AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಗೆ ನುಗ್ಗಿದ ಕಮಾಂಡೋಗಳು: ಹೊರಗೆಳೆದುಕೊಂಡು ಹೋಗಿದ್ದು ಯಾರನ್ನು?

ಬಿಗ್​​ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಮತ್ತೊಂದು ಎವಿಕ್ಷನ್ ನಡೆದಿದೆ. ಕಳೆದ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದರು. ಈ ವಾರ ಒಬ್ಬರು ಹೊರಗೆ ಹೋಗಿದ್ದಾರೆ. ಈ ವಾರ ತುಸು ಭಿನ್ನವಾಗಿ ಎವಿಕ್ಷನ್ ನಡೆದಿದೆ. ಬಿಗ್​​ಬಾಸ್ ಮನೆಗೆ ಕಮಾಂಡೊಗಳು ನುಗ್ಗಿ, ನಾಮಿನೇಟ್ ಆದವರನ್ನು ಹೊರಗೆ ಕರೆದೊಯ್ದರು. ಹೊರಗೆ ಹೋದ ಮೂವರಲ್ಲಿ ಮತ್ತೆ ಮನೆಗೆ ಮರಳಿದ್ದು ಇಬ್ಬರು ಮಾತ್ರ!

ಬಿಗ್​​ಬಾಸ್ ಮನೆಗೆ ನುಗ್ಗಿದ ಕಮಾಂಡೋಗಳು: ಹೊರಗೆಳೆದುಕೊಂಡು ಹೋಗಿದ್ದು ಯಾರನ್ನು?
Bigg Boss Kannada Show
ಮಂಜುನಾಥ ಸಿ.
|

Updated on: Oct 04, 2026 | 10:38 PM

Share

ಬಿಗ್​​ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಮತ್ತೊಂದು ಎವಿಕ್ಷನ್ ನಡೆದಿದೆ. ಕಳೆದ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದರು. ಈ ವಾರ ಒಬ್ಬರು ಹೊರಗೆ ಹೋಗಿದ್ದಾರೆ. ಈ ವಾರ ತುಸು ಭಿನ್ನವಾಗಿ ಎವಿಕ್ಷನ್ ನಡೆದಿದೆ. ಬಿಗ್​​ಬಾಸ್ ಮನೆಗೆ ಕಮಾಂಡೊಗಳು ನುಗ್ಗಿ, ನಾಮಿನೇಟ್ ಆದವರನ್ನು ಹೊರಗೆ ಕರೆದೊಯ್ದರು. ಹೊರಗೆ ಹೋದ ಮೂವರಲ್ಲಿ ಮತ್ತೆ ಮನೆಗೆ ಮರಳಿದ್ದು ಇಬ್ಬರು ಮಾತ್ರ!

ಈ ವಾರ ನಾಮಿನೇಟ್ ಆಗಿದ್ದವರಲ್ಲಿ ಯಶಸ್, ಮಂಜು ಮತ್ತು ಧನುಶ್ ಅವರನ್ನು ಮೊದಲೇ ಸುದೀಪ್ ಅವರು ಸೇವ್ ಮಾಡಿದರು. ಅಂತಿಮವಾಗಿ ಸಂಗೀತಾ, ಲಿಖಿತ್ ಮತ್ತು ಶಾಸ್ತ್ರಿ ಅವರುಗಳು ಉಳಿದು ಕೊಂಡಿದ್ದರು. ಸುದೀಪ್ ಅವರು ಮೊದಲೇ ಹೇಳಿದಂತೆ ಕಮಾಂಡೊಗಳು ಕಪ್ಪು ಬಟ್ಟೆ, ಕಪ್ಪು ಮುಖವಾಡ ಹಾಕಿಕೊಂಡು ಬಂದು, ಸಂಗೀತಾ, ಶಾಸ್ತ್ರಿ ಮತ್ತು ಲಿಖಿತ್ ಅನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಹೋದರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಮೊದಲು ಸಂಗೀತಾ ಅವರು ಮನೆಗೆ ವಾಪಸ್ಸಾದರು, ಅದಾದ ಬಳಿಕ ಶಾಸ್ತ್ರಿ ಒಳಗೆ ಬಂದರು. ಅಲ್ಲಿಗೆ ಲಿಖಿತ್ ಅವರು ಈ ವಾರ ಎವಿಕ್ಟ್ ಆದಂತಾಯ್ತು.

Likhit Gondhi

Likhit Gondhi

ಲಿಖಿತ್ ಅವರಿಗೆ ಕಳೆದ ವಾರವೇ ಸುದೀಪ್ ಅವರು ಎಚ್ಚರಿಕೆ ನೀಡಿದ್ದರು. ನಿಯಮಗಳನ್ನು ಪದೇ ಪದೇ ಮುರಿಯುವುದು, ಬಿಗ್​​ಬಾಸ್​​ಗೆ ಹಾಗೂ ಬಿಗ್​​ಬಾಸ್ ನಿಯಮಗಳನ್ನು ಮುರಿಯುತ್ತಲೇ ಇದ್ದರೆ ನೀವು ಬೆಲೆ ತೆರಬೇಕಾಗುತ್ತದೆ ಎಂದು ಮೊದಲೇ ಹೇಳಿದ್ದರು. ಶನಿವಾರದ ಎಪಿಸೋಡಿನಲ್ಲೂ ಸಹ ಲಿಖಿತ್ ಅವರಿಗೆ ಸುದೀಪ್ ಬುದ್ಧಿವಾದ ಹೇಳಿದರು. ಅದರಂತೆ ಲಿಖಿತ್ ಈ ವಾರ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ:‘ಬೇಲ್’ ಸಿನಿಮಾ ಶೂಟಿಂಗ್​​ನಲ್ಲಿ ಸಂಜನಾ ಆನಂದ್: ವಿಡಿಯೋ ನೋಡಿ

ಮನೆಯಿಂದ ಹೊರಗೆ ಬಂದ ಬಳಿಕ ಮಾತನಾಡಿದ ಲಿಖಿತ್, ತಾವು ಈ ವಾರ ಹೊರಗೆ ಬರುತ್ತೇನೆಂಬ ನಿರೀಕ್ಷೆ ಇತ್ತು. ನನ್ನ ಕೋಪ, ತಪ್ಪು ನಿರ್ಧಾರಗಳಿಂದಾಗಿ ನಾನು ಹೊರಗೆ ಬಂದೆ’ ಎಂದರು. ಲಿಖಿತ್ ಅವರು ಅಗ್ನಿಪರೀಕ್ಷೆಯ ಮೂಲಕ ಆಯ್ಕೆ ಆದ ನಾಲ್ವರಲ್ಲಿ ಒಬ್ಬರಾಗಿದ್ದರು. ಲಿಖಿತ್ ಕಳೆದ ಕೆಲ ವಾರಗಳು ಸಹ ನಾಮಿನೇಟ್ ಆಗಿದ್ದರು. ಆದರೆ ಈ ವಾರ ನೇರವಾಗಿ ಹೊರಕ್ಕೆ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್