ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
‘ಪ್ರೇಮದ ಊರಲಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 100 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾದ ಸಾಧನೆ ಸಣ್ಣದಲ್ಲ. ನಿರೀಕ್ಷೆಗೂ ಮೀರಿ ಈ ಚಿತ್ರ ಯಶಸ್ಸು ಕಂಡಿದೆ. ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಗೆಲುವಿನ ಬಗ್ಗೆ ನಿರ್ಮಾಪಕ ದೇವೇಂದ್ರ ಅವರು ಮಾತನಾಡಿದ್ದಾರೆ.
‘ಪ್ರೇಮದ ಊರಲಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 100 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾದ ಸಾಧನೆ ಸಣ್ಣದಲ್ಲ. ನಿರೀಕ್ಷೆಗೂ ಮೀರಿ ಈ ಚಿತ್ರ ಯಶಸ್ಸು ಕಂಡಿದೆ. ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ನಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಗೆಲುವಿನ ಬಗ್ಗೆ ನಿರ್ಮಾಪಕ ದೇವೇಂದ್ರ ಅವರು ಮಾತನಾಡಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ, ಈ ಸಿನಿಮಾದ ಕಥೆಯನ್ನು ಆರಂಭದಲ್ಲಿ ವೆಬ್ ಸಿರೀಸ್ ಮಾಡಬೇಕು ಎಂಬ ಪ್ಲ್ಯಾನ್ ಇತ್ತು. ‘ಅಪ್ಪ-ಮಗ ಮತ್ತು ಸೊಸೆಯ ಪಾತ್ರಗಳ ನಡುವೆ ಶುರುವಾದ ಕಥೆ ಇದು. ಯೂಟ್ಯೂಬ್ ವೆಬ್ ಸಿರೀಸ್ ಸಲುವಾಗಿ ಈ ಐಡಿಯಾ ಮಾಡಿದ್ದೆವು. ಸ್ವಲ್ಪ ದಿನಗಳ ಬಳಿಕ ಕಥೆ ಚೆನ್ನಾಗಿ ಮೂಡಿಬಂತು. 70ರಿಂದ 90 ಲಕ್ಷ ರೂಪಾಯಿಯಲ್ಲಿ ಸಿನಿಮಾ ಮಾಡಬೇಕು ಎಂಬ ಆಲೋಚನೆ ಬಂತು’ ಎಂದು ನಿರ್ಮಾಪಕ ದೇವೇಂದ್ರ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

