- TV9 Kannada Kannada News Photos Cricket Photos Bhuvneshwar Kumar Creates New World Record in T20I Powerplay
ಕಂಬ್ಯಾಕ್ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾದ ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಪವರ್ಫುಲ್ ಬ್ಯಾಟರ್ಗಳ ನಡುವೆ ಪವರ್ಪ್ಲೇನಲ್ಲೇ ಕಮಾಲ್ ಮಾಡುವ ಮೂಲಕ. ಈ ಕಮಾಲ್ನೊಂದಿಗೆ ಭುವಿ, ಟಿಮ್ ಸೌಥಿ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: IPL)
Updated on: Oct 22, 2026 | 2:59 PM

ಸುಮಾರು ನಾಲ್ಕು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಟೀಮ್ ಇಂಡಿಯಾಗೆ ಭರ್ಜರಿ ಕಂಬ್ಯಾಕ್ ಮಾಡಿರುವ ಹಿರಿಯ ವೇಗಿ ಭುವನೇಶ್ವರ್ ಕುಮಾರ್, ತಮ್ಮ ಪುನರಾಗಮನದ ಮೊದಲ ಪಂದ್ಯದಲ್ಲೇ ಐತಿಹಾಸಿಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಡಾಟ್ ಬಾಲ್ಗಳೊಂದಿಗೆ ಎಂಬುದು ವಿಶೇಷ. (PC: X.com)

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದ ತಮ್ಮ ಮೊದಲ ಓವರ್‌ನ ಆರಂಭಿಕ ಎಸೆತಗಳಲ್ಲೇ ಡಾಟ್ ಬಾಲ್ ಬೌಲ್ ಮಾಡುವ ಮೂಲಕ ಅಂತರರಾಷ್ಟ್ರೀಯ ಟಿ20 ಪಂದ್ಯದ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಜಾಗತಿಕ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. (PC: Gettyimages)

ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಮಾಜಿ ವೇಗಿ ಟಿಮ್ ಸೌಥಿ ಹೆಸರಿನಲ್ಲಿತ್ತು. ನ್ಯೂಝಿಲೆಂಡ್ ಪರ 126 ಟಿ20 ಪಂದ್ಯಗಳನ್ನಾಡಿರುವ ಸೌಥಿ ಪವರ್‌ಪ್ಲೇನಲ್ಲಿ 679 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಭುವಿ ಅಳಿಸಿ ಹಾಕಿದ್ದಾರೆ. (PC: Gettyimages)

ಟೀಮ್ ಇಂಡಿಯಾ ಪರ ಈವರೆಗೆ 87 ಟಿ20 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ ಪವರ್‌ಪ್ಲೇನಲ್ಲಿ ಈವರೆಗೆ 680* ಡಾಟ್ ಬಾಲ್ ಎಸೆದಿದ್ದಾರೆ. ಈ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪವರ್‌ಪ್ಲೇನಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ವಿಶ್ವ ದಾಖಲೆಯನ್ನು ಭುವನೇಶ್ವರ್ ಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ. (PC: Gettyimages)

ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೂ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಸಾರ್ವಕಾಲಿಕ ದಾಖಲೆ ಭುವನೇಶ್ವರ್ ಕುಮಾರ್ ಹೆಸರಲ್ಲೇ ಇದೆ. ಭುವಿ ಒಟ್ಟು 1,960+ ಡಾಟ್ ಬಾಲ್ ಎಸೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ. (PC: Gettyimages)

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More