ದಿನ ಭವಿಷ್ಯ: ಇಂದು ಈ ರಾಶಿಯವರ ನ್ಯಾಯದ ಹೋರಾಟಕ್ಕೆ ಹಲವರಿಂದ ಬೆಂಬಲ…
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಗುರುವಾರದಂದು ಅತಿಯಾದ ಹೂಡಿಕೆ, ಅನಾರೋಗ್ಯದ ನಿರ್ಲಕ್ಷ್ಯ, ತಾಯಿಯ ಆಸ್ತಿಯ ನಿರೀಕ್ಷೆ, ಸ್ತ್ರೀಯರಿಂದ ಮುಜುಗರ, ಸೋಲಿನ ನೋವು, ವಂಚನೆಯ ಖುಷಿ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ಕುಟುಂಬಕ್ಕೆ ಧಕ್ಕೆಯಾಗದಂತೆ ನೀವು ನೋಡಿಕೊಳ್ಳಬೇಕಾಗಿದೆ. ಪ್ರೇಮಜೀವನಕ್ಕೆ ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಸಲಹೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಸಂತೋಷವನ್ನು ಕೆಲವರಿಗೆ ಸಹಿಸುವುದು ಕಷ್ಟವಾದೀತು. ಆತ್ಮವಿಶ್ವಾಸ ಕೊರತೆ ಎದ್ದು ಕಾಣಬಹುದು. ಸುಲಭವಾಗಿ ಸಿಕ್ಕುವುದನ್ನು ನೀವು ಕಷ್ಟದಿಂದ ಪಡೆದುಕೊಳ್ಳಲಿದ್ದೀರಿ. ನೆನಪಿನ ಶಕ್ತಿಯು ಕಡಿಮೆ ಆಗಲಿದೆ.
ವೃಷಭ ರಾಶಿ:
ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ಕಾಲದಿಂದ ನೀವು ಮುಕ್ತರಾಗಿ ಸಂತೋಷಪಡುವಿರಿ. ಮನೆಯಲ್ಲಿ ಮಂಗಲಕಾರ್ಯಕ್ಕೆ ಆಸಕ್ತಿಯನ್ನು ತೋರುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ತರುವರು. ಗೌರವ ಕೊಡಬೇಕಾದವರಿಗೆ ಅಗೌರವ ತೋರುವುದು ವ್ಯತಿಕ್ರಮವಾಗುವುದು ದೋಷ. ಮನೆಯ ಗೋವುಗಳಿಗೆ ಆಹಾರ ಕೊಡುವ ಇಚ್ಛೆ ಬರಲಿದೆ. ವಿಶ್ರಾಂತಿಯಿಂದ ಇಂದಿನ ಕಾರ್ಯವು ಪೂರ್ಣವಾಗದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಕ್ಕೆ ಯಾರಾದರೂ ಸಿಕ್ಕಾರು.
ಮಿಥುನ ರಾಶಿ:
ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸುವಿರಿ. ಸಂಗಾತಿಗಳ ನಡುವೆ ಸ್ವಪ್ರತಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಸಂಕಷ್ಟಕ್ಕೆ ನೆರವಾಗಬಹುದು. ನಿಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕಲಿದ್ದೀರಿ. ವಿದೇಶದ ಪರಿಚಿತರಿಂದ ಸಹಾಯವನ್ನು ಪಡೆಯುವಿರಿ. ಇಂದಿನ ಕೆಲಸಗಳು ವಿಳಂಬವಾಗಬಹುದು. ಕಫಾಧಿಕ್ಯದಿಂದ ಉಸಿರಾಟದ ತೊಂದರೆ ಬರಲಿದೆ. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ.
ಕರ್ಕಾಟಕ ರಾಶಿ:
ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು. ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪವನ್ನು ಮಾಡುವುದು ಇಷ್ಟವಾಗದು. ಹಳೆಯ ನೆನಪುಗಳು ನಿಮ್ಮ ಕಾಡಬಹುದು. ಯಂತ್ರಾಗಾರದ ಉದ್ಯೋಗಿಗಳಿಗೆ ಇಂದು ವಿಶ್ರಾಂತಿ ಅವಶ್ಯಕ. ಎಲ್ಲ ರೀತಿಯಿಂದ ಹೊಂದಿಕೆ ಆಗುವವರ ಜೊತೆ ಸ್ನೇಹವನ್ನು ಮಾಡುವಿರಿ. ಕೆಲವರು ನಿಮ್ಮ ನಂಬಿಕೆಗೆ ಘಾಸಿಯನ್ನು ಉಂಟುಮಾಡಬಹುದು. ಮಿತ್ರರಂತೆ ಇರುವವರನ್ನು ನೀವು ತಿಳಿದುಕೊಳ್ಳುವಿರಿ. ಒತ್ತಡದಿಂದ ನಿಮಗೆ ಯಾವುದೇ ಕ್ರಿಯಾತ್ಮಕ ವಿಚಾರಗಳು ಸೂಚಿಸದೇ ಹೋಗಬಹುದು.
ಸಿಂಹ ರಾಶಿ:
ಇಂದು ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಉತ್ಸವಗಳಲ್ಲಿ ಸಂಭ್ರಮದಿಂದ ಭಾಗಿ. ಸರ್ಕಾರದ ಉದ್ಯೋಗಿಗಳು ನಿಮಗೆ ಅನುಕೂಲಕರವಾದುದನ್ನು ಸೃಷ್ಟಿಮಾಡಿಕೊಳ್ಳುವಿರಿ. ಯಾರಿಗೂ ಹೇಳದೇ ಎಲ್ಲಿಗಾದರೂ ಹೋಗಲಿದ್ದೀರಿ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಂಡು ಸಮಾಧಾನಪಡುವಿರಿ. ಇನ್ನೊಬ್ಬರ ವಿಚಾರಗಳನ್ನು ಕೇಳಲು ನಿಮಗೆ ಕುತೂಹಲವು ಅಧಿಕವಾಗಿರುವುದು.
ಕನ್ಯಾ ರಾಶಿ:
ಅನಪೇಕ್ಷಿತ ವಿಚಾರಗಳನ್ನು ಚರ್ಚಿಸಿ ಸಮಯವನ್ನು ವ್ಯರ್ಥಮಾಡುವಿರಿ. ಉದ್ಯಮದಲ್ಲಿ ಎಂದಿಗಿಂತ ಕಡಿಮೆ ಲಾಭವಾಗುವುದು. ಪ್ರೀತಿಯ ಕೊರತೆ ನಿಮ್ಮ ಮಾತಿನಲ್ಲಿ ಎದ್ದು ಕಾಣಿಸುವುದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ನಮಗೆ ಗೊತ್ತಾಗದೇ ಒದ್ದಾಟ. ಬಂಗಾರವನ್ನು ಅನಿವಾರ್ಯವಾಗಿ ಖರೀದಿಸಲಿದ್ದೀರಿ. ನಿಮ್ಮ ಚಿಂತನೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಒಟ್ಟಿಗೇ ಅನೇಕ ಕೆಲಸಗಳಲ್ಲಿ ನೀವು ಮಗ್ನರಾಗಿರುವಿರಿ.
ತುಲಾ ರಾಶಿ :
ನಿಮ್ಮ ಹೊಸ ಒಪ್ಪಂದಗಳು ಕೈಗೂಡದೇ ಹೋಗಬಹುದು. ನೀವು ಮಾಡಿದ ತಪ್ಪಿಗೆ ಇನ್ನೊಬ್ಬರನ್ನು ತೋರಿಸುವುದು ಸರಿಯಲ್ಲ. ಮಿತ್ರರನ್ನು ಅನುಮಾನದಿಂದ ಕಾಣುವಿರಿ. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಧನಯೋಗವನ್ನು ಯಾರಾದರೂ ತಪ್ಪಿಸಿದರೂ ಹೇಗಾದರೂ ನಿಮಗೆ ಕಿಂಚಿತ್ ಆದರೂ ಲಭ್ಯವಾಗದೇ ಇರದು. ಮನೋರಂಜನೆಯಲ್ಲಿ ನೀವು ಮೈಮೆರೆಯುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆಯನ್ನು ಮಾಡಿಸಿ. ನಿಮ್ಮ ಬಗೆಗಿನ ಪೊಳ್ಳು ಹೇಳಿಕೆಗಳು ನಿಲ್ಲದೇ ಹೋಗಬಹುದು.
ವೃಶ್ಚಿಕ ರಾಶಿ:
ಇಂದು ನಿಮ್ಮ ಹಲವು ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ. ತೆಗಳಿಕೆಗಳನ್ನು ನೀವು ಸ್ವೀಕರಿಸಲು ಸಿದ್ಧರಿರುವುದಿಲ್ಲ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿ ಕೆಲಸವನ್ನು ಮಾಡುವಿರಿ. ಇದರಿಂದ ಸಿಟ್ಟಾಗಬಹುದು. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯು ನಿಮ್ಮನ್ನು ಮತ್ತೆ ಕಾಡಬಹುದು. ಹೊಸ ಕಾರ್ಯಕ್ಕೆ ನಿಮಿತ್ತವನ್ನು ನೋಡಿ ಹೊರಡಿ. ಪೂರ್ವಸಿದ್ಧತೆಯನ್ನು ಮಾಡಿಕೊಂಡು ಯಾವ ಕೆಲಸಕ್ಕಾದರೂ ಇಳಿಯಿರಿ. ಎಲ್ಲರೂ ನಿಮಗೆ ಹೊಸಬರಂತೆ ಕಾಣುವರು.
ಧನು ರಾಶಿ:
ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ಒಂದೇ ತರದ ಜೀವನವು ನಿಮಗೆ ಬೇಸರವನ್ನು ತಂದೀತು. ಏನನ್ನಾದರೂ ಹೊಸತನ್ನು ಮಾಡಲು ಬಯಸುವಿರಿ. ಆರೋಗ್ಯದ ವಿಮೆಗಳನ್ನು ಅರ್ಧಕ್ಕೆ ಬಿಡದೇ ನವೀಕರಣ ಮಾಡಿಕೊಳ್ಳುವಿರಿ. ಹಿರಿಯರ ಮಾತಿಗೆ ಎದುರಾಡುವುದು ಸರಿಯಾಗದು. ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಿ. ನೌಕರರ ಪ್ರಾಮಾಣಿಕತೆಗೆ ಬೆಲೆ ಸಿಗುವುದು.
ಮಕರ ರಾಶಿ:
ಇಂದು ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನಗಳು ಸಫಲವಾಗಲಿದೆ. ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸಂಗಾತಿಗಳು ದೂರಾಗಬಹುದು. ನಿಮ್ಮ ಖಾತೆಯಲ್ಲಿ ಹಣವು ಕಡಿಮೆ ಆಗಿ ಆತಂಕ ಸೃಷ್ಟಿಯಾಗಬಹುದು. ಸರ್ಕಾರದಿಂದ ಆಗುವ ಕೆಲಸವನ್ನು ಬಹಳ ಸೂಕ್ಷ್ಮತೆಯಿಂದ ನಿಮಗಾಗಬೇಕಾದ ಕೆಲಸವನ್ನು ಮಾಡಿಕೊಳ್ಳುವಿರಿ. ನಿಮ್ಮ ದೂರು ತರ್ಕಬದ್ಧವೂ ನ್ಯಾಯಬದ್ಧವೂ ಆಗಿರಲಿ. ಅನಿರೀಕ್ಷಿತವಾಗಿ ಬರವ ಕೆಲವು ಸುದ್ದಿಗಳು ನಿಮಗೆ ದುಃಖವನ್ನು ಕೊಡಬಹುದು.
ಕುಂಭ ರಾಶಿ:
ಬಹಳ ದಿನಗಳಿಂದ ಮರೆತುಹೋದ ಸ್ನೇಹಿತರನ್ನು ಅನಿರೀಕ್ಷೀತ ಭೇಟಿಯಾಗುವಿರಿ. ಪೂರ್ವಪುಣ್ಯವು ನಿಮ್ಮನ್ನು ಕಾಪಾಡುವುದು. ನಿಮ್ಮನ್ನು ಹಾಸ್ಯ ಮಾಡಬಹುದು. ಯಾರೋ ಆಡಿದ ಮಾತಿನಿಂದ ನಿಮಗೆ ಬೇಸರವಾಗಬಹುದು. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕುವಿರಿ. ಉಪಾಕರದ ಸ್ಮರಣೆಯನ್ನು ಇಟ್ಟಕೊಂಡು ಮುಂದುವರಿಯಿರಿ. ಸಿಟ್ಟು ಮಾಡುವ ಸಂದರ್ಭದಲ್ಲಿ ಸಿಟ್ಟ ನಿಮ್ಮ ಹಿಡಿತದಲ್ಲಿ ಇರಲಿ. ಸುತ್ತಾಡುವ ಮನಸ್ಸಾದೀತು. ಮೇಲಧಿಕಾರಿಗಳ ಪ್ರಶ್ನೆಗೆ ಉತ್ತರಿಸಬೇಕು.
ಮೀನ ರಾಶಿ:
ಆದಾಯಕ್ಕೆ ಇರುವ ಸುಲಭ ಮಾರ್ಗವನ್ನು ಅನ್ವೇಷಣೆ ಮಾಡುವಿರಿ. ಬಹಳಷ್ಟು ಮಾಡಬೇಕಾದ ಕೆಲಸಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ನಿಮ್ಮದಾದ ನಿಯಮಗಳನ್ನು ನೀವು ಬದಲಿಸಿಕೊಳ್ಳಲಾರಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕುಕೊಂಡು ಸಂತೋಷೊಡುವಿರಿ. ಬರುವಷ್ಟನ್ನು ಸರಿಯಾಗಿ ಬಳಸಿಕೊಳ್ಳಿ. ಇಂದು ನೀವು ಮಾಡುವ ಲೆಕ್ಕಾಚಾರದಿಂದ ಕಳೆದುಕೊಂಡಿದ್ದು ಎಷ್ಟು ಎಂಬ ಮಾಹಿತಿ ಸಿಗಲಿದೆ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವಜ್ರ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 08 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:39 – 15:09, ಯಮಗಂಡ ಕಾಲ 06:10 – 07:40, ಗುಳಿಕ ಕಾಲ 09:10 – 10:39
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 am, Thu, 1 October 26




