AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್​ಎಲ್​ವಿ ರಾಕೆಟ್ ವೈಫಲ್ಯ; ನಾಶಗೊಂಡ ಸೆಟಿಲೈಟ್​ಗಳ ನಷ್ಟ ಯಾರು ಭರಿಸೋದು?

PSLV rocket mission failure, who bears the loss for lost satellites: ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್ ಉಡಾವಣೆ ವೇಳೆ ವೈಫಲ್ಯ ಕಂಡಿದೆ. ಅದರಲ್ಲಿದ್ದ ಇಒಎಸ್-ಎನ್1, ಕೆಐಡಿ ಕ್ಯಾಪ್ಸೂಲ್ ಸೇರಿದಂತೆ 16 ಸೆಟಿಲೈಟ್​ಗಳು ನಾಶಗೊಳ್ಳಲಿವೆ. ವಿವಿಧ ದೇಶಗಳಿಂದ ತಯಾರಿಸಿದ ಸೆಟಿಲೈಟ್​ಗಳು ಕೆಲವು ಇದರಲ್ಲಿವೆ. ಈ ಸೆಟಿಲೈಟ್​ಗಳ ನಷ್ಟವನ್ನು ಯಾರು ಭರಿಸುತ್ತಾರೆ?

ಪಿಎಸ್​ಎಲ್​ವಿ ರಾಕೆಟ್ ವೈಫಲ್ಯ; ನಾಶಗೊಂಡ ಸೆಟಿಲೈಟ್​ಗಳ ನಷ್ಟ ಯಾರು ಭರಿಸೋದು?
ಪಿಎಸ್​ಎಲ್​ವಿ ರಾಕೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2026 | 1:37 PM

Share

ನವದೆಹಲಿ, ಜನವರಿ 12: ಹದಿನಾರು ಸೆಟಿಲೈಟ್​ಗಳನ್ನು ಹೊತ್ತ ಪಿಎಸ್​ಎಲ್​ವಿ ರಾಕೆಟ್ ಉಡಾವಣೆ (PSLV rocket launch) ವಿಫಲವಾಗಿದೆ. ಇಸ್ರೋದಿಂದ ಉಡಾವಣೆಗೊಂಡ ಪಿಎಸ್​ಎಲ್​ವಿ-ಸಿ62 ರಾಕೆಟ್ ತಾಂತ್ರಿಕ ವೈಫಲ್ಯ ಕಂಡು, ಗುರಿ ತಪ್ಪಿದೆ. ಇದರೊಂದಿಗೆ, ರಾಕೆಟ್ ಜೊತೆಗೆ ಅದರಲ್ಲಿದ್ದ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್-ಎನ್1 ಸೇರಿದಂತೆ 16 ಸೆಟಿಲೈಟ್​ಗಳೂ ನಾಶವಾಗಲಿವೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ಬೆಳಗ್ಗೆ 10:18ಕ್ಕೆ ಈ ರಾಕೆಟ್ ಉಡಾವಣೆ ಆಗಿತ್ತು. ಇಒಎಸ್-ಎನ್1 ಸೇರಿದಂತೆ 15 ಸೆಟಿಲೈಟ್​ಗಳನ್ನು ಸೂರ್ಯ ಸಂಬದ್ಧ ಕಕ್ಷೆಗೆ (Sun Synchronous Orbit) ತಲುಪಿಸುವ ಮಿಷನ್ ಇತ್ತು. ಕೆಐಡಿ ಎನ್ನುವ ಮತ್ತೊಂದು ಕ್ಯಾಪ್ಸೂಲ್ ಅನ್ನು ಭೂಮಿಗೆ ವಾಪಸ್ ತರುವ ಯೋಜನೆ ಇತ್ತು.

ಇದನ್ನೂ ಓದಿ: PSLV-C62: 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ

ಕೆಐಡಿ ಅಥವಾ ಕೆಸ್ಟ್ರೆಲ್ ಇನಿಶಿಯಲ್ ಟೆಕ್ನಾಲಜಿ ಡೆಮಾನ್ಸ್​ಟ್ರೇಟರ್ ಅನ್ನು ಸ್ಪೇನ್ ದೇಶದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಇದು 25 ಕಿಲೋ ಕ್ಯಾಪ್ಸೂಲ್ ಆಗಿದ್ದು, ಭೂಮಿಗೆ ಮರಳಿ ಬರುವುದಕ್ಕೆಂದೇ ರೂಪಿಸಿದಂತಾಗಿತ್ತು. ಇನ್ನು, ಈ ಮಿಷನ್​ನ ಪ್ರಮುಖ ಉಪಗ್ರಹವಾದ ಇಒಎಸ್-ಎನ್1 ಅನ್ನು ಬ್ರಿಟನ್ ಮತ್ತು ಥಾಯ್ಲೆಂಡ್ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದವು. ಇವುಗಳೂ ಸೇರಿ ಒಟ್ಟು 16 ಸೆಟಿಲೈಟ್​ಗಳು ಕಳೆದುಹೋದಂತಾಗಿದೆ.

ನಷ್ಟಗೊಂಡ ಸೆಟಿಲೈಟ್​ಗಳಿಗೆ ಯಾರು ಹೊಣೆ?

ಸೆಟಿಲೈಟ್ ಉಡಾವಣೆ ವೇಳೆ ರಾಕೆಟ್ ವೈಫಲ್ಯವಾಗಿ, ಅದರಲ್ಲಿದ್ದ ಸೆಟಿಲೈಟ್​ಗಳು ನಾಶಗೊಂಡರೆ ಅದಕ್ಕೆ ಹೊಣೆ ಯಾರೆಂದು ಇರುವುದಿಲ್ಲ. ಬಸ್ ಅಪಘಾತವಾಗಿ ಪ್ರಯಾಣಿಕರು ಸಾವನ್ನಪ್ಪಿದರೆ ಬಸ್ ಮಾಲೀಕರು ಪರಿಹಾರ ಕೊಡಬೇಕೆಂದಿಲ್ಲ. ಹಾಗೆಯೇ, ರಾಕೆಟ್ ವಿಫಲವಾಗಿ ಸೆಟಿಲೈಟ್ ನಾಶವಾದರೆ, ಅದಕ್ಕೆ ರಾಕೆಟ್ ಉಡಾಯಿಸಿದ ಅಥವಾ ಅದನ್ನು ನಿರ್ಮಿಸಿದ ಇಸ್ರೋ ಹೊಣೆಯಾಗುವುದಿಲ್ಲ.

ಸೆಟಿಲೈಟ್ ತಯಾರಿಸಿದವರು ಅದಕ್ಕೆ ಇನ್ಷೂರೆನ್ಸ್ ಮಾಡಿಸುವ ಅವಕಾಶ ಇರುತ್ತದೆ. ಹಾಗೆ ಇನ್ಷೂರೆನ್ಸ್ ಮಾಡಿಸಿದ್ದರೆ ಒಂದಷ್ಟು ಪರಿಹಾರ ಪಡೆಯಬಹುದು. ಬ್ರೆಜಿಲ್, ನೇಪಾಳ ಮೊದಲಾದ ಇತರ ಕೆಲ ದೇಶಗಳ ಸೆಟಿಲೈಟ್​ಗಳೂ ಈ ಮಿಷನ್​ನಲ್ಲಿ ಇದ್ದವು. ಆಯಾ ಕಂಪನಿಗಳು ವಿಮೆ ಮಾಡಿಸಿರುವ ಸಾಧ್ಯತೆ ಇರುತ್ತದೆ. ಇಸ್ರೋದಿಂದಾಗಲೀ, ಅಥವಾ ಸರ್ಕಾರದಿಂದಲಾಗಲೀ ಆ ಸೆಟಿಲೈಟ್ ತಯಾರಕರಿಗೆ ಪರಿಹಾರ ಕೊಡಲಾಗುವುದಿಲ್ಲ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ಇಸ್ರೋಗೆ ಇದು ಐದನೇ ಪಿಎಸ್​ಎಲ್​ವಿ ವೈಫಲ್ಯ…

ಇಸ್ರೋ ಇಲ್ಲಿಯವರೆಗೆ 64 ಬಾರಿ ಪಿಎಸ್​ಎಲ್​ವಿ ರಾಕೆಟ್ ಅನ್ನು ಆಗಸಕ್ಕೆ ಕಳುಹಿಸಿದೆ. ಇವತ್ತಿನದೂ ಸೇರಿ ಐದು ಬಾರಿ ವೈಫಲ್ಯವಾಗಿದೆ. 2025ರಲ್ಲೂ ಪಿಎಸ್​ಎಲ್​ವಿ ಮಿಷನ್ ಫೇಲ್ಯೂರ್ ಆಗಿತ್ತು. ಕಳೆದ ಒಂದು ವರ್ಷದಲ್ಲಿ ಸತತ ಎರಡು ಬಾರಿ ಪಿಎಸ್​ಎಲ್​ವಿ ವೈಫಲ್ಯ ಕಂಡಿದೆ. ಆದರೆ, 64 ಮಿಷನ್​ನಲ್ಲಿ 5 ವೈಫಲ್ಯ ಎಂಬುದು ಕಳಪೆ ಸಾಧನೆಯಲ್ಲ. ಇಲಾನ್ ಮಸ್ಕ್ ಅವರ ರಾಕೆಟ್ ಮಿಷನ್​ಗಳೂ ಕೂಡ ಬಾರಿ ಬಾರಿ ವಿಫಲವಾಗಿರುವುದುಂಟು.

ಸೆಟಿಲೈಟ್​ಗಳು ಏನಾಗುತ್ತವೆ?

ರಾಕೆಟ್ ಉಡಾವಣೆ ವಿಫಲವಾದಾಗ ಅದರಲ್ಲಿದ್ದ ಸೆಟಿಲೈಟ್​ಗಳು ಹೆಚ್ಚಿನವು ಭೂಮಿ ವಾತಾವರಣಕ್ಕೆ ವೇಗವಾಗಿ ಬರುವಾಗ ಸುಟ್ಟು ಹೋಗಬಹುದು. ಕೆಲವು ಆಗಸದಲ್ಲಿ ಕೆಲ ಕಾಲ ಸ್ಪೇಸ್ ತ್ಯಾಜ್ಯಗಳಾಗಿ ಉಳಿಯಬಹುದು. ಇನ್ನು ರಾಕೆಟ್ ಅನ್ನು ಸಮುದ್ರದ ಮೇಲೆ ಉಡಾವಣೆ ಮಾಡುವುದರಿಂದ ಅದು ಸಮುದ್ರಕ್ಕೆ ಉದುರಿ ಬೀಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ