AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸಕ್ಕೆ ನಿಸಾರ್ ಸೆಟಿಲೈಟ್ ಹಾರಿಸಿದ ಭಾರತದ ರಾಕೆಟ್; ಇದು ಎರಡು ರಾಡಾರ್ ಫ್ರೀಕ್ವೆನ್ಸಿ ಬಳಸುವ ವಿಶ್ವದ ಮೊದಲ ಉಪಗ್ರಹ

Successful launch of NISAR satellite built by ISRO and NASA: ಭಾರತದ ಇಸ್ರೋ ಮತ್ತು ಅಮೆರಿಕದ ನಾಸಾ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿದ ನಿಸಾರ್ ಸೆಟಿಲೈಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋ ನಿರ್ಮಿತ ಜಿಎಸ್​ಎಲ್​ವಿ ಎಫ್-16 ರಾಕೆಟ್ ಮೂಲಕ ಜುಲೈ 30, ಬುಧವಾರ ಸಂಜೆ ಇದರ ಉಡ್ಡಯನ ಮಾಡಲಾಗಿದೆ. ಆಪ್ಟಿಕಲ್ ಕ್ಯಾಮರಾ ಬದಲು ಎರಡು ರಾಡಾರ್ ಕಣ್ಣುಗಳನ್ನು ಬಳಸಿ ತಯಾರಿಸಲಾದ ವಿಶ್ವದ ಮೊದಲ ಸೆಟಿಲೈಟ್ ಇದು.

ಆಗಸಕ್ಕೆ ನಿಸಾರ್ ಸೆಟಿಲೈಟ್ ಹಾರಿಸಿದ ಭಾರತದ ರಾಕೆಟ್; ಇದು ಎರಡು ರಾಡಾರ್ ಫ್ರೀಕ್ವೆನ್ಸಿ ಬಳಸುವ ವಿಶ್ವದ ಮೊದಲ ಉಪಗ್ರಹ
ನಿಸಾರ್ ಸೆಟಿಲೈಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2025 | 6:30 PM

Share

ಬೆಂಗಳೂರು, ಜುಲೈ 30: ಇಸ್ರೋ ಮತ್ತು ನಾಸಾ ಸಹಯೋಗದಲ್ಲಿ ತಯಾರಿಸಲಾದ ನಿಸಾರ್ ಉಪಗ್ರಹವನ್ನು (NISAR satellite) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ಭಾರತೀಯ ಕಾಲಮಾನ ಸಂಜೆ 5:40ಕ್ಕೆ ಈ ಉಪಗ್ರಹವನ್ನು ಆಗಸಕ್ಕೆ ಕಳುಹಿಸಲಾಗಿದೆ. ಜಿಎಸ್​ಎಲ್​ವಿ ಎಫ್-16 ರಾಕೆಟ್ ಮೂಲಕ ಇದರ ಉಡ್ಡಯನ ಮಾಡಲಾಗಿದೆ.

ನಿಸಾರ್ ಉಪಗ್ರಹ ಉಡಾವಣೆಯು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೂ ಒಂದು ಮೈಲಿಗಲ್ಲು. ಜಾಗತಿಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಇದು ವಿಶೇಷ ಕ್ಷಣಗಳಲ್ಲಿ ಒಂದೆನಿಸಿದೆ. ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಪಡಿಸಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ ಇದು. ಹೀಗಾಗಿ, ಇದಕ್ಕೆ NISAR (NASA ISRO Synthetic Aperture Radar) ಎಂದು ಹೆಸರಿಡಲಾಗಿದೆ.

ನಿಸಾರ್ ಸೆಟಿಲೈಟ್ ಅನ್ನು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾಗಿದೆ. ರಾಡಾರ್ ಇಮೇಜಿಂಗ್ ಸೆಟಿಲೈಟ್ ಇದು. ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪ ಸಂದರ್ಭಗಳನ್ನು ಗಮನಿಸಲು ಈ ಉಪಗ್ರಹ ಉಪಯುಕ್ತವಾಗಲಿದೆ. ಇದರ ಜೀವಿತಾವಧಿ ಐದು ವರ್ಷ ಇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಟ್ರಂಪ್ ಡೆಡ್​ಲೈನ್​ನೊಳಗೆ ಅಮೆರಿಕದೊಂದಿಗೆ ಕುದುರದ ಭಾರತದ ಟ್ರೇಡ್ ಡೀಲ್; ಮುಂದೇನು?

ಎರಡು ರಾಡಾರ್ ಫ್ರೀಕ್ವೆನ್ಸಿ ಬಳಸುವ ವಿಶ್ವದ ಮೊದಲ ಸೆಟಿಲೈಟ್

ನಿಸಾರ್ ಸೆಟಿಲೈಟ್ ಮಾಮೂಲಿಯ ಉಪಗ್ರಹ ರೀತಿಯದ್ದಲ್ಲ. ರೆಗ್ಯುಲರ್ ಸೆಟಿಲೈಟ್​ಗಳು ಸೂರ್ಯನ ಬೆಳಕು ಮತ್ತು ಕೆಮರಾ ಮೇಲೆ ಅವಲಂಬಿತವಾಗಿರುತ್ತವೆ. ಆದರೆ, ನಿಸಾರ್ ಸೆಟಿಲೈಟ್ ಎರಡು ರಾಡಾರ್ ಫ್ರೀಕ್ವೆನ್ಸಿಗಳನ್ನು ಬಳಸುತ್ತದೆ. ಅಂದರೆ, ಎರಡು ರಾಡಾರ್ ಕಣ್ಣುಗಳನ್ನು ಹೊಂದಿದೆ. ಈ ಎರಡು ರಾಡಾರ್ ಫ್ರೀಕ್ವೆನ್ಸಿಗಳೆಂದರೆ ಎಲ್ ಬ್ಯಾಂಡ್ ಮತ್ತು ಎಸ್ ಬ್ಯಾಂಡ್.

ಈ ರಾಡಾರ್ ಬ್ಯಾಂಡ್​ಗಳು ಬಾಹ್ಯಾಕಾಶದಿಂದ ಭೂಮಿಗೆ ಸಿಗ್ನಲ್​ಗಳನ್ನು ರವಾನಿಸುತ್ತವೆ. ಭೂಮಿಯಿಂದ ಮರಳುವ ಸಿಗ್ನಲ್​ಗಳನ್ನು ಸ್ವೀಕರಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಆಗುವ ಪ್ರಮುಖ ಬದಲಾವಣೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಆಪ್ಟಿಕಲ್ ಕ್ಯಾಮರಾ ಬದಲು ರಾಡಾರ್ ಅನ್ನು ಬಳಸುವುದರಿಂದ ಯಾವುದೇ ಹವಾಮಾನದಲ್ಲೂ, ದಟ್ಟ ಮೋಡಗಳಿದ್ದರೂ ಭೂಮಿಯ ಮೇಲ್ಮೈಯನ್ನು ಇದು ಹೆಚ್ಚು ನಿಖರವಾಗಿ ಗಮನಿಸಬಲ್ಲುದು.

ಇದನ್ನೂ ಓದಿ: ಬೆಂಗಳೂರಿನಿಂದ ಕಾರ್ಯಾಚರಿಸುತ್ತಿದ್ದ ಶಂಕಿತ ಅಲ್ ಕೈದಾ ಭಯೋತ್ಪಾದಕಿ ಸಮಾ ಪರ್ವೀನ್ ಬಂಧಿಸಿದ ಗುಜರಾತ್ ಎಟಿಎಸ್

ನಿಸಾರ್ ಸೆಟಿಲೈಟ್ ನಿರ್ಮಾಣದಲ್ಲಿ ಇಸ್ರೋ, ನಾಸಾ ಪಾತ್ರವೇನು?

ನಿಸಾರ್ ಸೆಟಿಲೈಟ್​ನ ಪ್ರಮುಖ ಸಿಸ್ಟಂಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ. ಹಾಗೆಯೆ, ಜಿಎಸ್​ಎಲ್​ವಿ-ಎಫ್16 ರಾಕೆಟ್ ಕೂಡ ಇಸ್ರೋದಿಂದ ನಿರ್ಮಿತವಾಗಿದೆ. ಅಮೆರಿಕದ ನಾಸಾ ಸಂಸ್ಥೆಯು ಎಲ್ ಬ್ಯಾಂಡ್ ರಾಡಾರ್, ಜಿಪಿಎಸ್ ರಿಸೀವರ್ ಮತ್ತು ಹೈಸ್ಪೀಡ್ ಡಾಟಾ ಡೌನ್​ಲಿಂಕ್ ಸಿಸ್ಟಂಗಳನ್ನು ಕೊಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ