ನಾವು ಮೃತಪಟ್ಟಿಲ್ಲ, ಜೀವಂತವಾಗಿದ್ದೇವೆ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ್ದ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹ
ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ನಲ್ಲಿ ಗೊಂದಲಗಳು ಉದ್ಭವಿಸಿದ್ದು, SIR ವೇಳೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದ್ದು. ಇದರ ಮಧ್ಯೆ ವಿಜಯಪುರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿ ಪೇಚೆಗೆ ಸಿಲುಕಿದ್ದಾರೆ. ಹೌದು.... ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಯತ್ನಾಳ್, ಸೆ.30ರಂದು 8 ಮತದಾರರ ಮರಣ ಪ್ರಮಾಣ ಪತ್ರ ಪ್ರದರ್ಶಿಸಿ ಆರೋಪಿಸಿದ್ದರು. ಆದ್ರೆ, ಇದೀಗ ಆ ಎಂಟು ಮತದಾರರು ಪ್ರತ್ಯಕ್ಷರಾಗಿದ್ದು, ನಾವು ಮೃತಪಟ್ಟಿಲ್ಲ, ಜೀವಂತವಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಮುಂದೆ ಹಾಜರಾಗಿದ್ದಾರೆ.
ವಿಜಯಪುರ, (ಅಕ್ಟೋಬರ್ 04): ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ನಲ್ಲಿ ಗೊಂದಲಗಳು ಉದ್ಭವಿಸಿದ್ದು, SIR ವೇಳೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದ್ದು. ಇದರ ಮಧ್ಯೆ ವಿಜಯಪುರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿ ಪೇಚೆಗೆ ಸಿಲುಕಿದ್ದಾರೆ. ಹೌದು…. ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಯತ್ನಾಳ್, ಸೆ.30ರಂದು 8 ಮತದಾರರ ಮರಣ ಪ್ರಮಾಣ ಪತ್ರ ಪ್ರದರ್ಶಿಸಿ ಆರೋಪಿಸಿದ್ದರು. ಆದ್ರೆ, ಇದೀಗ ಆ ಎಂಟು ಮತದಾರರು ಪ್ರತ್ಯಕ್ಷರಾಗಿದ್ದು, ನಾವು ಮೃತಪಟ್ಟಿಲ್ಲ, ಜೀವಂತವಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಮುಂದೆ ಹಾಜರಾಗಿದ್ದಾರೆ.
ನಮ್ಮ ಡೆತ್ ಸರ್ಟಿಫಿಕೇಟ್ ಶಾಸಕ ಯತ್ನಾಳ್‌ಗೆ ಹೇಗೆ ಸಿಕ್ಕಿತು? ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಹುನ್ನಾರ ನಡೆದಿದೆ . ಜೀವಂತ ವ್ಯಕ್ತಿಗಳ ಮರಣ ಪತ್ರ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪಾಲಿಕೆಯಿಂದ ನೀಡಿದ ಮರಣ ಪ್ರಮಾಣ ಪತ್ರ ನಕಲಿಯೋ? ಅಸಲಿಯೋ? ಪಾಲಿಕೆ ಸಿಬ್ಬಂದಿಯಿಂದಲೇ ಗೋಲ್ಮಾಲ್ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಜೀವಂತ ವ್ಯಕ್ತಿಗಳ ಡೆತ್ ಸರ್ಟಿಫಿಕೇಟ್ ನೀಡಿದವರ ಪತ್ತೆಗೆ ಆಗ್ರಹಿಸಿದ್ದಾರೆ.

