ಸಿದ್ದರಾಮಯ್ಯ, ಶಿವಕುಮಾರ್ ದೆಹಲಿಯಲ್ಲಿದ್ದರೆ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಲ್ಲಿ! ಏನಿದರ ಅರ್ಥ?
ಟಿವಿ9 ದೆಹಲಿ ವರದಿಗಾರ ಹೇಳುವ ಹಾಗೆ ಇವತ್ತು ಸಾಯಂಕಾಲ ರಂದೀಪ್ ಸುರ್ಜೆವಾಲಾ ದೆಹಲಿ ತಲುಪುವುದರಿಂದ ಸಾಯಂಕಾಲ ರಾಹುಲ್ ಜೊತೆ ಮತ್ತೊಂದು ಸಭೆ ಇದೆ. ನಿಗಮ, ಮಂಡಳಿಗಳ ಅಧ್ಯಕ್ಷರ ಆಯ್ಕೆ ಮತ್ತು ನಾಲ್ಕು ಎಮ್ಮೆಲ್ಸಿ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಸಭೆಯಲ್ಲಿ ಅಂತಿಮಗೊಳಿಸಬಹುದು. ಸಿಎಂ, ಡಿಸಿಎಂ, ಸುರ್ಜೇವಾಲಾ ಮತ್ತು ರಾಹುಲ್ ಗಾಂಧಿ ನಡೆಯಲಿರುವ ಸಭೆ ಕೂತೂಹಲವನ್ನಂತೂ ಸೃಷ್ಟಿಸಿದೆ.
ಬೆಂಗಳೂರು, ಜುಲೈ 10: ರಾಜ್ಯ ಕಾಂಗ್ರೆಸ್ ವಲಯ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ (Siddaramaiah government) ಏನು ನಡೆಯುತ್ತಿದೆ ಅಂತ ಊಹಿಸುವುದು ಕಷ್ಟವಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೂರು ದಿನಗಳಿಂದ ದೆಹಲಿಯಲ್ಲಿ ಕ್ಯಾಂಪ್ ಹೂಡಿದ್ದರೆ ಸಿಎಂ ಸಿದ್ದರಾಮಯ್ಯ ನಿನ್ನೆ ಹೋಗಿದ್ದಾರೆ. ಸಿಎಂ ಬದಲಾವಣೆ ವಿಷಯದ ಚರ್ಚೆ ಜೋರು ಹಿಡಿಯುತ್ತಿರುವಂತೆಯೇ ಸದ್ಯಕ್ಕೆ ದೆಹಲಿಯಲ್ಲಿರಬೇಕಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಿದ್ದಾರೆ. ಇವತ್ತು ಮಧ್ಯಾಹ್ನ ಸಿಎಂ ಮತ್ತು ಡಿಸಿಎಂ ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ. ಅಧಿಕಾರ ಹಂಚಿಕೆ ವಿಷಯದಲ್ಲಿ ನಡೆಯುತ್ತಿರುವ ಚರ್ಚೆ ನಿಜವೇ ಆಗಿದ್ದರೆ, ಖರ್ಗೆ ಅನಿಸಿಕೆ ಮತ್ತು ಅಭಿಪ್ರಾಯ ಮುಖ್ಯವಾಗಲ್ಲವೇ? ರಾಹುಲ್ ಗಾಂಧಿಯೇ ನಿರ್ಣಯ ತೆಗೆದುಕೊಳ್ಳುತ್ತಾರೆಯೇ? ಅಥವಾ ಮುಖ್ಯಮಂತ್ರಿ ಬದಲಾವಣೆಯ ಮಾತು ಬರೀ ಊಹಾಪೋಹವೇ?
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ; ಊಹಾಪೋಹಗಳನ್ನು ಮಾಧ್ಯಮಗಳಲ್ಲಿ ಮಾತ್ರ ಕೇಳುತ್ತಿದ್ದೇನೆ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

