AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ನಿಂತು ಗಂಟೆಗಳೇ ಕಳೆದರೂ ನಿಲ್ಲದ ಪ್ರವಾಹ: ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್

ಮಳೆ ನಿಂತು ಗಂಟೆಗಳೇ ಕಳೆದರೂ ನಿಲ್ಲದ ಪ್ರವಾಹ: ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್

ರಾಮು, ಆನೇಕಲ್​
| Edited By: |

Updated on: Sep 16, 2026 | 11:57 AM

Share

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮಳೆ ನಿಂತು ಹಲವು ಗಂಟೆಗಳಾದರೂ ನೀರು ಕಡಿಮೆಯಾಗಿಲ್ಲ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಫ್ಲೈಓವರ್ ಜಲಾವೃತಗೊಂಡಿದ್ದು, ಹೊಳೆಯಂತೆ ನೀರು ಹರಿದಿದೆ. ಪರಿಣಾಮ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ಹಲವು ವಾಹನಗಳು ಕೆಟ್ಟು ನಿಂತಿದ್ದರಿಂದ ಸವಾರರು ಪರದಾಡಿದರು.

ಆನೇಕಲ್, ಸೆಪ್ಟೆಂಬರ್ 16: ಬೆಂಗಳೂರಿನಲ್ಲಿ ಮಳೆ ನಿಂತು ಹಲವು ಗಂಟೆಗಳು ಕಳೆದರೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿನ ನೀರು ಮಾತ್ರ ಕಡಿಮೆಯಾಗದೇ ಇರುವುದು ಕಂಡುಬಂದಿದೆ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಫ್ಲೈಓವರ್ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯ ಮೇಲೆ ಹೊಳೆಯಂತೆ ನೀರು ಹರಿದಿದೆ. ನೀರು ನಿಂತಿದ್ದರೂ ವಾಹನಗಳ ಸಂಚಾರ ಮುಂದುವರಿದಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಫ್ಲೈಓವರ್ ಮೇಲೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಹಲವು ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡವು.

ನೀರಿನ ಮಧ್ಯೆಯೇ ಕೆಲವು ವಾಹನಗಳು ಕೆಟ್ಟು ನಿಂತ ಪರಿಣಾಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಮಳೆ ನಿಂತು ಗಂಟೆಗಳು ಕಳೆದರೂ ನೀರು ತೆರವಾಗದಿರುವುದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us