಥವಾ ಟಿ20 ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಇಲ್ಲಿಯವರೆಗೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಈ ಟೂರ್ನಿಯಲ್ಲಿ ಭಾರತ ಅತಿ ಹೆಚ್ಚು ಅಂದರೆ 8 ಬಾರಿ (1984, 1988, 1991, 1995, 2010, 2016, 2018, 2023) ಪ್ರಶಸ್ತಿಯನ್ನು ಗೆದ್ದಿದ್ದರೆ, ಶ್ರೀಲಂಕಾ 6 ಬಾರಿ (1986, 1997, 2004, 2008, 2014, 2022) ಚಾಂಪಿಯನ್ ಆಗಿದೆ. ಉಳಿದಂತೆ ಪಾಕಿಸ್ತಾನ ಕೂಡ 2 ಬಾರಿ (2000, 2012) ಟ್ರೋಫಿಯನ್ನು ಗೆದ್ದಿದೆ. ಬಾಂಗ್ಲಾದೇಶ ಕೂಡ 3 ಬಾರಿ ಫೈನಲ್ ತಲುಪಿದೆಯಾದರೂ ಇಲ್ಲಿಯವರೆಗೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ.
ಇನ್ನೂ ಹೆಚ್ಚು ಓದಿ2 ಏಷ್ಯಾಕಪ್ ಟ್ರೋಫಿಗಳು ಭಾರತಕ್ಕೆ ಬರುವುದು ಯಾವಾಗ? ಬಿಸಿಸಿಐ ಹೇಳಿದ್ದಿದು
ಟೀಂ ಇಂಡಿಯಾ ಸತತ ಎರಡು ಏಷ್ಯಾಕಪ್ ಗೆದ್ದರೂ, ಎಸಿಸಿ ಅಧ್ಯಕ್ಷರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಟ್ರೋಫಿ ಇನ್ನೂ ಭಾರತಕ್ಕೆ ಬಂದಿಲ್ಲ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಈ ಟ್ರೋಫಿಗಳು ಖಂಡಿತಾ ಭಾರತಕ್ಕೆ ಮರಳುತ್ತವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಯಾವಾಗ ಎಂಬ ಸಮಯ ನಿಗದಿಪಡಿಸಿಲ್ಲ. ಮಹಿಳಾ ತಂಡದ ಏಷ್ಯನ್ ಗೇಮ್ಸ್ ಚಿನ್ನದ ಪದಕದ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ.
- pruthvi Shankar
- Updated on: Sep 18, 2026
- 10:40 pm
‘ಭಾರತಕ್ಕೆ ಹೆಮ್ಮೆಯ ಕ್ಷಣ’; ಮಹಿಳಾ ಪಡೆಯನ್ನು ಅಭಿನಂದಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಮಹತ್ವದ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ತಂಡವನ್ನು ಅಭಿನಂದಿಸಿದ್ದು, ಅವರ ಆತ್ಮವಿಶ್ವಾಸ ಮತ್ತು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಕ್ಕೆ ಶ್ಲಾಘಿಸಿದ್ದಾರೆ.
- pruthvi Shankar
- Updated on: Sep 14, 2026
- 9:01 pm
ಏಷ್ಯನ್ ಕ್ರಿಕೆಟ್‌ನಲ್ಲಿ ಮೊಹ್ಸಿನ್ ನಖ್ವಿ ಅಧಿಕಾರಾವಧಿ ಇನ್ನೇಷ್ಟು ವರ್ಷ?
ಪಾಕಿಸ್ತಾನದ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿರುವ ನಖ್ವಿ, ಎಸಿಸಿ ರೋಟೇಶನ್ ನಿಯಮದಡಿಯಲ್ಲಿ ಏಪ್ರಿಲ್ 3, 2025 ರಂದು ಈ ಹುದ್ದೆಗೇರಿದ್ದಾರೆ. ಅವರ ಅಧಿಕಾರಾವಧಿ 2 ವರ್ಷ. ಈ ಹಿಂದೆ ಭಾರತದ ಜಯ್ ಶಾ ಅತಿ ಹೆಚ್ಚು ಕಾಲ, ನಾಲ್ಕು ವರ್ಷಗಳವರೆಗೆ ಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ದಾಖಲೆ ಮಾಡಿದ್ದರು. ಬಿಸಿಸಿಐ ವಿರೋಧದಿಂದ ನಖ್ವಿ ಅಧಿಕಾರಾವಧಿ ವಿಸ್ತರಣೆಯಾಗದು.
- pruthvi Shankar
- Updated on: Sep 14, 2026
- 2:46 pm
ಸ್ಟೇಡಿಯಂನಲ್ಲಿ ಮೊಳಗಿದ ‘ಟ್ರೋಫಿ ಕಳ್ಳ’ ಘೋಷಣೆ: ಮುಜುಗರದಿಂದಲೇ ಹೊರ ನಡೆದ ನಖ್ವಿ; ವಿಡಿಯೋ
ಭಾರತ ಮಹಿಳಾ ಕ್ರಿಕೆಟ್ ತಂಡ 2026ರ ಏಷ್ಯಾಕಪ್ ಗೆದ್ದು ದಾಖಲೆಯ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಆದರೆ ದುಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರ್ತಿಯರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದರು. ಕಳೆದ ವರ್ಷ ಪುರುಷರ ತಂಡದಂತೆ ಈ ವರ್ಷವೂ ಮಹಿಳಾ ತಂಡ ನಖ್ವಿಯಿಂದ ಟ್ರೋಫಿ ಪಡೆಯಲಿಲ್ಲ. ಇದರಿಂದ ನಖ್ವಿಗೆ ಮತ್ತೊಮ್ಮೆ ಮುಖಭಂಗವಾಯಿತು, ಅಭಿಮಾನಿಗಳು 'ಟ್ರೋಫಿ ಕಳ್ಳ' ಎಂದು ಘೋಷಣೆ ಕೂಗಿದರು.
- pruthvi Shankar
- Updated on: Sep 14, 2026
- 2:00 pm
ಮಹಿಳಾ ಟಿ20 ಏಷ್ಯಾಕಪ್ ಫೈನಲ್ ಗೆದ್ದರೂ ಕಪ್ ಸ್ವೀಕರಿಸದ ಟೀಂ ಇಂಡಿಯಾ! ಬಿಸಿಸಿಐ ಕೊಟ್ಟ ಕಾರಣ ಇಲ್ಲಿದೆ
ಟೀಂ ಇಂಡಿಯಾ ಪುರುಷರ ತಂಡ ಕಳೆದ ವರ್ಷ ಏಷ್ಯಾಕಪ್ ಟ್ರೋಫಿ ಸ್ವೀಕರಿಸದೆ ತೆಗೆದುಕೊಂಡಿದ್ದ ನಿಲುವಿನ ಹಾದಿಯನ್ನೇ ಇದೀಗ ಮಹಿಳಾ ತಂಡವೂ ಹಿಡಿದಿದೆ. ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡರೂ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದೆ ಮಹಿಳಾ ತಂಡ ದಿಟ್ಟ ನಿಲುವು ಪ್ರದರ್ಶಿಸಿದೆ. ಈ ಬಗ್ಗೆ ಬಿಸಿಸಿಐ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.
- Ganapathi Sharma
- Updated on: Sep 14, 2026
- 8:50 am
ಸೇಡಿನ ಸಮರದಲ್ಲಿ ಗೆದ್ದು ಏಷ್ಯನ್ ಕಿರೀಟ ತೊಟ್ಟ ಭಾರತದ ವನಿತೆಯರು
ದುಬೈನಲ್ಲಿ ನಡೆದ 2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ದಾಖಲೆಯ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಶಫಾಲಿ ವರ್ಮಾ ಕೇವಲ 24 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಮಂಧಾನ ಜೊತೆ ಸೇರಿ 129 ರನ್‌ಗಳ ಬೃಹತ್ ಜೊತೆಯಾಟವಾಡಿ ಭಾರತದ ಭರ್ಜರಿ 183 ರನ್‌ಗಳಿಗೆ ಅಡಿಪಾಯ ಹಾಕಿದರು. ಬೃಹತ್ ಗುರಿ ಬೆನ್ನಟ್ಟಿದ ಲಂಕಾ ತಂಡ ಒತ್ತಡಕ್ಕೆ ಸಿಲುಕಿ ಭಾರತಕ್ಕೆ ಸುಲಭ ಗೆಲುವು ದಕ್ಕಿಸಿತು.
- pruthvi Shankar
- Updated on: Sep 13, 2026
- 11:25 pm
ಮಹಿಳಾ ಏಷ್ಯಾಕಪ್ ಫೈನಲ್; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಶಫಾಲಿ
ದುಬೈನಲ್ಲಿ ನಡೆದ 2026 ರ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ಸ್ಫೋಟಕ ಅರ್ಧಶತಕ ಬಾರಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಈ ವರ್ಷ ಅಂತರರಾಷ್ಟ್ರೀಯ T20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಮಂಧಾನ ಅವರನ್ನು ಹಿಂದಿಕ್ಕಿ 668 ರನ್ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.
- pruthvi Shankar
- Updated on: Sep 13, 2026
- 10:37 pm
ಏಷ್ಯಾಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ಭಾರತ; ಪ್ರಶಸ್ತಿ ಪಂದ್ಯಕ್ಕೆ ತಂಡದಲ್ಲಿ 1 ಬದಲಾವಣೆ
2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ದುಬೈನಲ್ಲಿ ಭಾರತ ಶ್ರೀಲಂಕಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಟಾಸ್ ಗೆದ್ದಿದೆ. ಭಾರತ ಈವರೆಗೆ 8 ಬಾರಿ ಪ್ರಶಸ್ತಿ ಗೆದ್ದಿದ್ದು, ಕಳೆದ ಆವೃತ್ತಿಯಲ್ಲಿ ಶ್ರೀಲಂಕಾ ಭಾರತವನ್ನು ಸೋಲಿಸಿತ್ತು. ಉಭಯ ತಂಡಗಳು ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಮಾಡಿವೆ.
- pruthvi Shankar
- Updated on: Sep 13, 2026
- 7:49 pm
ಭಾರತ- ಶ್ರೀಲಂಕಾ ನಡುವೆ ಏಷ್ಯಾಕಪ್ ಫೈನಲ್; ಈ ಚಾನೆಲ್ನಲ್ಲಿ ನೇರ ಪ್ರಸಾರ
2026ರ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳು ಸಜ್ಜಾಗಿವೆ. ಎರಡೂ ತಂಡಗಳು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ. ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಕಾತುರದಲ್ಲಿದೆ. ಸೆಪ್ಟೆಂಬರ್ 13ರಂದು ದುಬೈನಲ್ಲಿ ರಾತ್ರಿ 8 ಗಂಟೆಗೆ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಮತ್ತು ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು.
- pruthvi Shankar
- Updated on: Sep 12, 2026
- 10:48 pm
2027 ರ ಏಷ್ಯಾಕಪ್‌ಗೆ 6 ತಂಡಗಳು ಫೈನಲ್; ಕೊನೆಯ ತಂಡವಾಗಿ ನೇಪಾಳ ಎಂಟ್ರಿ
ನೇಪಾಳ ಕ್ರಿಕೆಟ್ ತಂಡ ಎಸಿಸಿ ಪ್ರೀಮಿಯರ್ ಕಪ್ ಗೆದ್ದು 2027ರ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಮಲೇಷ್ಯಾದಲ್ಲಿ ನಡೆದ ಈ ಪಂದ್ಯದಲ್ಲಿ ನೇಪಾಳ, ಯುಎಇ ವಿರುದ್ಧ 44 ರನ್‌ಗಳ ಜಯ ಸಾಧಿಸಿತು. ಆಸಿಫ್ ಶೇಖ್ ಅವರ ಶತಕ ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಯಿತು. ಸಂದೀಪ್ ಲಮಿಚಾನೆ ನೇತೃತ್ವದ ನೇಪಾಳ, ಮುಂದಿನ ಏಷ್ಯಾಕಪ್‌ಗೆ ಅರ್ಹತೆ ಪಡೆದ 6ನೇ ತಂಡವಾಗಿದೆ.
- pruthvi Shankar
- Updated on: Sep 12, 2026
- 6:49 pm
ಟೀಂ ಇಂಡಿಯಾ ಏಷ್ಯಾಕಪ್ ಗೆದ್ದರೆ ಟ್ರೋಫಿ ಜೊತೆಗೆ ಬಹುಮಾನವೂ ಸಿಗುವುದಿಲ್ಲ..!
2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಪ್ಟೆಂಬರ್ 13ರಂದು ಮುಖಾಮುಖಿಯಾಗಲಿವೆ. ಕಳೆದ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಆದರೆ, ಗೆದ್ದರೂ ಭಾರತಕ್ಕೆ ಟ್ರೋಫಿ ಅಥವಾ ಬಹುಮಾನದ ಹಣ ಸಿಗುವುದಿಲ್ಲ. ಬಿಸಿಸಿಐ ಬಹುಮಾನವನ್ನು ಇತರ ಕ್ರಿಕೆಟ್ ಮಂಡಳಿಗಳಿಗೆ ನೀಡುವ ಸಂಪ್ರದಾಯ ಹೊಂದಿದ್ದು, ACC ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸದಿರುವ ನಿರ್ಧಾರ ಇದಕ್ಕೆ ಕಾರಣ.
- pruthvi Shankar
- Updated on: Sep 12, 2026
- 2:55 pm
ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್ಗೇರಿದ ಟೀಂ ಇಂಡಿಯಾ
2026ರ ಮಹಿಳಾ ಟಿ20 ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶವನ್ನು ಸುಲಭವಾಗಿ ಸೋಲಿಸಿ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಶಫಾಲಿ ವರ್ಮಾ 64 ರನ್ ಗಳಿಸಿ ಮಿಂಚಿದರೆ, ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಪ್ರಬಲ ಪ್ರದರ್ಶನ ನೀಡಿದರು. 149 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಭಾರತದ ಬೌಲಿಂಗ್ ಮುಂದೆ ಶರಣಾಯಿತು.
- pruthvi Shankar
- Updated on: Sep 10, 2026
- 11:12 pm