ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾ ಟ್ವೀಟ್ಗೆ ಫನ್ ವರ್ಲ್ಡ್ ಮ್ಯಾನೇಜರ್ ಪ್ರತಿಕ್ರಿಯೆ
ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಅವರು ಟ್ವೀಟ್ ಮಾಡಿ ಆರೋಪ ಮಾಡಿದ್ದಾರೆ. ತಡರಾತ್ರಿ ಪಟಾಕಿ ಹೊಡೆಯಲಾಗಿದೆ ಎಂದು ರಮ್ಯಾ ಆರೋಪಿಸಿದ್ದಾರೆ. ಆದರೆ ರಮ್ಯಾ ಅವರ ಆರೋಪವನ್ನು ಫನ್ ವರ್ಲ್ಡ್ ಮ್ಯಾನೇಜ್ಮೆಂಟ್ ತಳ್ಳಿಹಾಕಿದೆ. ಫನ್ ವರ್ಲ್ಡ್ ಮ್ಯಾನೇಜರ್ ಮತ್ತು ಇನ್ಚಾರ್ಜ್ ಸೂರ್ಯ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಅವರು ಟ್ವೀಟ್ ಮಾಡಿ ಆರೋಪ ಮಾಡಿದ್ದಾರೆ. ತಡರಾತ್ರಿ ಪಟಾಕಿ ಹೊಡೆಯಲಾಗಿದೆ ಎಂದು ರಮ್ಯಾ ಆರೋಪಿಸಿದ್ದಾರೆ. ಆದರೆ ರಮ್ಯಾ ಅವರ ಆರೋಪವನ್ನು ಫನ್ ವರ್ಲ್ಡ್ ಮ್ಯಾನೇಜ್ಮೆಂಟ್ ತಳ್ಳಿಹಾಕಿದೆ. ಫನ್ ವರ್ಲ್ಡ್ ಮ್ಯಾನೇಜರ್ ಮತ್ತು ಇನ್ಚಾರ್ಜ್ ಸೂರ್ಯ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ‘ರಮ್ಯಾ ಅವರು ಹೇಳಿದ ಸಮಯದಲ್ಲಿ ನಮ್ಮ ಫನ್ ವರ್ಲ್ಡ್ ಓಪನ್ ಇರೋದಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 7ರಷ್ಟರಲ್ಲಿ ಎಲ್ಲಾ ಆ್ಯಕ್ಟಿವಿಟೀಸ್ ಮುಗಿಯುತ್ತೆ. ನಮ್ಮಲ್ಲಿ ಯಾವುದೇ ರೀತಿ ಪಟಾಕಿಗಳಿಗೆ ಅನುಮತಿ ಇಲ್ಲ. ಒಳಗೆ ಬರುವವರ ಬ್ಯಾಗ್ ಸಂಪೂರ್ಣ ಚೆಕ್ ಮಾಡಿ ಕಳಿಸಲಾಗುತ್ತೆ. ಪಕ್ಕದಲ್ಲೇ ಪೊಲೀಸ್ ಠಾಣೆ ಇದೆ. ಏನೇ ಆದರೂ ಅವರು ನಮ್ಮನ್ನು ಗಮನಿಸ್ತಾರೆ. ಬೇಕಾದರೆ ಬಂದು ನಮ್ಮ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಬಹುದು. ರಮ್ಯಾ ಅವರು ತಪ್ಪು ಮಾಹಿತಿಯಿಂದ ಹೀಗೆ ಹಾಕಿರಬಹುದು. ನಮ್ಮ ಎದುರು ಭಾಗದಲ್ಲಿ ಪ್ರತಿವರ್ಷ ದಸರಾ ಹಬ್ಬ ಆಚರಣೆ ಮಾಡ್ತಾರೆ. ಬಹುಶಃ ಅವರು ಏನಾದರು ಪಟಾಕಿಗಳನ್ನು ಸಿಡಿಸಿರಬಹುದು. ಅದನ್ನ ಅವರು ತಪ್ಪಾಗಿ ತಿಳಿದುಕೊಂಡು ನಮ್ಮ ಮೇಲೆ ಹೇಳಿರಬಹುದು. ನಾವು ಒಳ್ಳೆಯ ರೀತಿಯಿಂದ ರಿಕ್ಷೆಸ್ಟ್ ಮಾಡ್ತಿದ್ದೇವೆ. ನಿಮಗೆ ತಪ್ಪು ಮಾಹಿತಿ ಬಂದಿದೆ. ಒಳ್ಳೆಯ ರೀತಿಯಿಂದ ಟ್ವೀಟ್ ರಿಮೂವ್ ಮಾಡಿ’ ಎಂದು ಸೂರ್ಯ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
