AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ ಸೀಸನ್ 13: ನಿಯಮ ಬದಲಿಸಿದ ಗಗನ್ ಚಿನ್ನಪ್ಪ; ಸ್ಪರ್ಧಿಗಳ ಅಸಮಾಧಾನ

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ನಾಮಿನೇಟ್ ಆಗಿರುವ ಸೋನಿಕಾ ಗೌಡ, ಆಸಿಯಾ, ತಾಂಡವ್ ರಾಮ್, ಸೌಂದರ್ಯಾ ಶೆಟ್ಟಿ, ಕುಮಾರಿ ಮತ್ತು ಲಕ್ಷ್ಮಿ ಗೌಡ ಅವರು ಲೂಟಿಕೋರರ ತಂಡದಲ್ಲಿ ಇದ್ದಾರೆ. ಎಲಿಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಗಗನ್ ಚಿನ್ನಪ್ಪ ಅವರು ವಿವಿಐಪಿ ಆಗಿ ಉಸ್ತುವಾರಿ ವಹಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13: ನಿಯಮ ಬದಲಿಸಿದ ಗಗನ್ ಚಿನ್ನಪ್ಪ; ಸ್ಪರ್ಧಿಗಳ ಅಸಮಾಧಾನ
BBK 13Image Credit source: Colors Kannada
ಮದನ್​ ಕುಮಾರ್​
|

Updated on:Oct 22, 2026 | 10:44 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಗಗನ್ ಚಿನ್ನಪ್ಪ ಅವರು ವಿವಿಐಪಿ ಆಗಿದ್ದಾರೆ. ಲೂಟಿಕೋರರು ಮತ್ತು ಕಾವಲುಗಾರರು ಎಂಬ ಥೀಮ್​ನಲ್ಲಿ ಈ ವಾರದ ಟಾಸ್ಕ್ ನೀಡಲಾಗಿದೆ. ನಾಮಿನೇಟ್ ಆಗಿರುವ ಸೋನಿಕಾ ಗೌಡ, ತಾಂಡವ್ ರಾಮ್, ಆಸಿಯಾ, ಸೌಂದರ್ಯಾ ಶೆಟ್ಟಿ, ಲಕ್ಷ್ಮಿ ಗೌಡ, ಕುಮಾರಿ ಅವರು ಲೂಟಿಕೋರರ ತಂಡದಲ್ಲಿ ಇದ್ದಾರೆ. ಆಟದ ವೇಳೆ ಗಗನ್ ಚಿನ್ನಪ್ಪ ಉಸ್ತುವಾರಿ ವಹಿಸಿದ್ದಾರೆ. ಆದರೆ ಅವರ ಬಗ್ಗೆ ಲೂಟಿಕೋರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಾರದ ಟಾಸ್ಕ್ ಡಿಫರೆಂಟ್ ಆಗಿದೆ. ಕೆಲವು ವಿಶೇಷ ವಸ್ತುಗಳನ್ನು ಇರಿಸಿ ಅದನ್ನು ಕಾಯಲು ಕಾವಲುಗಾರರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಆ ವಸ್ತುಗಳನ್ನು ಕದಿಯಲು ಲೂಟಿಕೋರರು ಪ್ರಯತ್ನಿಸುತ್ತಿದ್ದಾರೆ. ಈ ಆಟದ ವೇಳೆ ಕೆಲವು ನಿಯಮಗಳ ಉಲ್ಲಂಘನೆ ಆಗುತ್ತಿದೆ. ಅಂಥ ಸಂದರ್ಭದಲ್ಲಿ ಉಸ್ತುವಾರಿ ಗಗನ್ ಚಿನ್ನಪ್ಪ ಅವರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ. ಆದರೆ ಅವರು ಸರಿಯಾಗಿ ನಡೆದುಕೊಂಡಿಲ್ಲ ಎಂದು ಟೀಕೆ ಮಾಡಲಾಗಿದೆ.

ಗಾನವಿ, ಯಶಸ್, ಕಿರಣ್, ಪ್ರಶಾಂತ್, ಜಗದೀಶ್, ಧನುಷ್ ಅವರು ಕಾವಲುಗಾರರ ತಂಡದಲ್ಲಿ ಇದ್ದಾರೆ. ಅವರು ಕೂಡ ರೂಲ್ಸ್ ಬ್ರೇಕ್ ಮಾಡುವಂತಿಲ್ಲ. ಆದರೆ ಲೂಟಿಕೋರರ ತಂಡದವರು ನಿಯಮ ಉಲ್ಲಂಘನೆ ಮಾಡಿದಾಗ ಅವರಿಗೆ ಗಗನ್ ಅವರು ಮುಲಾಜಿಲ್ಲದೇ ಶಿಕ್ಷೆ ನೀಡುತ್ತಿದ್ದಾರೆ. ಶಿಕ್ಷೆ ನೀಡುವಾಗ ಇಲ್ಲದೇ ಇರುವ ನಿಯಮಗಳನ್ನು ಅವರು ಸೇರಿಸುತ್ತಿದ್ದಾರೆ ಎಂಬ ಆರೋಪ ಬಂದಿದೆ.

ತಪ್ಪು ಮಾಡಿದ ಸೋನಿಕಾ ಅವರನ್ನು 2 ಗಂಟೆಗಳ ಕಾಲ ಜೈಲಿನಲ್ಲಿ ಇರುವಂತೆ ಗಗನ್ ಚಿನ್ನಪ್ಪ ಆದೇಶಿಸಿದ್ದಾರೆ. ಅದಕ್ಕೆ ಕೂಡ ಲೂಟಿಕೋರರ ತಂಡದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದೇ ರೀತಿ ನಿಯಮ ಮುರಿಯುವುದು ಮುಂದುವರಿದರೆ ಲೂಟಿಕೋರರ ತಂಡಕ್ಕೆ ಊಟ ಕೊಡುವುದಿಲ್ಲ ಎಂದು ಗಗನ್ ಹೇಳಿದ್ದಾರೆ. ಈ ಮಾತು ಕೇಳಿ ಲೂಟಿಕೋರರಿಗೆ ಕೋಪ ಬಂದಿದೆ.

ಇದನ್ನೂ ಓದಿ: ಬಿಗ್ ಬಾಸ್: ಸ್ನೇಹಿತ ಎಂಬುದನ್ನೂ ಮರೆತು ತಾಂಡವ್​ಗೆ ಶಿಕ್ಷೆ ನೀಡಿದ ಗಗನ್ ಚಿನ್ನಪ್ಪ

ಆಟದ ಮಧ್ಯದಲ್ಲಿ ಕಿರಣ್ ಶಾಸ್ತ್ರಿ ಅವರಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿದೆ. ಗಾನವಿ ಮೇಲೆ ಕಳ್ಳತನದ ಆರೋಪ ಹೊರಿಸುವಂತೆ ಟಾಸ್ಕ್ ಕೊಡಲಾಗಿದೆ. ಈ ಪ್ರಯತ್ನದಲ್ಲಿ ಕಿರಣ್ ಶಾಸ್ತ್ರಿ ಅವರು ಮಿತಿಮೀರಿ ಮಾತನಾಡಿದ್ದಾರೆ. ಅದರಿಂದ ಗಾನವಿ ಗರಂ ಆಗಿದ್ದಾರೆ. ಕಿರಣ್ ಮಾತನಾಡಿದ್ದು ತಪ್ಪು ಎಂದು ಯಶಸ್, ಸೌಂದರ್ಯಾ ಮುಂತಾದವರು ಹೇಳಿದ್ದಾರೆ. ವೀಕೆಂಡ್ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:42 pm, Thu, 22 October 26

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ