- TV9 Kannada Photo gallery Cricket photos Virat Kohli and Rohit sharma When Do They Play Next? India vs NZ ODI Return
ರೋಹಿತ್, ಕೊಹ್ಲಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?
ಭಾರತ-ವೆಸ್ಟ್ ಇಂಡೀಸ್ T20 ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. T20 ಮಾದರಿಗೆ ವಿದಾಯ ಹೇಳಿರುವ ಅವರು, ODI ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮುಂದಿನ ODI ವಿಶ್ವಕಪ್ ದೃಷ್ಟಿಯಿಂದ, ಅವರು ಭಾರತ-ನ್ಯೂಜಿಲೆಂಡ್ ವಿರುದ್ಧದ ODI ಸರಣಿಯಲ್ಲಿ (ನವೆಂಬರ್ 4 ರಿಂದ) ಮೈದಾನಕ್ಕೆ ಮರಳಲಿದ್ದಾರೆ. ಅಭಿಮಾನಿಗಳು ಅವರನ್ನು ಮತ್ತೊಮ್ಮೆ ಕಾಣಲು ಒಂದು ತಿಂಗಳು ಕಾಯಬೇಕು.
Updated on: Oct 04, 2026 | 7:57 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯೂ ಮುಕ್ತಾಯಗೊಂಡಿದೆ. ಈ ಮೂರು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ನಿರೀಕ್ಷೆಯಂತೆ ಗೆದ್ದುಕೊಂಡಿದೆ. ಇದೀಗ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತದ ವಿಭಿನ್ನ ತಂಡವೇ ಕಣಕ್ಕಿಳಿಯಲಿದೆ. ಅಂದರೆ ಈ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡುವುದಿಲ್ಲ(PC-PTI).

ಇದಕ್ಕೆ ಕಾರಣ ಇವರಿಬ್ಬರು ಟಿ20 ಮಾದರಿಗೆ ವಿದಾಯ ಹೇಳಿರುವುದು. ಹಾಗಿದ್ದರೆ ಇವರಿಬ್ಬರನ್ನು ಮತ್ತೆ ಮೈದಾನದಲ್ಲಿ ಕಣ್ತುಂಬಿಕೊಳ್ಳುವುದು ಯಾವಾಗ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅದಕ್ಕೆ ಉತ್ತರ, ರೋಹಿತ್ ಮತ್ತು ಕೊಹ್ಲಿಯನ್ನು ಮೈದಾನದಲ್ಲಿ ಕಾಣಲು ಅಭಿಮಾನಿಗಳು ಇನ್ನೊಂದು ತಿಂಗಳು ಕಾಯಲೇಬೇಕು(PC-PTI).

ಕಳೆದ ವರ್ಷದಿಂದ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈಗ ಒಂದೇ ಸ್ವರೂಪದಲ್ಲಿ ಆಡುತ್ತಿದ್ದಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುವಂತ್ತದ್ದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯುವುದರಿಂದ ಇದೊಂದು ವರ್ಷದೊಳಗೆ ಟೀಂ ಇಂಡಿಯಾ ಹಲವು ಏಕದಿನ ಸರಣಿಗಳನ್ನು ಆಡಲಿದೆ. ಹೀಗಾಗಿ ರೋಹಿತ್, ಕೊಹ್ಲಿಯನ್ನು ಆಗಾಗ್ಗೆ ಮೈದಾನದಲ್ಲಿ ನೋಡಬಹುದು(PC-PTI).

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ ಏಕದಿನ ಪಂದ್ಯವು ಅಕ್ಟೋಬರ್ 3 ರ ಶನಿವಾರದಂದು ನಡೆದಿತ್ತು. ಈ ದಿನದಿಂದ ಒಂದು ತಿಂಗಳ ನಂತರ, ಕೊಹ್ಲಿ ಮತ್ತು ರೋಹಿತ್ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯಲಿದ್ದಾರೆ. ಭಾರತ ತನ್ನ ಮುಂದಿನ ಏಕದಿನ ಸರಣಿನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದ್ದು, ಈ ಸರಣಿ ನವೆಂಬರ್ 4 ರಂದು ಪ್ರಾರಂಭವಾಗುತ್ತದೆ(PC-PTI).

ರೋಹಿತ್ ಮತ್ತು ವಿರಾಟ್ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಮತ್ತೆ ಪ್ರದರ್ಶಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದರೂ, ಅವರನ್ನು ನ್ಯೂಜಿಲೆಂಡ್‌ನಲ್ಲಿ ನೋಡಲು ಹೆಚ್ಚಿನ ಅವಕಾಶವಿರುತ್ತದೆ. ಈ ಏಕದಿನ ಸರಣಿಗಾಗಿ ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸುತ್ತಿದೆ, ಅಲ್ಲಿ ಎರಡೂ ತಂಡಗಳು ಒಟ್ಟು ಐದು ಏಕದಿನ ಪಂದ್ಯಗಳನ್ನು ಆಡಲಿವೆ. ಈ ಸರಣಿಯು ನವೆಂಬರ್ 4 ರಿಂದ ನವೆಂಬರ್ 15 ರವರೆಗೆ ನಡೆಯಲಿದೆ(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



