ಮಸೀದಿಯಲ್ಲಿ ವಿಘ್ನ ವಿನಾಯಕನ ಪ್ರತಿಷ್ಠಾಪನೆ: ಗದಗದಲ್ಲಿ ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು!
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಯುವಕರು ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಈ ಕಾರ್ಯವು ಜಿಲ್ಲೆಯಾದ್ಯಂತ ಕೋಮು ಸೌಹಾರ್ದತೆಗೆ ಹಾಗೂ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಮಾದರಿಯಾಗಿದೆ. ಕಳೆದ 4 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಈ ಆಚರಣೆಯ ವಿವರ ಇಲ್ಲಿದೆ.
ಗದಗ, ಸೆಪ್ಟೆಂಬರ್ 16: ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಮುಸ್ಲಿಂ ಯುವಕರು ಗಣೇಶ ಹಬ್ಬದ ಮೂಲಕ ಭಾವೈಕ್ಯತೆಯ ಅಪೂರ್ವ ಸಂದೇಶ ಸಾರಿದ್ದಾರೆ. ಗ್ರಾಮದ ಮಸೀದಿಯಲ್ಲಿ ಸತತ ನಾಲ್ಕನೇ ವರ್ಷವೂ ವಿಘ್ನ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ಪೂಜೆ ಸಲ್ಲಿಸುತ್ತಿದ್ದಾರೆ. “ಅಲ್ಲಾನೂ ಒಂದೇ, ಗಣೇಶನೂ ಒಂದೇ” ಎನ್ನುವ ನಿಲುವಿನೊಂದಿಗೆ ಸ್ವತಃ ಮುಸ್ಲಿಂ ಬಾಂಧವರೇ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದು, ಈ ಕಾರ್ಯವು ಜಿಲ್ಲೆಯಾದ್ಯಂತ ಕೋಮು ಸೌಹಾರ್ದತೆಗೆ ಹಾಗೂ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಮಾದರಿಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 16, 2026 11:11 AM
Follow Us
Latest Videos

