AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲಿಪ್‌ಕಾರ್ಟ್​ನಿಂದ ಬಿಗ್ ಬಿಲಿಯನ್ ಡೇಸ್ 2026 ಸೇಲ್ ಘೋಷಣೆ; ಯಾವಾಗ ಆರಂಭ?

ಫ್ಲಿಪ್‌ಕಾರ್ಟ್‌ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ 2026 ಸೇಲ್ ಅಕ್ಟೋಬರ್ 9ರಿಂದ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲ್ಯಾಕ್ ಸದಸ್ಯರಿಗೆ ಅಕ್ಟೋಬರ್ 8ರಿಂದಲೇ ಆರಂಭಿಕ ಪ್ರವೇಶ ಸಿಗಲಿದೆ. ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೇಲೆ ರಿಯಾಯಿತಿ ಸೇರಿದಂತೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಹಲವು ಆಫರ್‌ಗಳು ಲಭ್ಯವಾಗಲಿವೆ.

ಫ್ಲಿಪ್‌ಕಾರ್ಟ್​ನಿಂದ ಬಿಗ್ ಬಿಲಿಯನ್ ಡೇಸ್ 2026 ಸೇಲ್ ಘೋಷಣೆ; ಯಾವಾಗ ಆರಂಭ?
Flipkart Big Billion Days 2026
ಮಾಲಾಶ್ರೀ ಅಂಚನ್​
| Edited By: |

Updated on: Sep 16, 2026 | 2:10 PM

Share

ಮುಖ್ಯಾಂಶಗಳು

  • ಅಕ್ಟೋಬರ್ 9ರಿಂದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್!
  • ಬ್ಯಾಂಕ್ ಕಾರ್ಡ್‌ಗಳಿಗೆ ಭರ್ಜರಿ ಡಿಸ್ಕೌಂಟ್!
  • ಮೊಬೈಲ್, ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ಆಫರ್!

ಆನ್‌ಲೈನ್ ಶಾಪಿಂಗ್ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಫ್ಲಿಪ್‌ಕಾರ್ಟ್‌ನ (Flipkart) ಬಿಗ್ ಬಿಲಿಯನ್ ಡೇಸ್ 2026 ಸೇಲ್‌ಗೆ ದಿನಾಂಕ ಘೋಷಣೆಯಾಗಿದೆ. ಈ ಬಾರಿ ಅಕ್ಟೋಬರ್ 9ರಿಂದ ಸೇಲ್ ಆರಂಭವಾಗಲಿದೆ. ವಿಶೇಷ ಸದಸ್ಯರಿಗೆ ಒಂದು ದಿನ ಮುಂಚಿತವಾಗಿಯೇ ಶಾಪಿಂಗ್ ಮಾಡುವ ಅವಕಾಶ ಸಿಗಲಿದೆ. ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ, ಬ್ಯಾಂಕ್ ಆಫರ್ ಹಾಗೂ ಕ್ಯಾಶ್‌ಬ್ಯಾಕ್ ಸಿಗುವ ನಿರೀಕ್ಷೆಯಿದೆ.

ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 9ರಿಂದ ಆರಂಭವಾಗಲಿದೆ. ಆದರೆ ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಸದಸ್ಯರು ಹಾಗೂ ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅಕ್ಟೋಬರ್ 8ರಿಂದಲೇ ಆರಂಭಿಕ ಪ್ರವೇಶ (Early Access) ಸಿಗಲಿದೆ. ಅಂದರೆ, ಇತರ ಗ್ರಾಹಕರಿಗಿಂತ ಒಂದು ದಿನ ಮುಂಚಿತವಾಗಿ ಈ ಸದಸ್ಯರು ಸೇಲ್‌ನಲ್ಲಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಬ್ಯಾಂಕ್ ಕಾರ್ಡ್‌ಗಳಿಂದ 10% ವರೆಗೆ ರಿಯಾಯಿತಿ

ಈ ಬಾರಿಯ ಸೇಲ್‌ನಲ್ಲಿ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಶೇಕಡ 10ರ ವರೆಗೆ ತಕ್ಷಣದ ರಿಯಾಯಿತಿ ಸಿಗಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಇದರ ಜತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡ 10ರಷ್ಟು ಉಳಿತಾಯದ ಅವಕಾಶವೂ ಇರಲಿದೆ.

ಆದರೆ ಯಾವ ಉತ್ಪನ್ನಕ್ಕೆ ಎಷ್ಟು ಗರಿಷ್ಠ ರಿಯಾಯಿತಿ ಸಿಗಲಿದೆ, ಕನಿಷ್ಠ ಖರೀದಿ ಮೊತ್ತ ಎಷ್ಟು ಇರಬೇಕು ಅಥವಾ ಯಾವ ಕಾರ್ಡ್‌ಗೆ ಯಾವ ನಿಯಮ ಅನ್ವಯಿಸುತ್ತದೆ ಎಂಬ ಸಂಪೂರ್ಣ ವಿವರಗಳನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಸೇಲ್ ಸಮೀಪಿಸುತ್ತಿದ್ದಂತೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮೊದಲ ವಹಿವಾಟಿಗೆ ಕ್ಯಾಶ್‌ಬ್ಯಾಕ್

ಫ್ಲಿಪ್‌ಕಾರ್ಟ್‌ನ ಪಾವತಿ ಸೇವೆ ಸೂಪರ್ ಮನಿ ಮೂಲಕ ಮೊದಲ ವಹಿವಾಟು ಮಾಡುವ ಗ್ರಾಹಕರಿಗೆ ಶೇಕಡ 10ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ರಾಹಕರು ಯುಪಿಐ ಸೇರಿದಂತೆ ಇತರ ಪಾವತಿ ವಿಧಾನಗಳ ಮೂಲಕವೂ ಹಣ ಪಾವತಿಸಬಹುದು.

ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಈ ಬಾರಿ ಬಿಗ್ ಬಿಲಿಯನ್ ಡೇಸ್‌ನಲ್ಲಿ ಹಲವು ವಿಶೇಷ ಸೇಲ್ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಪ್ರೈಸ್ ಕ್ರ್ಯಾಶ್, ಬಿಬಿಡಿ ಸ್ಪೆಷಲ್ಸ್, ಟಿಕ್ ಟಾಕ್ ಡೀಲ್ಸ್, ಬ್ರ್ಯಾಂಡ್ ಅವರ್ಸ್, ಡಬಲ್ ಡಿಸ್ಕೌಂಟ್ ಮತ್ತು ರಶ್ ಅವರ್ಸ್ ಮುಂತಾದ ಕೊಡುಗೆಗಳು ಇರಲಿವೆ. ಈ ಎಲ್ಲಾ ವಿಭಾಗಗಳ ಸಂಪೂರ್ಣ ವಿವರಗಳು ಇನ್ನೂ ಬಿಡುಗಡೆಯಾಗಿಲ್ಲ.

ಯಾವ ಉತ್ಪನ್ನಗಳಿಗೆ ರಿಯಾಯಿತಿ ಸಿಗಬಹುದು?

ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಆಕರ್ಷಕ ಡೀಲ್‌ಗಳು ಸಿಗುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್ಸ್, ವಾಷಿಂಗ್ ಮೆಷಿನ್, ಸ್ಮಾರ್ಟ್ ಹೋಮ್ ಉಪಕರಣಗಳು, ಫ್ರಿಜ್ ಮತ್ತು ಸ್ಮಾರ್ಟ್‌ವಾಚ್‌ಗಳಂತಹ ಉತ್ಪನ್ನಗಳು ಈ ಪಟ್ಟಿಯಲ್ಲಿವೆ. ಆದರೆ ಈ ಉತ್ಪನ್ನಗಳ ನಿಖರ ಬೆಲೆ, ಎಷ್ಟು ರಿಯಾಯಿತಿ ಸಿಗಲಿದೆ ಮತ್ತು ಯಾವ ಮಾದರಿಗಳ ಮೇಲೆ ವಿಶೇಷ ಆಫರ್ ಇರಲಿದೆ ಎಂಬುದನ್ನು ಫ್ಲಿಪ್‌ಕಾರ್ಟ್ ಇನ್ನೂ ಬಹಿರಂಗಪಡಿಸಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ