AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾಕ್ ಬಳಿ ಟ್ಯಾಂಕರ್ ದಾಳಿಯಲ್ಲಿ ಗಾಯಗೊಂಡಿದ್ದ ಮುಂಬೈ ಮೂಲದ ಭಾರತೀಯ ಎಂಜಿನಿಯರ್ ನಿಧನ

ಕಚ್ಚಾ ತೈಲದ ಟ್ಯಾಂಕರ್ ಸಫೇಸಿಯಾ ವಿಷ್ಣುವಿನ ಎಂಜಿನಿಯರ್ ದೇವಾನಂದನ್ ಪ್ರಸಾದ್ ಸಿಂಗ್ ಬುಧವಾರ ಮಾರ್ಷಲ್ ಧ್ವಜ ಹೊತ್ತ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇರಾನ್-ಇಸ್ರೇಲ್-ಯುಎಸ್ ಯುದ್ಧದ ಮಧ್ಯೆ ಇರಾಕ್ ನ ಬಾಸ್ರಾ ಬಳಿಯ ಖೋರ್ ಅಲ್ ಜುಬೈರ್ ಬಂದರಿನ ಬಳಿ ಹಡಗಿನಿಂದ ಹಡಗಿಗೆ ಸರಕು ಲೋಡ್ ಮಾಡುವ ಕಾರ್ಯಾಚರಣೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಭಾರತೀಯ ಇಂಜಿನಿಯರ್ ಮೃತಪಟ್ಟಿರುವುದನ್ನು ಇರಾನ್ ದೃಢಪಡಿಸಿದೆ.

ಇರಾಕ್ ಬಳಿ ಟ್ಯಾಂಕರ್ ದಾಳಿಯಲ್ಲಿ ಗಾಯಗೊಂಡಿದ್ದ ಮುಂಬೈ ಮೂಲದ ಭಾರತೀಯ ಎಂಜಿನಿಯರ್ ನಿಧನ
Deonandan Prasad Singh
ಸುಷ್ಮಾ ಚಕ್ರೆ
|

Updated on: Mar 13, 2026 | 5:36 PM

Share

ನವದೆಹಲಿ, ಮಾರ್ಚ್ 13: ಎಂಟಿ ಸಫೇಸಿಯಾ ವಿಷ್ಣುವಿನ ಹೆಚ್ಚುವರಿ ಮುಖ್ಯ ಎಂಜಿನಿಯರ್ (ಸೂಪರಿಂಟೆಂಡೆಂಟ್) ದೇವಾನಂದನ್ ಪ್ರಸಾದ್ ಸಿಂಗ್ ಬುಧವಾರ ಮಾರ್ಷಲ್ ದ್ವೀಪದ ಧ್ವಜ ಹೊತ್ತ ಟ್ಯಾಂಕರ್ (Oil Tanker) ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. 50 ವರ್ಷದ ದೇವಾನಂದನ್ ಸಿಂಗ್ 2019ರಲ್ಲಿ ತಮ್ಮ ಊರಾದ ಬಿಹಾರದಿಂದ ಮುಂಬೈಗೆ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಥಳಾಂತರಗೊಂಡಿದ್ದರು. ಅವರು ಸರಕು ಹಡಗುಗಳಲ್ಲಿ ಸಿಬ್ಬಂದಿಯೊಂದಿಗೆ ಸಾಗರಗಳಲ್ಲಿ ಪ್ರಯಾಣಿಸಿ ಅವರನ್ನು ನೋಡಿಕೊಳ್ಳುತ್ತಿದ್ದರು.

ಆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಾಗ ಸುಮಾರು 48,000 ಮೆಟ್ರಿಕ್ ಟನ್ ನಾಫ್ತಾ ಸಾಗಿಸುತ್ತಿತ್ತು. ನೀರೊಳಗಿನ ಡ್ರೋನ್ ಅದಕ್ಕೆ ಡಿಕ್ಕಿ ಹೊಡೆದಿತ್ತು. ಈ ಸ್ಫೋಟದಲ್ಲಿ ಭಾರತೀಯ ನಾವಿಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ತೈಲ ಟ್ಯಾಂಕರ್ ಮೇಲಿನ ದಾಳಿಯ ನಂತರ ದೇವಾನಂದನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಬೆಂಕಿ ಹೊತ್ತಿಕೊಂಡ ಹಡಗಿನಿಂದ ಇತರ 15 ಭಾರತೀಯರನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: ಇರಾಕ್‌ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ; ಗಲ್ಫ್ ಯುದ್ಧಕ್ಕೆ ಮತ್ತೋರ್ವ ಭಾರತೀಯ ಬಲಿ

ದೇವಾನಂದನ್ ಸಿಂಗ್ ಈ ಹಿಂದೆ ನಿಯೋಮ್ ಮ್ಯಾರಿಟೈಮ್, ಯುನೈಟೆಡ್ ಓಷನ್ ಶಿಪ್ ಮ್ಯಾನೇಜ್‌ಮೆಂಟ್, ಬರ್ನಾರ್ಡ್ ಶುಲ್ಟೆ ಶಿಪ್ ಮ್ಯಾನೇಜ್‌ಮೆಂಟ್, ಸ್ಯಾಮ್ಸನ್ ಮ್ಯಾರಿಟೈಮ್ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡಿದ್ದರು. ಡ್ರೋನ್ ಹಡಗನ್ನು ಅಪ್ಪಳಿಸಿದ ನಂತರ, ಎಲ್ಲಾ ಸಿಬ್ಬಂದಿ ಸದಸ್ಯರು ಹಡಗನ್ನು ಬಿಟ್ಟು ನೀರಿಗೆ ಹಾರಿದರು. ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ STS ಟಗ್ ಮೂಲಕ ಅವರನ್ನು ರಕ್ಷಿಸಲಾಯಿತು. ಆದರೆ, ದೇವಾನಂದನ್ ತೀವ್ರವಾಗಿ ಗಾಯಗೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ