9 ಲಕ್ಷದಲ್ಲಿ ಕೇವಲ 1 ಲಕ್ಷ ಶಾಲಾ ಮಕ್ಕಳಿಗೆ ಕಳಪೆ ಶೂ-ಸಾಕ್ಸ್: 104 ಕೋಟಿ ಶೂ ಟೆಂಡರ್ ನಲ್ಲಿ ಅವ್ಯವಹಾರ ಆರೋಪ
ಸರ್ಕಾರಿ ಶಾಲೆಗಳು ಆರಂಭಗೊಂಡು ಎರಡೂವರೆ ತಿಂಗಳು ಆಗ್ತಾ ಬಂದ್ರೂ ಶೇಕಡಾ ಎಂಬತ್ತರಷ್ಟು ಶೂ ಮತ್ತು ಸಾಕ್ಸ್ ಗಳ ವಿತರಣೆ ಆಗಿಲ್ಲ. ಕೆಲವು ಕಡೆಗಳಲ್ಲಿ ಈಗಷ್ಟೇ ಶೂಗಳ ವಿತರಣೆ ಶುರು ಮಾಡಿದ್ದು, ಅವು ಕೂಡ ಕಳೆ ಮತ್ತು ಗುಣಮಟ್ಟದವುಗಳು ಇಲ್ಲಾ ಎನ್ನುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ವಿತರಣೆಯಾದ ಶೂ- ಸಾಕ್ಸ್ ಗಳು ಹರಿದು ಹಾಳಾಗ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಶೂ ವಿತರಣೆ ಆಗಿದೆ ಆಗಬೇಕಿರೋದು ಎಷ್ಟು? ಶೂ ವಿತರಣೆಯಲ್ಲಿ ಗೋಲ್ ಮಾಲ್ ಶಂಕೆ ವ್ಯಕ್ತವಾಗಿದ್ದು ರಾಜ್ಯದವರನ್ನ ಬಿಟ್ಟು ದೆಹಲಿ ಮೂಲದವರಿಗೆ ನೀಡಿದ್ದು ಹಲವು ಅನುಮಾನ ಹುಟ್ಟು ಹಾಕಿದೆ.
ಬೆಳಗಾವಿ, (ಸೆಪ್ಟೆಂಬರ್ 11): ಸರ್ಕಾರಿ ಶಾಲೆಗಳು ಆರಂಭಗೊಂಡು ಎರಡೂವರೆ ತಿಂಗಳು ಆಗ್ತಾ ಬಂದ್ರೂ ಶೇಕಡಾ ಎಂಬತ್ತರಷ್ಟು ಶೂ ಮತ್ತು ಸಾಕ್ಸ್ ಗಳ ವಿತರಣೆ ಆಗಿಲ್ಲ. ಕೆಲವು ಕಡೆಗಳಲ್ಲಿ ಈಗಷ್ಟೇ ಶೂಗಳ ವಿತರಣೆ ಶುರು ಮಾಡಿದ್ದು, ಅವು ಕೂಡ ಕಳೆ ಮತ್ತು ಗುಣಮಟ್ಟದವುಗಳು ಇಲ್ಲಾ ಎನ್ನುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ವಿತರಣೆಯಾದ ಶೂ- ಸಾಕ್ಸ್ ಗಳು ಹರಿದು ಹಾಳಾಗ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಶೂ ವಿತರಣೆ ಆಗಿದೆ ಆಗಬೇಕಿರೋದು ಎಷ್ಟು? ಶೂ ವಿತರಣೆಯಲ್ಲಿ ಗೋಲ್ ಮಾಲ್ ಶಂಕೆ ವ್ಯಕ್ತವಾಗಿದ್ದು ರಾಜ್ಯದವರನ್ನ ಬಿಟ್ಟು ದೆಹಲಿ ಮೂಲದವರಿಗೆ ನೀಡಿದ್ದು ಹಲವು ಅನುಮಾನ ಹುಟ್ಟು ಹಾಕಿದೆ.
ಇನ್ನು ಈ ಬಗ್ಗೆ ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಅನಿಲ್ ಸೌದಾಗರ್ ಮಾತನಾಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಂಬತ್ತು ಲಕ್ಷ ವಿದ್ಯಾರ್ಥಿಗಳ ಪೈಕಿ. ಈ ವರೆಗೂ ಕೇವಲ ಒಂದು ಲಕ್ಷ ಶೂಗಳ ವಿತರಣೆಯಾಗಿದೆ.ಹಂಚಿಕೆಯಾಗಿರುವ ಒಂದು ಲಕ್ಷ ಶೂಗಳ ಪೈಕಿ ಬಹುತೇಕ ಎಲ್ಲವೂ ಕಳಪೆ. ಶಾಲೆ ಆರಂಭವಾಗಿ ಮತ್ತೆ ಅಕ್ಟೋಬರ್ ರಜೆ ಸಮೀಪಿಸುತ್ತಿದ್ರೂ ಸಿಗದ ಶೂಗಳು ವಿತರಣೆ ಆಗಿಲ್ಲ. ಇತ್ತ ಹಂಚಿಕೆಯಾದ ಶೂಗಳು ಒಂದೇ ವಾರದಲ್ಲಿ ಕಿತ್ತು ಹಾಳಾಗಿವೆ. ಕೂಡಲೇ ಶೂ ನೀಡಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

