
ISRO
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದೆ. ಇಸ್ರೋ ವಿಶ್ವದ ಆರು ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ, ಅದು ಸಂಪೂರ್ಣ ಉಡಾವಣಾ ಸಾಮರ್ಥ್ಯಗಳನ್ನು ಹೊಂದಿದೆ. ಇದು ಬಾಹ್ಯಾಕಾಶ ಇಲಾಖೆಯ ಪ್ರಾಥಮಿಕ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ, ಇದನ್ನು ಭಾರತದ ಪ್ರಧಾನ ಮಂತ್ರಿಯವರು ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಇಸ್ರೋ ಅಧ್ಯಕ್ಷರು ಬಾಹ್ಯಾಕಾಶ ಇಲಾಖೆಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆಗಳು, ಬಾಹ್ಯಾಕಾಶ ಪರಿಶೋಧನೆ, ಅಂತರಾಷ್ಟ್ರೀಯ ಬಾಹ್ಯಾಕಾಶ ಸಹಕಾರ ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಇಸ್ರೋ ಪ್ರಾಥಮಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಇದು ಸಂಪೂರ್ಣ ಉಡಾವಣಾ ಸಾಮರ್ಥ್ಯಗಳನ್ನು ಹೊಂದಿದೆ, ಕ್ರಯೋಜೆನಿಕ್ ಎಂಜಿನ್ಗಳನ್ನು ನಿಯೋಜಿಸಬಹುದು, ಭೂಮ್ಯತೀತ ಕಾರ್ಯಾಚರಣೆಗಳನ್ನು ಪ್ರಾರಂಭಿಸಬಹುದು ಮತ್ತು ಕೃತಕ ಉಪಗ್ರಹಗಳ ದೊಡ್ಡ ಫ್ಲೀಟ್ ಅನ್ನು ನಿರ್ವಹಿಸಬಹುದು.
ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ಗೆ ಪ್ರಧಾನಿ ಮೋದಿ ಭಾವುಕ ಪತ್ರ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬರುವಿಕೆಗಾಗಿ ಇಡೀ ಜಗತ್ತೇ ಉಸಿರು ಬಿಗಿ ಹಿಡಿದು ಕಾಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಭಾರತದ ಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಪತ್ರ ಬರೆದಿದ್ದಾರೆ. ‘‘ನೀವು ಸಾವಿರಾರು ಮೈಲುಗಳಷ್ಟು ದೂರವಿದ್ದರೂ ಸದಾ ನಮ್ಮ ಹೃದಯಕ್ಕೆ ಹತ್ತಿರವಾಗಿರುತ್ತೀರಿ’’ ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.
- Nayana Rajeev
- Updated on: Mar 18, 2025
- 2:51 pm
ಚಂದ್ರಯಾನ-5 ಯೋಜನೆಗೆ ಕೇಂದ್ರ ಅನುಮೋದನೆ: ಇಸ್ರೋ ಅಧ್ಯಕ್ಷ ನಾರಾಯಣನ್
Chandrayaan-5: ಕೇಂದ್ರ ಸರ್ಕಾರವು ಇಸ್ರೋದ ಮಹತ್ವದ ಯೋಜನೆಗಳಲ್ಲಿ ಒಂದಾದ ಚಂದ್ರಯಾನ-5 ಯೋಜನೆಗೆ ಅನುಮೋದನೆ ನೀಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಮಾಹಿತಿ ನೀಡಿದ್ದಾರೆ. 25 ಕೆಜಿ ತೂಕದ ರೋವರ್ ‘ಪ್ರಯಾಗ್ಯಾನ್' ಅನ್ನು ಹೊತ್ತ ಚಂದ್ರಯಾನ-3 ಮಿಷನ್ಗಿಂತ ಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ.
- Nayana Rajeev
- Updated on: Mar 17, 2025
- 7:52 am
ಭಾರತದ ಬಾಹ್ಯಾಕಾಶ ವೈಭವ; 10 ವರ್ಷದಲ್ಲಿ 398 ವಿದೇಶೀ ಸೆಟಿಲೈಟ್ಗಳ ಉಡಾವಣೆ: ಮೋದಿ ಖುಷಿ
ನವದೆಹಲಿ, ಜನವರಿ 31: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ವಿಶ್ವದ ಹಲವು ರಾಷ್ಟ್ರಗಳ ಸೆಟಿಲೈಟ್ಗಳನ್ನು ಆಕಾಶಕ್ಕೆ ಕಳುಹಿಸುವ ಕಾರ್ಯದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಹಾಗೂ ಇಸ್ರೋದ ಸೆಟಿಲೈಟ್ ಉಡಾವಣೆ ಸಾಮರ್ಥ್ಯದ ಬಗ್ಗೆ ಅಂಕಿ ಅಂಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Vijaya Sarathy SN
- Updated on: Jan 31, 2025
- 11:39 am
ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ವೇದಿಕೆಗೆ ಸಂಪುಟ ಅನುಮೋದನೆ; ಭಾರತದ ಬಾಹ್ಯಾಕಾಶ ಯಾತ್ರೆಗೆ ಉತ್ತೇಜನ
ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ವೇದಿಕೆಗೆ ಭಾರತದ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ವೇದಿಕೆ ಮುಂದಿನ ಪೀಳಿಗೆಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಗಳನ್ನು ಉತ್ತೇಜಿಸಲಿದೆ. ಇದು LVM3 ಉಡಾವಣೆಗಳು ಮತ್ತು ಗಗನಯಾನ ಕಾರ್ಯಾಚರಣೆಗಳನ್ನು ಹೆಚ್ಚಿಸುತ್ತದೆ. ಈ ಯೋಜನೆಗೆ 3,985 ಕೋಟಿ ರೂ. ವೆಚ್ಚವಾಗಿದ್ದು, 48 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇಸ್ರೋ ತನ್ನ ಬಾಹ್ಯಾಕಾಶ ಡಾಕಿಂಗ್ ಪ್ರಯೋಗದೊಂದಿಗೆ ಉಪಗ್ರಹ ಡಾಕಿಂಗ್ ಅನ್ನು ಸಹ ಯಶಸ್ವಿಯಾಗಿ ಪ್ರದರ್ಶಿಸಿತು.
- Sushma Chakre
- Updated on: Jan 16, 2025
- 4:31 pm
ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ, ಇಸ್ರೋದಿಂದ ಸ್ಪೇಸ್ ಡಾಕಿಂಗ್ ಪ್ರಯೋಗ ಯಶಸ್ವಿ
Space Docking: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಬೆಳಗ್ಗೆ ಇತಿಹಾಸ ನಿರ್ಮಿಸಿದೆ. ಇಸ್ರೋ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಇರಿಸಿದೆ. ಇದರೊಂದಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್ ಡಾಕಿಂಗ್ ಪ್ರಯೋಗ (SPADEX) ಅಡಿಯಲ್ಲಿ ಉಪಗ್ರಹಗಳನ್ನು ಯಶಸ್ವಿಯಾಗಿ 'ಡಾಕ್' ಮಾಡಿದೆ.
- Nayana Rajeev
- Updated on: Jan 16, 2025
- 11:24 am
V Narayanan: ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ
ಚಂದ್ರನತ್ತ ಕೊಂಡೊಯ್ದ ಇಸ್ರೋ ದಿನಕ್ಕೊಂದು ಹೊಸ ಪವಾಡವನ್ನೇ ಮಾಡುತ್ತಿದೆ. ಆಕಾಶದಲ್ಲಿ ಇಸ್ರೋ ಮಾಡಿದ ಸಾಹಸಗಳನ್ನು ಜಗತ್ತೇ ಅರಿತಿದೆ. ಅದರ ಮುಖ್ಯಸ್ಥರು ಬದಲಾಗುತ್ತಲೇ ಇರುತ್ತಾರೆ. ಆದರೆ ಯಶಸ್ಸಿನ ವೇಗ ನಿಲ್ಲುವುದಿಲ್ಲ. ಇದೇ ವೇಳೆ ಇಸ್ರೋ ಮುಖ್ಯಸ್ಥರು ಬದಲಾಗಲಿದ್ದಾರೆ. ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರ ಸ್ಥಾನಕ್ಕೆ ವಿ ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ.ವಿ ನಾರಾಯಣನ್ ಅವರು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಜನವರಿ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
- Nayana Rajeev
- Updated on: Jan 8, 2025
- 8:15 am
ಸ್ಪೇಸ್ ಡಾಕಿಂಗ್ ಆಯ್ತು; 2025ರ ಮೊದಲಾರ್ಧದಲ್ಲಿ ಭಾರತದಿಂದ ಬಾಹ್ಯಾಕಾಶ ಯೋಜನೆಗಳ ಸರಮಾಲೆ
Space missions from India: 2024ರಲ್ಲಿ ಭಾರತದಿಂದ 15 ಬಾಹ್ಯಾಕಾಶ ಮಿಷನ್ಗಳು ಜಾರಿಯಾಗಿದ್ದವು. ಸ್ಪೇಸ್ ಡಾಕಿಂಗ್ ಪ್ರಯೋಗ ಯಶಸ್ವಿಯಾಗಿತ್ತು. 2025ರಲ್ಲಿ ಕೆಲ ಮಹತ್ವದ ಸ್ಪೇಷ್ ಮಿಷನ್ಗಳು ನಡೆಯಲಿವೆ. ಮಹಿಳಾ ರೋಬೋವೊಂದನ್ನು ಗಗನಕ್ಕೆ ಕಳುಹಿಸಲಾಗುತ್ತಿದೆ. ವಿಶ್ವದ ಅತ್ಯಂತ ದುಬಾರಿ ಸೆಟಿಲೈಟ್ ಅನ್ನು ಭಾರತದಿಂದ ಲಾಂಚ್ ಮಾಡಲಾಗುತ್ತಿದೆ.
- Vijaya Sarathy SN
- Updated on: Jan 1, 2025
- 4:52 pm
Year Ender 2024: ಈ ವರ್ಷ ಇಸ್ರೋ ಮಾಡಿದ ಮಹತ್ವದ ಸಾಧನೆಗಳಿವು
2024 ಕ್ಕೆ ವಿದಾಯ ಹೇಳುವ ಸಮಯ ಬಂದೆ ಬಿಟ್ಟಿದೆ. ಇದೀಗ ನಾವೆಲ್ಲರೂ ಈ ವರ್ಷದ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದು, ಹೊಸ ವರ್ಷಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈಗಾಗಲೇ ಹೊಸ ವರ್ಷವನ್ನು ಭರ ಮಾಡಿಕೊಳ್ಳಲು ಸಾಕಷ್ಟು ಸಿದ್ಧತೆಗಳು ಆಗುತ್ತಲೇ ಇದೆ. ಆದರೆ ಈ ವರ್ಷ ಕೂಡ ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಾಹ್ಯಾಕಾಶದಲ್ಲಿ ಈಗಾಗಲೇ ಸಾಕಷ್ಟು ಐತಿಹಾಸಿಕ ಸಾಧನೆಗಳನ್ನು ಮಾಡಿ ಭಾರತೀಯರು ಹೆಮ್ಮೆ ಪಡೆಯುವಂತೆ ಮಾಡಿದೆ. 2024 ರಲ್ಲಿ ಇಸ್ರೋ ಮಾಡಿದ ಸಾಧನೆಗಳೇನು? ಹಾಗೂ ಬಾಹ್ಯಾಕಾಶಕ್ಕೆ ಯಾವೆಲ್ಲಾ ಉಪಗ್ರಹಗಳನ್ನು ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
- Sainandha P
- Updated on: Dec 18, 2024
- 10:47 am
ISRO Scientist Salary 2024: ಇಸ್ರೋ ವಿಜ್ಞಾನಿಗಳಿಗೆ ಸಿಗುವ ತಿಂಗಳ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಹೆಮ್ಮೆ ಅಂದ್ರೆ ತಪ್ಪಾಗಲಾರದು. ತನ್ನ ಸಾಧನೆಯ ಮೂಲಕವೇ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಇಸ್ರೋದಲ್ಲಿ ಕಾರ್ಯ ನಿರ್ವಹಿಸುವ ವಿಜ್ಞಾನಿಗಳಿಗೆ ಎಷ್ಟು ಸಂಬಳ ಇರಬಹುದು, ಅವರು ತಿಂಗಳಿಗೆ ಎಷ್ಟು ಸಂಪಾದನೆ ಮಾಡಬಹುದು ಎಂಬ ಕುತೂಹಲ ಹಲವರಲ್ಲಿ ಇದ್ದೇ ಇರುತ್ತದೆ. ನಿಮಗೂ ಕೂಡಾ ಈ ಕುತೂಹಲ ಇದ್ಯಾ? ಫ್ರೆಶರ್ಸ್ಗಳಿಂದ ಹಿಡಿದು ಉನ್ನತ ತಜ್ಞರ ವರೆಗೆ ಇಸ್ರೋದ ವಿಜ್ಞಾನಿಗಳ ತಿಂಗಳ ಸಂಬಳ ಎಷ್ಟು ಎಂಬ ಮಾಹಿತಿ ಇಲ್ಲಿದೆ.
- Malashree anchan
- Updated on: Dec 17, 2024
- 4:39 pm
ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ, ನೆಹರು ತಾರಾಲಯದಲ್ಲಿ ವಿಶೇಕ್ಷ ಪ್ರದರ್ಶನ ಕಂಡು ಹೆಮ್ಮೆ ಪಟ್ಟ ಜನ
ಇಡೀ ದೇಶವನ್ನೆ ತಿರುಗಿ ನೋಡುವಂತೆ ಮಾಡಿದ್ದ ಮಂಗಳಯಾನ ಕಕ್ಷೆಗೆ ತಲುಪಿ 10 ವರ್ಷ ಕಳೆದಿದ್ದು, ನಿನ್ನೆ ಅದರ ನೆನಪಿಗಾಗಿ ನೆಹರು ತಾರಾಲಯದಲ್ಲಿ ಮಂಗಳಯಾನದ ಮಾಡೆಲ್ಗಳನ್ನ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇದನ್ನು ಕಂಡ ಜನ ಇದರ ಬಗ್ಗೆ ಮಂಗಳಯಾನದ ಯಶಸ್ಸಿನ ಕಥೆ ಕೇಳಿ ಹೆಮ್ಮೆ ಪಟ್ಟರು.
- Poornima Agali Nagaraj
- Updated on: Sep 30, 2024
- 7:18 am