B Saroja Devi Passes Away: ಸರೋಜಾದೇವಿಯವರ ಜೊತೆ ನನ್ನದು ನಾಲ್ಕು ದಶಕಗಳ ಒಡನಾಟ: ಡಿಕೆ ಶಿವಕುಮಾರ್
ಹುಟ್ಟು-ಸಾವು ಎರಡೂ ಆಕಸ್ಮಿಕ, ಇವರೆಡರ ನಡುವೆ ನಾವು ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ, ಸರೋಜಾ ದೇವಿಯವರು ಚಲನಚಿತ್ರ ರಂಗಕ್ಕೆ ತಾವು ನೀಡಿದ ಕೊಡುಗೆಯಿಂದ ಎಲ್ಲರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದ ಶಿವಕುಮಾರ್, ಅವರ ಸ್ಮಾರಕ ಇಲ್ಲವೇ ರಸ್ತೆಗೆ ಅವರ ಹೆಸರಿಡುವ ಸಲಹೆಯನ್ನು ಶಾಸಕ ಯೋಗೇಶ್ವರ್ ನೀಡಿದ್ದಾರೆ, ಅದರ ಬಗ್ಗೆ ಯೋಚಿಸಲಾಗುವುದು ಎಂದರು.
ಬೆಂಗಳೂರು ದಕ್ಷಿಣ, ಜುಲೈ 15: ನಿನ್ನೆ ವಿಧಿವಶರಾದ ಹಿರಿಯ ನಟಿ ಬಿ ಸರೋಜಾ ದೇವಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಗಲಿದ ತಾರೆಯನ್ನು ನಮ್ಮೂರ ಮಗಳು ಎಂದು ಹೆಮ್ಮೆಯಿಂದ ಹೇಳಿದರು. ದಕ್ಷಿಣ ಭಾರತದ ಎಲ್ಲ ಪ್ರಮುಖ ಕಲಾವಿದರೊಂದಿಗೆ ನಟಿಸಿ ಚಿಕ್ಕ ವಯಸ್ಸಿನಲ್ಲೇ ಪದ್ಮ ವಿಭೂಷಣ, ಮತ್ತೆರಡು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರ ಗೌರವಗಳೊಂದಿಗೆ ಸನ್ಮಾನಿತರಾಗಿದ್ದ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರೀ ಗೌರವಗಳೊಂದಿಗೆ ನೆರವೇರಿಸಲಾಗಿದೆ ಎಂದು ಅವರು ಹೇಳಿದರು. ಅವರೊಂದಿಗೆ ತನ್ನದು ಸುಮಾರು 4 ದಶಕಕಗಳ ಒಡನಾಟ, ಮೊದಲ ಬಾರಿಗೆ ಸಚಿವನಾಗಿ ಅವರನ್ನು ಭೇಟಿಯಾದಾಗ, ನೀನು ಸಿನಿಮಾದಲ್ಲಿ ಪಾರ್ಟು ಮಾಡಬೇಕು ಕಣೋ ಅಂತ ಹೇಳಿದ್ದರು. ಅಂತ್ಯಕ್ರಿಯೆಗೆ ಅವರು ತಮ್ಮ ಹುಟ್ಟೂರು ದಶಾವರವನ್ನು ಆಯ್ಕೆ ಮಾಡಿಕೊಂಡಿದ್ದು ಬಹಳ ಸಂತೋಷ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ನನಗಿಲ್ಲದ ಚಿಂತೆ ಮತ್ತು ಗಾಬರಿ ಮಾಧ್ಯಮದವರಿಗ್ಯಾಕೆ? ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ