AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್‌ ಮೂಲಕ ಹಣ ಪಾವತಿಸುವುದು ಹೇಗೆ? ಈ ರೀತಿ ಪೇಮೆಂಟ್‌ ಸುರಕ್ಷಿತವೇ?

ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿವೆ. ಯುಪಿಐ ಆಪ್ ಮೂಲಕ ಮಾತ್ರವಲ್ಲ, ವಾಟ್ಸಾಪ್‌ನಲ್ಲಿ ಹಣ ಪಾವತಿಸಬಹುದು. ಹೆಚ್ಚಿನವರು ವಾಟ್ಸಾಪ್‌ನಲ್ಲೇ ಪೇಮೆಂಟ್‌ ಮಾಡ್ತಾರೆ. ಆದರೆ ನೀವು ಈ ಆಪ್‌ನಲ್ಲಿ ಪೇಮೆಂಟ್‌ ಮಾಡುವ ಮೊದಲು ನಿಮ್ಮ ಬ್ಯಾಂಕ್ ಖಾತೆಯೂ ವಾಟ್ಸಾಪ್ ಪಾವತಿ ಜೊತೆ ಲಿಂಕ್ ಆಗಿರಲೇಬೇಕು. ಈ ಕುರಿತಾದ ಸ್ಟೋರಿ ಇಲ್ಲಿದೆ.

ವಾಟ್ಸಾಪ್‌ ಮೂಲಕ ಹಣ ಪಾವತಿಸುವುದು ಹೇಗೆ? ಈ ರೀತಿ ಪೇಮೆಂಟ್‌ ಸುರಕ್ಷಿತವೇ?
ವಾಟ್ಸಾಪ್ ಪೇImage Credit source: livemint.com
ಸಾಯಿನಂದಾ
|

Updated on: Sep 15, 2026 | 8:21 PM

Share

ಮುಖ್ಯಾಂಶಗಳು

  • ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿವೆ
  • ವಾಟ್ಸಾಪ್‌ನಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ
  • ವಾಟ್ಸಾಪ್‌ಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಫೋನ್ ಪೇ (Phone pay) ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡುವುದೇ ಹೆಚ್ಚು. ಇನ್ನು ಈ ವಾಟ್ಸಾಪ್ ನಲ್ಲಿ ಕ್ವಿಕ್ ಮೆಸೇಜ್ ಕಳುಹಿಸುವಷ್ಟೇ ಸುಲಭವಾಗಿ ಹಣ ಕಳುಹಿಸಬಹುದಾಗಿದ್ರೂ ಎಷ್ಟು ಸೇಫ್ ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ಆದರೆ ವಾಟ್ಸಾಪ್ ವಹಿವಾಟು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಆಧಾರದ ಮೇಲೆ ನಡೆಯುತ್ತದೆ. ಆದರೆ ನೀವು ವಾಟ್ಸಾಪ್ ನಲ್ಲಿ ಹಣ ಕಳುಹಿಸುವ ಪ್ರಕ್ರಿಯೆಗೂ ಮುನ್ನ ನಿಮ್ಮ ವಾಟ್ಸಾಪ್‌ ಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ.

ವಾಟ್ಸಾಪ್‌ಗೆ ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಹೇಗೆ?

ಹಂತ 1: ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ, ಬಲಗಡೆಯ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ.

ಹಂತ 2: ಆ ಬಳಿಕ ಪೇಮೆಂಟ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ಆಡ್ ಪೇಮೆಂಟ್ ಮೆಥಡ್ ಮೇಲೆ ಟ್ಯಾಪ್ ಮಾಡಿ ನಿಯಮಗಳಿಗೆ ಸಮ್ಮತಿಸಿ ಕ್ಲಿಕ್ ಮಾಡಿ.

ಹಂತ 3: ಇಲ್ಲಿ ನೀಡಲಾದ ಲಿಸ್ಟ್ ನಲ್ಲಿ ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ.

ಹಂತ 4: ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ವೆರಿಫೈ ಮಾಡಿಕೊಳ್ಳಿ.

ಹಂತ 5: ವೆರಿಫಿಕೇಶನ್ ಮುಗಿದ ಬಳಿಕ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗುತ್ತದೆ.

ವಾಟ್ಸಾಪ್ ಚಾಟ್ ಮೂಲಕ ಹಣ ಕಳುಹಿಸುವುದು ಹೇಗೆ?

ಹಂತ 1: ನೀವು ಯಾರಿಗೆ ಹಣ ಕಳುಹಿಸಬೇಕೋ ಅವರ ವಾಟ್ಸಾಪ್ ಚಾಟ್ ಓಪನ್ ಮಾಡಿ.

ಹಂತ 2: ಮೆಸೇಜ್ ಟೈಪ್ ಮಾಡುವ ಜಾಗದ ಪಕ್ಕದಲ್ಲಿರುವ ಕರೆನ್ಸಿ ಚಿಹ್ನೆಯ ಕ್ಲಿಕ್‌ ಮಡಿ  ಪೇಮೆಂಟ್ ಆಯ್ಕೆ ಮಾಡಿ.

ಹಂತ 3: ನೀವು ಕಳುಹಿಸಬೇಕಾದ ಹಣದ ಮೊತ್ತವನ್ನು ನಮೂದಿಸಿ ಮತ್ತು ನೆಕ್ಸ್ಟ್ ಮೇಲೆ ನಮೂದಿಸಿ.

ಹಂತ 4: ನಿಮ್ಮ ಯುಪಿಐ ಪಿನ್ ನಮೂದಿಸಿದ್ರೆ ಪೇಮೆಂಟ್‌ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: ಎರಡು ಸಾವಿರ ರೂವರೆಗಿನ ಯುಪಿಐ ಪಾವತಿಗೆ ಇರೋದಿಲ್ಲ ಯಾವುದೇ ಶುಲ್ಕ; ಕೇಂದ್ರದಿಂದ ಪೇಮೆಂಟ್ಸ್ ಕಾಯ್ದೆಗೆ ತಿದ್ದುಪಡಿ

ವಾಟ್ಸಾಪ್ ಮೂಲಕ ಹಣ ಕಳುಹಿಸುವುದು ಎಷ್ಟು ಸುರಕ್ಷಿತ?

ನೀವು ಹಣ ಕಳುಹಿಸುವ ವ್ಯಕ್ತಿಯ ಬಳಿ ವಾಟ್ಸಾಪ್ ಪೇ ಹೊಂದಿಲ್ಲದಿದ್ದರೂ, ಹಣ ವರ್ಗಾವಣೆ ಮಾಡಲು ಸಾಧ್ಯ. ಹಣ ಪಾವತಿಸುವ ವ್ಯಕ್ತಿಯ ಯುಪಿಐ ಐಡಿ ನಮೂದಿಸಿ ಹಣ ಕಳುಹಿಸಬಹುದು. ವಾಟ್ಸಾಪ್ ಪೇಮೆಂಟ್ ಯುಪಿಐ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಕಾರಣ ಹೆಚ್ಚು ಸುರಕ್ಷಿತವಾಗಿರುತ್ತದೆ. ನೀವು ಮಾಡುವ ಪ್ರತಿ ಪೇಮೆಂಟ್ ಗೂ ಯುಪಿಐ ಪಿನ್ ಅಗತ್ಯ. ನೀವು ಪಿನ್ ನಮೂದಿಸಿದರೆ ಮಾತ್ರ ಪೇಮೆಂಟ್ ಪೂರ್ಣಗೊಳ್ಳುತ್ತದೆ. ಹೀಗಾಗಿ ವಾಟ್ಸಾಪ್ ಮೂಲಕ ಹಣ ಪಾವತಿಸುವುದು ತುಂಬಾನೇ ಸುರಕ್ಷಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್