AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೇಡಿಯಂನಲ್ಲಿ ಮೊಳಗಿದ ‘ಟ್ರೋಫಿ ಕಳ್ಳ’ ಘೋಷಣೆ: ಮುಜುಗರದಿಂದಲೇ ಹೊರ ನಡೆದ ನಖ್ವಿ; ವಿಡಿಯೋ

ಭಾರತ ಮಹಿಳಾ ಕ್ರಿಕೆಟ್ ತಂಡ 2026ರ ಏಷ್ಯಾಕಪ್ ಗೆದ್ದು ದಾಖಲೆಯ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಆದರೆ ದುಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರ್ತಿಯರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದರು. ಕಳೆದ ವರ್ಷ ಪುರುಷರ ತಂಡದಂತೆ ಈ ವರ್ಷವೂ ಮಹಿಳಾ ತಂಡ ನಖ್ವಿಯಿಂದ ಟ್ರೋಫಿ ಪಡೆಯಲಿಲ್ಲ. ಇದರಿಂದ ನಖ್ವಿಗೆ ಮತ್ತೊಮ್ಮೆ ಮುಖಭಂಗವಾಯಿತು, ಅಭಿಮಾನಿಗಳು 'ಟ್ರೋಫಿ ಕಳ್ಳ' ಎಂದು ಘೋಷಣೆ ಕೂಗಿದರು.

ಸ್ಟೇಡಿಯಂನಲ್ಲಿ ಮೊಳಗಿದ ‘ಟ್ರೋಫಿ ಕಳ್ಳ’ ಘೋಷಣೆ: ಮುಜುಗರದಿಂದಲೇ ಹೊರ ನಡೆದ ನಖ್ವಿ; ವಿಡಿಯೋ
ಮಹಿಳಾ ಏಷ್ಯಾಕಪ್
ಪೃಥ್ವಿಶಂಕರ
|

Updated on: Sep 14, 2026 | 2:00 PM

Share

ದುಬೈನಲ್ಲಿ ನಡೆದ 2026ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ, ಶ್ರೀಲಂಕಾವನ್ನು ಮಣಿಸಿ ದಾಖಲೆಯ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಹರ್ಮನ್‌ಪ್ರೀತ್ ಕೌರ್ ಪಡೆ ಶ್ರೀಲಂಕಾವನ್ನು ಸೋಲಿಸಿದ ಬಳಿಕ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಟೀಂ ಇಂಡಿಯಾ ಟ್ರೋಫಿ ಎತ್ತಿ ಹಿಡಿದು ಸಂಭ್ರಮವಿಸುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆದರೆ ಪಂದ್ಯ ಮುಗಿದು ಅರ್ಧ ಗಂಟೆಗೂ ಹೆಚ್ಚು ಸಮಯವಾದರೂ ಪ್ರಶಸ್ತಿ ಪ್ರಸ್ತುತಿ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರ್ತಿಯರ ಸುಳಿವೇ ಇರಲಿಲ್ಲ. ಇತ್ತ ಏಷ್ಯಾಕಪ್ ಆಯೋಜಕರು ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸನ್ ನಖ್ವಿ, ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಕಾದಿದ್ದೆ ಬಂದಿತ್ತಾರೂ ಚಾಂಪಿಯನ್ ಆಟಗಾರ್ತಿಯರು ಮಾತ್ರ ನಖ್ವಿ ಕೈನಿಂದ ಪ್ರಶಸ್ತಿ ಸ್ವೀಕರಿಸಲು ಸುತಾರಾಂ ಒಪ್ಪಲಿಲ್ಲ. ಹೀಗಾಗಿ ವರ್ಷದ ಬಳಿಕ ಮತ್ತೊಂದು ಮುಖಭಂಗದೊಂದಿಗೆ ಮೊಹ್ಸಿನ್ ನಖ್ವಿ ವೇದಿಕೆಯಿಂದ ಹೊರನಡೆಯಬೇಕಾಯಿತು.

ನಖ್ವಿ ಕೈನಿಂದ ಟ್ರೋಫಿ ಸ್ವೀಕರಿಸಲಿಲ್ಲ

ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದೊಂದಿಗಿನ ಸಂಬಂಧಕ್ಕೆ ಭಾರತ ಪೂರ್ಣ ವಿರಾಮ ಹಾಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಹೀಗಾಗಿಯೇ ಕಳೆದ ವರ್ಷ ನಡೆದಿದ್ದ ಪುರುಷರ ಏಷ್ಯಾಕಪ್​ನಲ್ಲೂ ಭಾರತ ತಂಡ ಚಾಂಪಿಯನ್ ಆದರೂ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪದೆ ಖಾಲಿ ಕೈಯಲ್ಲೇ ಸಂಭ್ರಮಾಚರಣೆ ನಡೆಸಿತ್ತು. ಇತ್ತ ಈ ಮುಜುಗರದಿಂದ ಕೆರಳಿದ್ದ ನಖ್ವಿ ಏಷ್ಯಾಕಪ್ ಟ್ರೋಫಿಯನ್ನು ತನ್ನೊಂದಿಗೆ ತೆಗೆದುಕೊಂಡು ವೇದಿಕೆಯಿಂದ ಹೊರನಡೆದಿದ್ದರು. ಅದಾದ ಬಳಿಕವೂ ನಖ್ವಿ ಟ್ರೋಫಿಯನ್ನು ತನ್ನ ಅನುಮತಿ ಇಲ್ಲದೆ ಯಾರಿಗೆ ನೀಡಬಾರದೆಂದು ಶರತ್ತು ಹಾಕಿ ಅದನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು. ಇದುವರೆಗೂ ಆ ಟ್ರೋಫಿ ಟೀಂ ಇಂಡಿಯಾದ ಕೈ ಸೇರಿಲ್ಲ.

ಟ್ರೋಫಿ ಪಡೆಯಲು ಒಪ್ಪದ ಮಹಿಳಾ ತಂಡ

ಇದೀಗ ಒಂದು ವರ್ಷದ ಬಳಿಕ ಮಹಿಳಾ ತಂಡವೂ ಪುರುಷ ತಂಡದ ನಡೆಯನ್ನೇ ಅನುಸರಿಸಿದೆ. ನಖ್ವಿ ಕೈನಿಂದ ಟ್ರೋಫಿ ಪಡೆಯಲು ಒಪ್ಪದ ಭಾರತ ಮಹಿಳಾ ತಂಡ ಪ್ರಶಸ್ತಿ ಪ್ರಧಾನ ಮಾಡುವ ವೇದಿಕೆಯ ಬಳಿ ಸುಳಿಯಲೇ ಇಲ್ಲ. ಹೀಗಾಗಿ ಒಂದಷ್ಟು ಸಮಯ ವೇದಿಕೆಯಲ್ಲೇ ಕಾದ ಮೊಹ್ಸಿನ್ ನಖ್ವಿ ಮುಜುಗರದಿಂದ ಹೊರನಡೆದರು. ಆದರೆ ಈ ಬಾರಿ ನಖ್ವಿ ವೇದಿಕೆಯಿಂದ ಹೊರನಡೆಯುವಾಗ ಭಾರತದ ಅಭಿಮಾನಿಗಳಿಂದ ಮತ್ತೊಂದು ಅವಮಾನಕ್ಕೆ ಒಳಗಾಗಬೇಕಾಯಿತು.

ಸ್ಟೇಡಿಯಂನಲ್ಲಿ ಮೊಳಗಿದ ‘ಟ್ರೋಫಿ ಕಳ್ಳ’ ಘೋಷಣೆ

ನಖ್ವಿ ವೇದಿಕೆಯಲ್ಲಿರುವಾಗಲೇ ಭಾರತದ ಅಭಿಮಾನಿಗಳು ‘ಟ್ರೋಫಿ ಕಳ್ಳ, ಟ್ರೋಫಿ ಕಳ್ಳ’ (ಟ್ರೋಫಿ ಥೀಫ್) ಎಂಬ ಘೋಷಣೆಯನ್ನು ಜೋರಾಗಿ ಹೇಳಲಾರಂಭಿಸಿದರು. ಈ ಘೋಷಣೆ ಕ್ರೀಡಾಂಗಣದ ತುಂಬೆಲ್ಲ ಜೋರಾಗಿ ಮೊಳಗಿತು. ಇದನ್ನು ಕೇಳಿಯೂ ಕೇಳಿಸಿಕೊಳ್ಳದ ಹಾಗೆ ನಖ್ವಿ ಮೈದಾನದಿಂದ ಹೊರಹೋಗಬೇಕಾಯಿತು. ಇದೀಗ ನಖ್ವಿಯನ್ನು ಟೀಂ ಇಂಡಿಯಾ ಅಭಿಮಾನಿಗಳು ಈ ರೀತಿಯಾಗಿ ಗೇಲಿ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ