Video: ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಛಲ, ಅಜ್ಜಿಯ ಕೈರುಚಿಗೆ ಗ್ರಾಹಕರು ಫಿದಾ
ದುಡಿದು ತಿನ್ನುವ ಮನಸ್ಸಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ. ಇದಕ್ಕೆ ಈ ಅಜ್ಜಿಯೇ ನೈಜ ಉದಾಹರಣೆ. ಬೆಳಗ್ಗೆ 3 ಗಂಟೆಗೆ ಎದ್ದು ತಮ್ಮ ಕೈಯಾರೆ ದೋಸೆ, ಚಪಾತಿ ಸೇರಿದಂತೆ ವಿವಿಧ ಬಗೆಯ ರುಚಿಕರ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿ ತಂದು ಬೀದಿ ಬದಿಯಲ್ಲಿ ನಿಂತು ಗ್ರಾಹಕರಿಗೆ ನೀಡುತ್ತಾರೆ. ಈ ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ದುಡಿದು ತಿನ್ನುವ ಈ ವೃದ್ಧೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಯಸ್ಸು ಏರಿದಾಗಲು ಮಕ್ಕಳ ಮೇಲೆ ಅವಲಂಬಿತರಾಗದೆ ತಮ್ಮ ಕೂಳನ್ನು ತಾವೇ ಸಂಪಾದಿಸಿಕೊಳ್ಳುವ ಹಿರಿಜೀವಗಳು ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ಬಿಡಿಗಾಸು ಸಂಪಾದಿಸುವ ವೃದ್ದರು (elderly people) ಯುವಕ ಯುವತಿಯರಿಗೆ ಮಾದರಿ. ಅಜ್ಜಿಯೊಬ್ಬರು ತಮ್ಮ ಕೈಯಾರೆ ರುಚಿ ರುಚಿಯ ತಿಂಡಿ ತಿನಿಸುಗಳನ್ನು ಮನೆಯಲ್ಲೇ ಮಾಡಿ ತಂದು ಮೈಸೂರಿನ (Mysore) ಬೀದಿಯಲ್ಲಿ ಮಾರಾಟ ಮಾಡಿ ತಮ್ಮ ಕೂಳನ್ನು ತಾವೇ ಸಂಪಾದಿಸಿಕೊಳ್ಳುತ್ತಿದ್ದಾರೆ. 70ರ ಹರೆಯದಲ್ಲೂ ಗ್ರಾಹಕರ ಹೊಟ್ಟೆಯ ಹಸಿವನ್ನು ತಣಿಸುವ ಈ ಅಜ್ಜಿಯ ವಿಡಿಯೋ ವೈರಲ್ ಆಗಿದೆ. ಕಷ್ಟ ಪಟ್ಟು ದುಡಿಯುವ ವೃದ್ಧೆಯ ಪ್ರಾಮಾಣಿಕ ದುಡಿಮೆಗೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಇಟಿಂಗ್ ವಿಥ್ ಗುಂಡ (eatingwithgunda) ಹೆಸರಿನ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅಜ್ಜಿಯೊಬ್ಬರು ಬೀದಿ ಬದಿಯಲ್ಲಿ ನಿಂತುಕೊಂಡು ತಾವೇ ತಯಾರಿಸಿ ದೋಸೆ, ಚಟ್ನಿ, ಚಪಾತಿ, ರೈಸ್ ಬಾತ್ ಹೀಗೆ ರುಚಿಕರ ತಿಂಡಿಗಳನ್ನು ಗ್ರಾಹಕರಿಗೆ ಬಡಿಸುತ್ತಿರುವುದನ್ನು ಕಾಣಬಹುದು. ಗ್ರಾಹಕರು ಅಜ್ಜಿಯ ಕೈ ರುಚಿಗೆ ಫಿದಾ ಆಗಿದ್ದು, ಬಾಯಿ ಚಪ್ಪರಿಸಿಕೊಂಡು ತಿಂಡಿಯನ್ನು ತಿನ್ನುತ್ತಿರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಕುಂದದ ಜೀವನೋತ್ಸಾಹ; 76 ರ ಹರೆಯದಲ್ಲೂ ವಾಚ್ ರಿಪೇರಿ ಮಾಡಿ ನೆಮ್ಮದಿ ಜೀವನ ಸಾಗಿಸುತ್ತಿರುವ ವ್ಯಕ್ತಿ
ಈ ವಿಡಿಯೋ 3.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಅಜ್ಜಿಯ ಪ್ರಾಮಾಣಿಕ ಕೆಲಸಕ್ಕೆ ನನ್ನದೊಂದು ಸಲಾಂ ಎಂದಿದ್ದಾರೆ. ಇನ್ನು ಕೆಲವರು ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ದುಡಿಯುವ ವೃದ್ಧೆಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Fri, 5 December 25




