AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubhanshu Shukla: ಡ್ರ್ಯಾಗನ್ ಕ್ಯಾಪ್ಸುಲ್​ನಿಂದ ಹೊರಬರುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ

Shubhanshu Shukla: ಡ್ರ್ಯಾಗನ್ ಕ್ಯಾಪ್ಸುಲ್​ನಿಂದ ಹೊರಬರುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ

ಸುಷ್ಮಾ ಚಕ್ರೆ
|

Updated on:Jul 15, 2025 | 4:50 PM

Share

ಆಕ್ಸಿಯಮ್ ಸ್ಪೇಸ್‌ನ ಆಕ್ಸ್ -4 ಕಾರ್ಯಕ್ರಮದ ಭಾಗವಾಗಿದ್ದ 18 ದಿನಗಳ ವಿಸ್ತೃತ ಕಾರ್ಯಾಚರಣೆಯ ನಂತರ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಭೂಮಿಗೆ ಮರಳಿದ್ದಾರೆ. ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾರತೀಯ ಕಾಲಮಾನ ಪ್ರಕಾರ ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿರುವ ಇತರ ಮೂವರು ಗಗನಯಾತ್ರಿಗಳೊಂದಿಗೆ ಇಳಿದಿದ್ದಾರೆ. ಇದೀಗ ಅವರನ್ನು ಡ್ರ್ಯಾಗನ್ ಕ್ಯಾಪ್ಸುಲ್​ನಿಂದ ಹೊರಗೆ ಕರೆತರಲಾಗಿದೆ.

ನವದೆಹಲಿ, ಜುಲೈ 15: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ಭೇಟಿ ನೀಡಿದ್ದ ಗ್ರೂಪ್ ಕ್ಯಾಪ್ಟನ್ ಮತ್ತು ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಮೂಲಕ ಆಕ್ಸಿಯಮ್ -4 (Axiom-4) ಕಾರ್ಯಾಚರಣೆ ಯಶಸ್ವಿಯಾಗಿದೆ. ಶುಭಾಂಶು ಶುಕ್ಲಾ 41 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಗಗನಯಾತ್ರಿ ಮತ್ತು ಐಎಸ್‌ಎಸ್‌ಗೆ ಭೇಟಿ ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಹೀಗಾಗಿ, ಇಂದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಇಂದು ಮಧ್ಯಾಹ್ನ ಡ್ರ್ಯಾಗನ್ ಕ್ಯಾಪ್ಸುಲ್ ಸ್ಪ್ಲಾಶ್‌ಡೌನ್ ನಂತರ ಸ್ಪೀಡ್ ಬೋಟ್‌ಗಳಲ್ಲಿ ನಾಸಾ ಸಿಬ್ಬಂದಿ ತೆರಳಿ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಎಳೆದು ಹಿಡಿದುಕೊಂಡವು. ನಂತರ ಇದೀಗ ಕ್ಯಾಪ್ಸುಲ್​ನಿಂದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊರಗೆ ಕರೆತರಲಾಗಿದೆ. ಹೊರಗೆ ಬರುವಾಗಲೇ ನಗುತ್ತಾ ಕ್ಯಾಮೆರಾದತ್ತ ಕೈಬೀಸಿದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಇತರೆ ಮೂವರು ಗಗನಯಾತ್ರಿಗಳಾದ ಪೆಗ್ಗಿ ವಿಟ್ಸನ್ (ಯುಎಸ್ಎ), ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರೊಂದಿಗೆ ಇಂದು ಮಧ್ಯಾಹ್ನ 3ಕ್ಕೆ ಕ್ಯಾಲಿಫೋರ್ನಿಯಾದ ಪೆಸಿಫಿಕ್ ಮಹಾಸಾಗರದಲ್ಲಿ ಭೂಮಿಗೆ ಇಳಿದರು. ನಾಸಾ ಸಿಬ್ಬಂದಿ ಸೋಮವಾರ (ಜುಲೈ 14) ಭಾರತೀಯ ಸಮಯ 4.45ಕ್ಕೆ ಐಎಸ್‌ಎಸ್‌ನ ಹಾರ್ಮನಿ ಮಾಡ್ಯೂಲ್‌ನಿಂದ ಬಾಹ್ಯಾಕಾಶಕ್ಕೆ ಹೋದರು. ಅಲ್ಲಿಂದ ಶುಭಾಂಶು ಸೇರಿದಂತೆ ನಾಲ್ವರು ಗಗನಯಾನಿಗಳು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ “ಗ್ರೇಸ್” ಅನ್ನು ಹತ್ತಿದರು. ಇಂದು ಮಧ್ಯಾಹ್ನ ಅದು ಪೆಸಿಫಿಕ್ ಮಹಾಸಾಗರದೊಳಗೆ ಬಿದ್ದಿತು. ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಕರೆತರಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jul 15, 2025 04:48 PM