AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ಈ ನಿರ್ಧಾರಕ್ಕೆ ಕಾರಣ ಏನು?

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ಈ ನಿರ್ಧಾರಕ್ಕೆ ಕಾರಣ ಏನು?

ಭಾವನಾ ಹೆಗಡೆ
|

Updated on: Dec 05, 2025 | 11:43 AM

Share

ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅರ್ಚಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮದುವೆ ಮಾಡಿಸಿದ ಅರ್ಚಕರು ಸಾಕ್ಷಿ ಹೇಳಲು ಬೇರೆ ರಾಜ್ಯಗಳ ಕೋರ್ಟ್‌ಗಳಿಗೂ ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಹಲಸೂರು ಸೋಮೇಶ್ವರ ದೇಗುಲ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ. ಪ್ರಸ್ತುತ, ತಹಶೀಲ್ದಾರ್ ಸಮ್ಮುಖದಲ್ಲಿ ನೋಂದಣಿ ಬಳಿಕ ಹಾರ ಬದಲಾವಣೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಬೆಂಗಳೂರು, ಡಿಸೆಂಬರ್ 05: ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅರ್ಚಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮದುವೆ ಮಾಡಿಸಿದ ಅರ್ಚಕರು ಸಾಕ್ಷಿ ಹೇಳಲು ಬೇರೆ ರಾಜ್ಯಗಳ ಕೋರ್ಟ್‌ಗಳಿಗೂ ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಹಲಸೂರು ಸೋಮೇಶ್ವರ ದೇಗುಲ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ. ಪ್ರಸ್ತುತ, ತಹಶೀಲ್ದಾರ್ ಸಮ್ಮುಖದಲ್ಲಿ ನೋಂದಣಿ ಬಳಿಕ ಹಾರ ಬದಲಾವಣೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿ ಹಲಸೂರಿನ ಮುಜರಾಯಿ ದೇವಸ್ಥಾನದಲ್ಲಿ ಮದುವೆ ಯಾಕೆ ಮಾಡುವುದಿಲ್ಲ? ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ

ಈ ಹಿನ್ನೆಲೆ ಅರ್ಚಕರೊಬ್ಬರು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಬಳಿ ಮನವಿ ಮಾಡಿಕೊಂಡಿದ್ದು, ದೇವಸ್ಥಾದಲ್ಲಿ ಮದುವೆಯಾದ ದಂಪತಿ ವಿಚ್ಛೇದನ ಅಥವಾ ಇತರೆ ಗಂಭೀರ ಸಮಸ್ಯೆಗಳಿಗೆ ಒಳಗಾದಾಗ ಮದುವೆ ಮಾಡಿಸಿದ ಅರ್ಚಕರನ್ನು ಕೋರ್ಟ್​ ಮೆಟ್ಟಿಲೇರಿಸಿತ್ತಾರೆ. ಆದರೆ ವಿವಿಧೆಡೆಯ ಹಲವು ಭಕ್ತಾದಿಗಳು ಇದೇ ದೇವಸ್ಥಾನದಲ್ಲಿ ಮದುವೆಯಾಗುವ ಹರಕೆ ಹೊತ್ತಿರುತ್ತಾರೆ. ಹೀಗಾಗಿ ಅರ್ಚಕರಿಗೆ ತೊಂದೆರೆಯಾಗದಂತೆ ಮುಜರಾಯಿ ಇಲಾಖೆ ಕೆಲ ಶರತ್ತುಗಳನ್ನು ಒಡ್ಡಿ, ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಒಪ್ಪಿಗೆ ನೀಡಬೇಕು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.