ತಿರುವನಂತಪುರದ ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್
ವಿಜಯದಶಮಿ ಶುಭ ಸಂದರ್ಭದಲ್ಲಿ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಪ್ರಸಿದ್ಧ ಶ್ರೀ ಸರಸ್ವತಿ ದೇವಾಲಯದಲ್ಲಿ ನಡೆದ ಸಾಂಪ್ರದಾಯಿಕ 'ವಿದ್ಯಾರಂಭ' ಸಮಾರಂಭದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾಗವಹಿಸಿ, ಪುಟ್ಟ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದರು. ಬುಧವಾರ ನಡೆದ ಈ ಸಮಾರಂಭದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಕ್ಕಳ ಕೈಬೆರಳುಗಳನ್ನು ಹಿಡಿದು ಧಾನ್ಯಗಳಲ್ಲಿ ಮೊದಲ ಅಕ್ಷರವನ್ನು ಬರೆಸುವ ಮೂಲಕ, ಶಿಕ್ಷಣ ಮತ್ತು ಜ್ಞಾನದ ಪಯಣಕ್ಕೆ ಶಶಿ ತರೂರ್ ಶುಭ ಹಾರೈಸಿದರು.
ತಿರುವನಂತಪುರಂ. ಅಕ್ಟೋಬರ್ 22: ವಿಜಯದಶಮಿ ಶುಭ ಸಂದರ್ಭದಲ್ಲಿ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಪ್ರಸಿದ್ಧ ಶ್ರೀ ಸರಸ್ವತಿ ದೇವಾಲಯದಲ್ಲಿ ನಡೆದ ಸಾಂಪ್ರದಾಯಿಕ ‘ವಿದ್ಯಾರಂಭ’ ಸಮಾರಂಭದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾಗವಹಿಸಿ, ಪುಟ್ಟ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದರು. ಬುಧವಾರ ನಡೆದ ಈ ಸಮಾರಂಭದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಕ್ಕಳ ಕೈಬೆರಳುಗಳನ್ನು ಹಿಡಿದು ಧಾನ್ಯಗಳಲ್ಲಿ ಮೊದಲ ಅಕ್ಷರವನ್ನು ಬರೆಸುವ ಮೂಲಕ, ಶಿಕ್ಷಣ ಮತ್ತು ಜ್ಞಾನದ ಪಯಣಕ್ಕೆ ಶಶಿ ತರೂರ್ ಶುಭ ಹಾರೈಸಿದರು.
ನವರಾತ್ರಿ ಮತ್ತು ವಿಜಯದಶಮಿಯಂದು ಕೇರಳದಾದ್ಯಂತ ಸರಸ್ವತಿ ದೇವಾಲಯಗಳಲ್ಲಿ ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ‘ವಿದ್ಯಾರಂಭ’ ಆಚರಿಸಲಾಗುತ್ತದೆ. ಈ ದಿನ ಮಕ್ಕಳಿಗೆ ಅಕ್ಷರ ಜ್ಞಾನ ಆರಂಭಿಸುವುದು ಅತ್ಯಂತ ಶುಭ ಎಂದು ನಂಬಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಶಶಿ ತರೂರ್ ಅವರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ, ನೂರಾರು ಮಕ್ಕಳಿಗೆ ಮೊದಲ ಅಕ್ಷರ ಬರೆಸಿ ಜ್ಞಾನಾರ್ಜನೆಗೆ ಮುನ್ನುಡಿ ಬರೆದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್ಗಳ ನಡುವೆ ಸಂಘರ್ಷ

