AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

RBI MPC meeting updates: ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ತನ್ನ ದರಗಳನ್ನು ಪ್ರಕಟಿಸಿದ್ದು, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಿದೆ. ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಜಿಡಿಪಿ ಈ ಹಣಕಾಸು ವರ್ಷ ಶೇ. 6.7ರಷ್ಟು ಉತ್ತಮ ಬೆಳವಣಿಗೆ ಕಾಣಬಹುದು ಎಂದು ಎಂಪಿಸಿ ಅಂದಾಜಿಸಿದೆ. ಹಣದುಬ್ಬರ ಶೇ. 5ಕ್ಕೆ ಸೀಮಿತವಾಗಬಹುದು ಎಂದು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ.

ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು
ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 05, 2026 | 10:45 AM

Share

ಮುಖ್ಯಾಂಶಗಳು

  • ಆರ್​ಬಿಐ ತನ್ನ ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಿದೆ.
  • ಜಿಡಿಪಿ ಈ ವರ್ಷ ಶೇ. 6.7ರಷ್ಟು ಬೆಳವಣಿಗೆ ಕಾಣಬಹುದು ಎಂದು ಎಂಪಿಸಿ ಅಂದಾಜಿಸಿದೆ.
  • ಹಣದುಬ್ಬರ ಶೇ. 5ಕ್ಕೆ ಸೀಮಿತವಾಗಬಹುದು ಎಂದು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ.

ನವದೆಹಲಿ, ಆಗಸ್ಟ್ 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC) ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದು, ಪ್ರಮುಖ ಬಡ್ಡಿದರವಾದ ರೆಪೋ ದರವನ್ನು ಶೇ. 5.25 ರಲ್ಲಿ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಜಾಗತಿಕ ಅಸ್ಥಿರತೆ ಮತ್ತು ಹಣದುಬ್ಬರದ ಕಳವಳಗಳ ನಡುವೆಯೂ ಆರ್‌ಬಿಐ ತನ್ನ ‘ತಟಸ್ಥ’ (Neutral) ನೀತಿ ನಿಲುವನ್ನು ಮುಂದುವರಿಸಿದೆ. ಆಗಸ್ಟ್ 3ರಿಂದ ನಡೆದ ಎಂಪಿಸಿ ಸಭೆ ಇಂದು ಮುಕ್ತಾಯಗೊಂಡಿದ್ದು, ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿಯಲ್ಲಿ ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಆರ್​ಬಿಐನ ವಿವಿಧ ದರಗಳು

  • ರೆಪೋ ದರ (Repo Rate): ಶೇ. 5.25
  • ನೀತಿ ನಿಲುವು (Policy Stance): ತಟಸ್ಥ (Neutral)
  • ಎಸ್‌ಡಿಎಫ್ ದರ (Standing Deposit Facility): ಶೇ. 5.00
  • ಎಂಎಸ್‌ಎಫ್ ದರ (Marginal Standing Facility: ಶೇ. 5.50

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಹಣ ಫಿಕ್ಸೆಡ್ ಡೆಪಾಸಿಟ್ ಇಡಬಹುದು?

ಹಣದುಬ್ಬರ ಈ ವರ್ಷ ಶೇ. 5 ಎಂದು ಅಂದಾಜು

ರೀಟೇಲ್ ಹಣದುಬ್ಬರ ಅಥವಾ ಸಿಪಿಐ ಆಧಾರಿತ ಹಣದುಬ್ಬರವು ನಿಗದಿತ ಗುರಿಗಿಂತ ಹೆಚ್ಚು ಇರಲಿದೆ ಎಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು. ಆರ್​ಬಿಐನ ಎಂಪಿಸಿ ಸಭೆಯು ಈ ವರ್ಷದಲ್ಲಿ ಹಣದುಬ್ಬರ ಶೇ. 5ರಷ್ಟು ಇರಬಹುದು ಎಂದು ಅಂದಾಜು ಮಾಡಿದೆ. ಆರ್​ಬಿಐ ಹಣದುಬ್ಬರ ಅಂದಾಜು ಈ ರೀತಿ ಇದೆ.

2026-27ರಲ್ಲಿ ಹಣದುಬ್ಬರ ಹೀಗಿರಬಹುದು:

ಒಟ್ಟು ರೀಟೇಲ್ ಹಣದುಬ್ಬರ ಶೇ. 5

  • ಕ್ವಾರ್ಟರ್ 1: ಶೇ. 5.3
  • ಕ್ವಾರ್ಟರ್ 2: ಶೇ. 4.7
  • ಕ್ವಾರ್ಟರ್ 3: ಶೇ. 4.9
  • ಕ್ವಾರ್ಟರ್ 4: ಶೇ. 5.5

ಇದನ್ನೂ ಓದಿ: ಎಂಡಿಆರ್ ಶುಲ್ಕ ಜಾರಿಯಾದರೆ 3,000 ರೂಗಿಂತ ಹೆಚ್ಚಿನ ಪಾವತಿಗೆ ಶೇ. 53 ಮಂದಿ ಹಿಂದೇಟು; ಸಮೀಕ್ಷೆ ಅಭಿಪ್ರಾಯ

ಜಿಡಿಪಿ ಈ ಹಣಕಾಸು ವರ್ಷ ಶೇ. 6.7: ಆರ್​ಬಿಐ ಎಂಪಿಸಿ

ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು ಭಾರತದ ಜಿಡಿಪಿ ಬೆಳವಣಿಗೆ ಈ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿದೆ. ಇದು ಉತ್ತಮ ಬೆಳವಣಿಗೆ ಎನಿಸಲಿದೆ. ತ್ರೈಮಾಸಿಕವಾರು ಜಿಡಿಪಿ ಅಂದಾಜು ದರ ಇಂತಿದೆ:

  • ಕ್ವಾರ್ಟರ್ 1: ಶೇ. 7
  • ಕ್ವಾರ್ಟರ್ 2: ಶೇ. 6.4
  • ಕ್ವಾರ್ಟರ್ 3: ಶೇ. 6.5
  • ಕ್ವಾರ್ಟರ್ 4: ಶೇ. 6.8

ಸಾಲಗಾರರ ಮೇಲಾಗುವ ಪರಿಣಾಮ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಬ್ಯಾಂಕ್‌ಗಳ ಗೃಹ ಸಾಲ (Home Loan), ವಾಹನ ಸಾಲ (Car Loan) ಮತ್ತು ವೈಯಕ್ತಿಕ ಸಾಲಗಳ (Personal Loan) ಮಾಸಿಕ ಕಂತುಗಳ (EMI) ದರಗಳಲ್ಲಿ ಯಾವುದೇ ಹೆಚ್ಚಳವಾಗದೆ ಸಾಲಗಾರರಿಗೆ ಸ್ಥಿರತೆ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Wed, 5 August 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ