AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್​ ಫೈನಲ್​ನಲ್ಲಿ ಟಾಸ್ ಗೆದ್ದ ಭಾರತ; ಪ್ರಶಸ್ತಿ ಪಂದ್ಯಕ್ಕೆ ತಂಡದಲ್ಲಿ 1 ಬದಲಾವಣೆ

2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ದುಬೈನಲ್ಲಿ ಭಾರತ ಶ್ರೀಲಂಕಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಟಾಸ್ ಗೆದ್ದಿದೆ. ಭಾರತ ಈವರೆಗೆ 8 ಬಾರಿ ಪ್ರಶಸ್ತಿ ಗೆದ್ದಿದ್ದು, ಕಳೆದ ಆವೃತ್ತಿಯಲ್ಲಿ ಶ್ರೀಲಂಕಾ ಭಾರತವನ್ನು ಸೋಲಿಸಿತ್ತು. ಉಭಯ ತಂಡಗಳು ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಮಾಡಿವೆ.

ಏಷ್ಯಾಕಪ್​ ಫೈನಲ್​ನಲ್ಲಿ ಟಾಸ್ ಗೆದ್ದ ಭಾರತ; ಪ್ರಶಸ್ತಿ ಪಂದ್ಯಕ್ಕೆ ತಂಡದಲ್ಲಿ 1 ಬದಲಾವಣೆ
ಭಾರತ Vs ಶ್ರೀಲಂಕಾImage Credit source: BCCI Women X
ಪೃಥ್ವಿಶಂಕರ
|

Updated on:Sep 13, 2026 | 7:49 PM

Share

ದುಬೈನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 2026 ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲಿದೆ. ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದಿರುವುದು ಇದೇ ಮೊದಲು. ಇದಕ್ಕೂ ಮೊದಲು ನಡೆದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತಿದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಟೀಂ ಇಂಡಿಯಾ ಟಾಸ್ ಗೆದ್ದಿದ್ದು ಮತ್ತೆ ಬ್ಯಾಟಿಂಗ್‌ ಮಾಡಲು ನಿರ್ಧರಿಸಿದೆ.

ಉಭಯ ತಂಡಗಳ ಪ್ರದರ್ಶನ

ಈ ಪಂದ್ಯಾವಳಿಯಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತ ತಂಡ ಫೈನಲ್‌ಗೆ ತಲುಪಿದ್ದರೆ, ಇತ್ತ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಶ್ರೀಲಂಕಾ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದೆ. ಭಾರತ ತಂಡವು ಟೂರ್ನಿಯ ಇತಿಹಾಸದಲ್ಲಿ ಪ್ರತಿ ಬಾರಿಯೂ ಫೈನಲ್ ತಲುಪಿದ್ದು, 8 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತ ಶ್ರೀಲಂಕಾ ಕಳೆದ ಆವೃತ್ತಿಯಲ್ಲಿ ಇದೇ ಭಾರತವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕುತೂಹಲ ಮೂಡಿಸಿದೆ.

ತಂಡದಲ್ಲಿ 1 ಬದಲಾವಣೆ

ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಭಾರತ ತಂಡವು ತನ್ನ ಪ್ಲೇಯಿಂಗ್ 11 ರಲ್ಲಿ ಒಂದು ಬದಲಾವಣೆಯನ್ನು ಮಾಡಿದೆ. ಇಡೀ ಪಂದ್ಯಾವಳಿಯಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಪ್ರತೀಕಾ ರಾವಲ್ ಬದಲಿಗೆ ಗುಣಾಲನ್ ಕಮಲಿನಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಶ್ರೀಲಂಕಾ ಕೂಡ ತನ್ನ ಪ್ಲೇಯಿಂಗ್ 11 ರಲ್ಲಿ ಒಂದು ಬದಲಾವಣೆಯನ್ನು ಮಾಡಿದೆ.

ಉಭಯ ತಂಡಗಳು

ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜಿ ಕಮಲಿನಿ (ಪ್ರತಿಕಾ ರಾವಲ್ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಭಾರತಿ ಫುಲ್ಮಾಲಿ, ಪ್ರೇಮಾ ರಾವತ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ.

ಶ್ರೀಲಂಕಾ ಮಹಿಳಾ ತಂಡ: ಚಾಮರಿ ಅಟಾಪಟು (ನಾಯಕಿ), ಇಮೇಶಾ ದುಲಾನಿ, ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿಕಾ ಸಿಲ್ವಾ, ಕೌಶಿನಿ ನುತ್ಯಂಗನಾ (ವಿಕೆಟ್ ಕೀಪರ್), ಸುಗಂದಿಕಾ ಕುಮಾರಿ, ಚಾಮುದಿ ಪ್ರಬೋದಾ, ಮಿಥಾಲಿ ಅಯೋಧ್ಯೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Sun, 13 September 26

Follow Us