ನನಗಿಲ್ಲದ ಚಿಂತೆ ಮತ್ತು ಗಾಬರಿ ಮಾಧ್ಯಮದವರಿಗ್ಯಾಕೆ? ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಡಿಕೆ ಶಿವಕುಮಾರ್
ಪಕ್ಷದ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಬಗ್ಗೆ ರಂದೀಪ್ ಸುರ್ಜೇವಾಲಾ ಅವರೊಂದಿಗೆ ಚರ್ಚೆಯಾಗಿದೆ, ಅವರಿಗೆ ಸ್ಥಾನಮಾನ ನೀಡುವ ಭರವಸೆ ನೀಡಲಾಗಿತ್ತು, ಶಾಸಕರೆಲ್ಲ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಒಂದು ಹಂತಕ್ಕೆ ಬಂದಿದೆ, ಪ್ರಸ್ತಾವನೆಗಳನ್ನೆಲ್ಲ ಮತ್ತೊಮ್ಮೆ ಹೈಕಮಾಂಡ್ಗೆ ಕಳಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ದೇವನಹಳ್ಳಿ, ಜುಲೈ 11: ಮುಖ್ಯಮಂತ್ರಿ ಸಿದ್ದರಾಮಯ್ಯಕ್ಕಿಂತ ಮೊದಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರ ಮುಖದಲ್ಲಿ ಲವಲವಿಕೆ ಕಾಣಲಿಲ್ಲ, ಸೋತ ಸ್ವರ ಮತ್ತು ವಿಷಾದದ ಧಾಟಿಯಲ್ಲಿ ಮಾತಾಡಿದರು. ಐದು ವರ್ಷಗಳಿಗೆ ನಾನೇ ಸಿಎಂ ಅಂತ ಸಿದ್ದರಾಮಯ್ಯ ಪದೇಪದೆ ಹೇಳುತ್ತಿದ್ದಾರಲ್ಲ ಅಂದಾಗ ಶಿವಕುಮಾರ್, ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೆ ಮುಖ್ಯಮಂತ್ರಿಯವರೇ ಉತ್ತರ ನೀಡಿದ್ದಾರೆ, ಹಾಗಾಗಿ ತಾನೇನೂ ಕಾಮೆಂಟ್ ಮಾಡಲ್ಲ ಎಂದರು. ತನಗಿಲ್ಲದ ಚಿಂತೆ ಮಾಧ್ಯಮದವರಿಗ್ಯಾಕೆ? ತನಗಿಂತ ಹೆಚ್ಚು ಮಾಧ್ಯಮದವರು ಗಾಬರಿಯಾಗಿದ್ದಾರೆ ಎಂದ ಶಿವಕುಮಾರ್ ಮುಖ್ಯಮಂತ್ರಿಯವರು ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯೇ ಇಲ್ಲ ಅಂತ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಶಿವಕುಮಾರ್ ದೆಹಲಿಯಲ್ಲಿದ್ದರೆ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಲ್ಲಿ! ಏನಿದರ ಅರ್ಥ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್: ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು?

ಕುತ್ತಿಗೆಗೆ ಗುಂಡೇಟು, ಪೆಟ್ರೋಲ್ ಬಂಕ್ಗೆ ಬಂದು ಸಹಾಯ ಕೇಳಿದ ಯುವಕ

‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು

PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
