AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಅತ್ಯಂತ ತೂಕದ ಉಪಗ್ರಹ ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿದ ಇಸ್ರೋ ‘ಬಾಹುಬಲಿ’ ರಾಕೆಟ್

ISRO's Bahubali rocket LVM3 lifts heaviest satellite: ಇಸ್ರೋ ನಿರ್ಮಿತ ಎಲ್​ವಿಎಂ3 ಎಂ4 ರಾಕೆಟ್ ಇಂದು ಭಾನುವಾರ (ನ. 2) 4,410 ಕಿಲೋ ತೂಕದ ಸಿಎಂಎಸ್-03 ಉಪಗ್ರಹವನ್ನು ನಭಕ್ಕೆ ಹೊತ್ತೊಯ್ದಿದೆ. ಸಿಎಂಎಸ್-03 ಭಾರತದಲ್ಲಿ ಉಡಾವಣೆಯಾದ ಅತ್ಯಂತ ಭಾರದ ಉಪಗ್ರಹ ಎನಿಸಿದೆ. ಎಲ್​ವಿಎಂ3 ರಾಕೆಟ್ ಇಸ್ರೋ ನಿರ್ಮಿತವಾಗಿದ್ದು, ಇದು ಹಿಂದೆ ಚಂದ್ರಯಾನ-3 ಮಿಷನ್​ನಲ್ಲಿ ಬಳಕೆಯಾಗಿತ್ತು.

ಭಾರತದ ಅತ್ಯಂತ ತೂಕದ ಉಪಗ್ರಹ ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿದ ಇಸ್ರೋ ‘ಬಾಹುಬಲಿ’ ರಾಕೆಟ್
ಎಲ್​ವಿಎಂ3
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2025 | 7:09 PM

Share

ಶ್ರೀಹರಿಕೋಟ, ನವೆಂಬರ್ 2: ಭಾರತದಲ್ಲಿ ಇದೂವರೆಗೂ ನಿರ್ಮಿಸಲಾಗಿರುವ ಸೆಟಿಲೈಟ್​ಗಳಲ್ಲಿ ಅತ್ಯಂತ ಭಾರದ್ದೆನ್ನಲಾದ ಸಿಎಂಎಸ್-03 ಕಮ್ಯೂನಿಕೇಶನ್ ಸೆಟಿಲೈಟ್ (CMS-03 satellite) ಅನ್ನು ಯಶಸ್ವಿಯಾಗಿ ನಭಕ್ಕೆ ಸಾಗಿಸಲಾಗಿದೆ. ಇಸ್ರೋ ನಿರ್ಮಿಸಿರುವ, ಬಾಹುಬಲಿ ಎಂದೇ ಖ್ಯಾತವಾಗಿರುವ 43.5 ಮೀಟರ್ ಎತ್ತರದ ಎಲ್​ವಿಎಂ3-ಎಂ4 ರಾಕೆಟ್​ನಲ್ಲಿ (LVM3-M4 rocket) ಸಿಎಂಎಸ್-03 ಉಪಗ್ರಹವನ್ನು ಕೂರಿಸಿ ಆಗಸಕ್ಕೆ ಕಳುಹಿಸಲಾಗಿದೆ. ಆಂಧ್ರದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ಸಂಜೆ 5:26ಕ್ಕೆ ಈ ಉಡಾವಣೆ ಮಾಡಲಾಗಿದೆ.

ಸಂವಹನ ಉಪಗ್ರಹವಾದ ಸಿಎಂಎಸ್-03 ಬರೋಬ್ಬರಿ 4,410 ಕಿಲೋ ತೂಕದ್ದಾಗಿದೆ. ಇದನ್ನು ಜಿಟಿಒ (ಜಿಯೋಸಿಂಕ್ರೊನಸ್ ಟ್ರಾನ್ಸ್​ಫರ್ ಆರ್ಬಿಟ್) ಕಕ್ಷೆಗೆ ಸೇರಿಸಲಾಗಿದೆ. ಬಹಳ ಕಡಿಮೆ ವೆಚ್ಚದಲ್ಲಿ ಈ ಭಾರೀ ತೂಕದ ಉಪಗ್ರಹವನ್ನು ನಭಕ್ಕೆ ಸಾಗಿಸಲಾಗಿದೆ.

ಇದನ್ನೂ ಓದಿ: ಜೇನುತುಪ್ಪಗೆ ದೊಡ್ಡ ಬೇಡಿಕೆ; ಜೇನುಸಾಕಣೆಗೆ ಕೇಂದ್ರದಿಂದ ಉತ್ತೇಜನ; ‘ಸಿಹಿ ಕ್ರಾಂತಿ’ ಹಾದಿಯಲ್ಲಿ ಭಾರತ

ದೊಡ್ಡ ತೂಕದ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲು ಇಸ್ರೋ ಫ್ರಾನ್ಸ್ ದೇಶದ ಏರಿಯೇನ್​ಸ್ಪೇಸ್ ಕಂಪನಿಯ ರಾಕೆಟ್​ಗಳನ್ನು ಬಳಸುತ್ತಿತ್ತು. ಫ್ರೆಂಚ್ ಗಯಾನ ಪ್ರದೇಶದಲ್ಲಿ ಅವುಗಳನ್ನು ಉಡಾವಣೆ ಮಾಡಲಾಗುತ್ತಿತ್ತು. ಈಗ ಭಾರತದ ನೆಲದಲ್ಲಿ ಉಡಾವಣೆಯಾದ ಅತ್ಯಂತ ಹೆಚ್ಚು ತೂಕದ ಸೆಟಿಲೈಟ್ ಎನ್ನುವ ದಾಖಲೆಯನ್ನು ಸಿಎಂಎಸ್-03 ಬರೆದಿದೆ.

ಸಿಎಂಎಸ್-03 ಸಂವಹನ ಉಪಗ್ರಹದ ವಿಶೇಷತೆಗಳೇನು?

ಸಿಎಂಎಸ್-03 ಒಂದು ಕಮ್ಯೂನಿಕೇಶನ್ ಸೆಟಿಲೈಟ್ ಆಗಿದ್ದು, ಟೆಲಿಕಾಂ, ಇಂಟರ್ನೆಟ್, ಬ್ರಾಡ್​ಕ್ಯಾಸ್ಟಿಂಗ್ ಸೇವೆಗಳನ್ನು ಬಲಪಡಿಸಲು ಸಹಾಯವಾಗುತ್ತದೆ. ಮಿಲಿಟರಿ ಕಣ್ಗಾವಲು ನಡೆಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ಸಿಎಂಎಸ್-03 ಸೇವೆಯನ್ನು ಬಳಸಿಕೊಳ್ಳಲಾಗಬಹುದು.

ಇದನ್ನೂ ಓದಿ: ಆರ್​ಜೆಡಿ ಕಾಂಗ್ರೆಸ್ ತಲೆಗೆ ಬಂದೂಕಿಟ್ಟು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ: ನರೇಂದ್ರ ಮೋದಿ

ಚಂದ್ರಯಾನ-3 ಉಪಗ್ರಹ ಹೊತ್ತು ಹೋಗಿದ್ದ ಬಾಹುಬಲಿ ರಾಕೆಟ್

ಸಿಎಂಎಸ್-03 ಸೆಟಿಲೈಟ್ ಅನ್ನು ಹೊತ್ತು ಹೋದ ಎಲ್​ವಿಎಂ-3 ಬಾಬುಬಲಿ ರಾಕೆಟ್ ಎಂದೇ ಹೆಸರಾಗಿದೆ. ಹೆಚ್ಚು ತೂಕದ ಸೆಟಿಲೈಟ್​ಗಳನ್ನು ಹೊತ್ತು ಹೋಗುವ ಸಾಮರ್ಥ್ಯ ಇದಕ್ಕಿದೆ. 4,000 ಕಿಲೋವರೆಗಿನ ಸೆಟಿಲೈಟ್​ಗಳನ್ನು ಇದು ಜಿಟಿಒ ಕಕ್ಷೆಗೆ ಸೇರಿಸಬಲ್ಲುದು. ಕೆಳ ಭೂಕಕ್ಷೆಯಾದರೆ 8,000 ಕಿಲೋ ತೂಕದ ಸೆಟಿಲೈಟ್​ಗಳನ್ನೂ ಇದು ಹೊತ್ತೊಯ್ಯಬಲ್ಲುದು.

2023ರಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಹೋದ ಚಂದ್ರಯಾನ-3 ಸೆಟಿಲೈಟ್ ಅನ್ನು ಆಗಸಕ್ಕೆ ಸೇರಿಸಿದ್ದು ಇದೇ ಎಲ್​ವಿಎಂ-3 ರಾಕೆಟ್ ಎಂಬುದು ವಿಶೇಷ. ಅದಕ್ಕೂ ಹಿಂದಿನ ವರ್ಷದಲ್ಲಿ (2022) 72 ಸೆಟಿಲೈಟ್​ಗಳನ್ನು ಹೊತ್ತೊಯ್ದು ಕೆಳ ಭೂಕಕ್ಷೆಗೆ ಸೇರಿಸಿತ್ತು ಈ ರಾಕೆಟ್.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ