- TV9 Kannada Kannada News Photos Cricket Photos Women's T20 Asia Cup Final: India vs Sri Lanka! Why India Won't Get Trophy/Prize?
ಟೀಂ ಇಂಡಿಯಾ ಏಷ್ಯಾಕಪ್ ಗೆದ್ದರೆ ಟ್ರೋಫಿ ಜೊತೆಗೆ ಬಹುಮಾನವೂ ಸಿಗುವುದಿಲ್ಲ..!
2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಪ್ಟೆಂಬರ್ 13ರಂದು ಮುಖಾಮುಖಿಯಾಗಲಿವೆ. ಕಳೆದ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಆದರೆ, ಗೆದ್ದರೂ ಭಾರತಕ್ಕೆ ಟ್ರೋಫಿ ಅಥವಾ ಬಹುಮಾನದ ಹಣ ಸಿಗುವುದಿಲ್ಲ. ಬಿಸಿಸಿಐ ಬಹುಮಾನವನ್ನು ಇತರ ಕ್ರಿಕೆಟ್ ಮಂಡಳಿಗಳಿಗೆ ನೀಡುವ ಸಂಪ್ರದಾಯ ಹೊಂದಿದ್ದು, ACC ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸದಿರುವ ನಿರ್ಧಾರ ಇದಕ್ಕೆ ಕಾರಣ.
Updated on:Sep 12, 2026 | 2:55 PM

2026 ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್ನಲ್ಲಿ ಯಾವೆರಡು ತಂಡಗಳು ಮುಖಾಮುಖಿಯಾಗಲಿವೆ ಎಂಬುದು ಖಚಿತವಾಗಿದೆ. ಒಂದೆಡೆ ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಟೀಂ ಇಂಡಿಯಾ ಅಜೇಯ ತಂಡವಾಗಿ ಫೈನಲ್ಗೇರಿದ್ದರೆ, ಇತ್ತ ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಶ್ರೀಲಂಕಾ ಕೂಡ ಅಜೇಯ ತಂಡವಾಗಿ ಫೈನಲ್ಗೇರಿದೆ(PC-ACC X).

ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ಸೆಫ್ಟೆಂಬರ್ 13 ರ ಭಾನುವಾರದಂದು ನಡೆಯಲಿದೆ. ಈ ಫೈನಲ್ ಪಂದ್ಯದಲ್ಲಿ ಗೆದ್ದು ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಟೀಂ ಇಂಡಿಯಾವಿದೆ. ವಾಸ್ತವವಾಗಿ ಕಳೆದ ಆವೃತ್ತಿಯ ಏಷ್ಯಾಕಪ್ ಫೈನಲ್ನಲ್ಲಿ ಈ ಎರಡು ತಂಡಗಳೇ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಶ್ರೀಲಂಕಾ ಚಾಂಪಿಯನ್ ಆಗಿತ್ತು(PC-BCCI Women X).

ಇದೀಗ ಶ್ರೀಲಂಕಾವನ್ನು ಮಣಿಸುವ ಮೂಲಕ ಚಾಂಪಿಯನ್ ಆಗುವ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ಅದಕ್ಕೆ ಟ್ರೋಫಿಯಾಗಲಿ ಅಥವಾ ಬಹುಮಾನದ ಹಣವಾಗಲಿ ಸಿಗುವುದಿಲ್ಲ. ಹಾಗಿದ್ದರೆ, ಟೀಂ ಇಂಡಿಯಾಕ್ಕೆ ಏಕೆ ಟ್ರೋಫಿ ಮತ್ತು ಬಹುಮಾನ ಸಿಗುವುದಿಲ್ಲ ಎಂಬುದನ್ನು ನೋಡುವುದಾದರೆ(PC-BCCI Women X)..

ಮೊದಲಿಗೆ ಟೀಂ ಇಂಡಿಯಾ ಚಾಂಪಿಯನ್ ಆದರೆ ಅದಕ್ಕೆ ಬಹುಮಾನವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನೀಡುತ್ತದೆ. ಆದರೆ ಈ ಬಹುಮಾನವನ್ನು ಟೀಂ ಇಂಡಿಯಾ ತನ್ನಲ್ಲಿ ಉಳಿಸಿಕೊಳ್ಳುವುದಿಲ್ಲ. ಬದಲಿಗೆ ಏಷ್ಯಾದ ಇತರ ಕ್ರಿಕೆಟ್ ಮಂಡಳಿಗಳ ಅಭಿವೃದ್ಧಿಗೆ ನೀಡುತ್ತದೆ. ಬಿಸಿಸಿಐನ ಈ ಪ್ರವೃತ್ತಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಹೀಗಾಗಿ ಈ ವರ್ಷವೂ ಅದೇ ಮುಂದುವರೆಯಲಿದೆ(PC-BCCI Women X).

ಇನ್ನು ಟೀಂ ಇಂಡಿಯಾಕ್ಕೆ ಟ್ರೋಫಿ ಏತಕೆ ಸಿಗುವುದಿಲ್ಲ ಎಂಬುದನ್ನು ನೋಡುವುದಾದರೆ...ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವುದು ಪಾಕಿಸ್ತಾನದ ಮೊಹ್ಸಿನ್ ನಖ್ವಿ. ನಖ್ವಿ ಕೈಯಿಂದ ಟೀಂ ಇಂಡಿಯಾ ಟ್ರೋಫಿ ಸ್ವೀಕರಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಪುರುಷರ ಏಷ್ಯಾಕಪ್ನಲ್ಲಿ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲಿಲ್ಲ. ಇದರಿಂದ ನಖ್ವಿ ಟ್ರೋಫಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ. ಇದೀಗ ಮಹಿಳಾ ತಂಡವೂ ಕೂಡ ಪುರುಷರ ತಂಡದ ನಡೆಯನ್ನು ಅನುಸರಿಸುವ ಸಾಧ್ಯತೆಗಳಿವೆ(PC-BCCI Women X).
Published On - 2:55 pm, Sat, 12 September 26

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More