ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲವೆಂದು ಖುದ್ದು ಶಿವಕುಮಾರ್ ಹೇಳಿದ್ದಾರೆ: ಸಿದ್ದರಾಮಯ್ಯ
ಸುರ್ಜೆವಾಲಾ ಅವರೊಂದಿಗೆ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಆಗಿಲ್ಲ, ಖುದ್ದು ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಅಂತ ಹೇಳಿದ್ದಾರೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಶಿವಕುಮಾರ್ ಮತ್ತು ತಾನು ಬದ್ಧರಾಗಿರುತ್ತೇವೆ, ಯಾವುದೇ ಗೊಂದಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ದೆಹಲಿ, ಜುಲೈ 8: ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ತನ್ನನ್ನು ಬದಲಾಯಿಸುವ ಚರ್ಚೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ನಡೆದಿಲ್ಲ, ರಂದೀಪ್ ಸುರ್ಜೇವಾಲಾ (Randeep Surjewala) ಬೆಂಗಳೂರಿಗೆ ಬಂದು ಶಾಸಕರೊಂದಿಗೆ ಮಾತಾಡಿದ್ದಕ್ಕೆ ಮಾಧ್ಯಮಗಳು ಊಹಾಪೋಹಗಳನ್ನು ಸೃಷ್ಟಿಸಿದರೆ ಯಾರೇನೂ ಮಾಡಲಾಗದು ಎಂದು ಹೇಳಿದರು. ದೆಹಲಿಗೆ ಬಂದಿರುವುದರಿಂದ ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದಿತ್ತು, ಅವರೇನೂ ಅಪಾಯಿಂಟ್ಮೆಂಟ್ ಕೊಟ್ಟಿರಲಿಲ್ಲ, ಪಾಟ್ನಾಗೆ ಹೋಗಿದ್ದಾರಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ದೆಹಲಿಯಲ್ಲಿಲ್ಲ, ಬೆಂಗಳೂರು ಹೋಗಿದ್ದಾರೆ, ಅವರು ನಮ್ಮ ನಾಯಕರು, ದೆಹಲಿಗೆ ಬಂದಾಗ ಅವರನ್ನು ಬೇಟಿಯಾಗದೆ ಮತ್ಯಾರನ್ನು ಭೇಟಿಯಾಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. 2023 ರಲ್ಲಿ ಕಾಂಗ್ರೆಸ್ ಹೇಗೆ ಚುನಾವಣೆಯಲ್ಲಿ ಹೋರಾಡಿತೋ 2028ರಲ್ಲೂ ಅದೇ ರಣನೀತಿಯೊಂದಿಗೆ ಕಣಕ್ಕಿಳಿಯುತ್ತೇವೆ ಅಂತ ಹೇಳುವ ಮೂಲಕ 2028ರಲ್ಲಿ ಕಾಂಗ್ರೆಸ್ ಏನಾದರೂ ಬಹುಮತ ಪಡೆದರೆ ಪುನಃ ತಾನೇ ಸಿಎಂ ಅನ್ನೋದನ್ನು ಪರೋಕ್ಷವಾಗಿ ಹೇಳಿದರೇ?
ಇದನ್ನೂ ಓದಿ: ಸಿದ್ದರಾಮಯ್ಯ, ಶಿವಕುಮಾರ್ ದೆಹಲಿಯಲ್ಲಿದ್ದರೆ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಲ್ಲಿ! ಏನಿದರ ಅರ್ಥ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ